ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಪೀಕ್ ಸಮಯದಲ್ಲಿ ಉಂಟಾಗುವ ಭೀಕರ ಸಂಚಾರ ತಡೆ ಉಂಟಾಗುತ್ತಿದೆ. ಹೀಗಾಗಿ ನಿಮ್ಮ ವಿಪ್ರೊ ಕ್ಯಾಂಪಸ್‌ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿಗೆ ಮನವಿ ಮಾಡಿದ್ದರು.
ಇಬ್ಲೂರು ಜಂಕ್ಷನ್ ಪ್ರದೇಶದಲ್ಲಿ ಪೀಕ್ ಗಂಟೆಗಳಲ್ಲಿ ಎದುರಾಗುವ ಭೀಕರ ಸಂಚಾರ ತಡೆ, ನಗರದ ಚಲನಶೀಲತೆ ಉತ್ಪಾದಕತೆ ಮತ್ತು ಜೀವನದ ಗುಣಮಟ್ಟದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ. ಈ ತುರ್ತು ಪರಿಸ್ಥಿತಿಯನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 19 ರಂದು ಅಜೀಂ ಪ್ರೇಮ್ಜಿ ಅವರಿಗೆ ಒಂದು ಔಪಚಾರಿಕ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಸಿದ್ದರಾಮಯ್ಯ ಅವರು ವಿಪ್ರೋವಿನ ಕರ್ನಾಟಕದ ಐಟಿ ಪರಿಸರ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪ್ರಾಮಾಣಿಕವಾಗಿ ಪ್ರಶಂಸಿಸಿದ್ದಾರೆ. ನಗರದ ಪ್ರಮುಖ ಸವಾಲುಗಳಲ್ಲಿ ಒಂದಾಗಿರುವ ಸಂಚಾರ ತಡೆಯನ್ನು ಪರಿಹರಿಸಲು ವಿಪ್ರೋದ ಸಹಕಾರವನ್ನು ಅಪೇಕ್ಷಿಸುತ್ತಾ, “ಪರಸ್ಪರ ಒಪ್ಪಿದ ನಿಯಮಗಳು ಮತ್ತು ಅಗತ್ಯ ಭದ್ರತಾ ಪರಿಗಣನೆಗಳಿಗೆ ಒಳಪಟ್ಟು” ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಮನವಿ ಮಾಡಿದ್ದಾರೆ.
ಸಂಚಾರ ತಜ್ಞರ ಪ್ರಾಥಮಿಕ ಮೌಲ್ಯಮಾಪನಗಳು ಸೂಚಿಸುವ ಪ್ರಕಾರ, ಪೀಕ್ ಕಚೇರಿ ಸಮಯದಲ್ಲಿ ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅನುಮತಿ ನೀಡಿದರೆ, ORRನ ಪಕ್ಕದ ಪ್ರದೇಶಗಳಲ್ಲಿ ಸುಮಾರು 30% ರಷ್ಟು ಸಂಚಾರ ತಡೆ ಕಡಿಮೆಗೊಳಿಸಬಹುದೆಂದು ಅಂದಾಜಿಸಲಾಗಿದೆ . ನಿಮ್ಮ ತಂಡವು ನಮ್ಮ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪರಸ್ಪರ ಸ್ವೀಕಾರಾರ್ಹವಾದ ಯೋಜನೆಯನ್ನ ಆದಷ್ಟು ಬೇಗ ರೂಪಿಸಲು ನಾನು ಕೃತಜ್ಞನಾಗಿದ್ದೇನೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.