ಐಸಿಸಿ U-19 ವಿಶ್ವಕಪ್‌ ಗೆದ್ದ ಭಾರತ: ಚಾಂಪಿಯನ್ಸ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

Untitled design 2026 02 06T230301.813

ಬೆಂಗಳೂರು: ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ಭಾರತದ ಅಂಡರ್-19 ತಂಡ ಮತ್ತೊಮ್ಮೆ ಅಧಿಪತ್ಯ ಸ್ಥಾಪಿಸಿದೆ. ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ, ಆರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವೈಭವ್ ಸೂರ್ಯವಂಶಿ ದಾಖಲೆಯ ಆಟಕ್ಕೆ ಪ್ರಶಂಸೆ

ಕೇವಲ 80 ಎಸೆತಗಳಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್ ನೆರವಿನಿಂದ 175 ರನ್ ಚಚ್ಚಿದ ವೈಭವ್ ಪ್ರದರ್ಶನವನ್ನು ಒಂದು ಪೀಳಿಗೆಗೆ ಸ್ಫೂರ್ತಿ ನೀಡುವ ಅಸಾಧಾರಣ ಇನ್ನಿಂಗ್ಸ್ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಹರಾರೆಯಲ್ಲಿ ನಡೆದ ಹೈವೋಲ್ಟೇಜ್ ಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, ವೈಭವ್ ಸೂರ್ಯವಂಶಿ ಅವರ ಬಿರುಗಾಳಿಯಂತಹ ಇನ್ನಿಂಗ್ಸ್‌ನಿಂದಾಗಿ ಬೃಹತ್ ಮೊತ್ತ ಪೇರಿಸಿತ್ತು. 412 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ತತ್ತರಿಸಿ 100 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಭಾರತ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (6) ಪ್ರಶಸ್ತಿ ಗೆದ್ದ ತಂಡ ಎಂಬ ದಾಖಲೆ ಸೃಷ್ಟಿಸಿದೆ.

6ನೇ ಬಾರಿ ಅಂಡರ್-19 ವಿಶ್ವಕಪ್ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ

ಹರಾರೆ: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಅಂಡರ್-19 ವಿಶ್ವಕಪ್ 2026ರ ಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 100 ರನ್‌ಗಳ ಭರ್ಜರಿ ಅಂತರದಿಂದ ಸೋಲಿಸಿ, 6ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ವೈಭವ್ ಸೂರ್ಯವಂಶಿಯನ್ನ ಕಂಡು ಇಂಗ್ಲೈಂಡ್‌ ತಂಡ ಅಚ್ಚರಿಗೊಂಡಿದೆ. ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿದ ವೈಭವ್, ಇಂಗ್ಲೆಂಡ್ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾದರು. ಅವರ ಈ ಸುನಾಮಿ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಆಸ್ಟ್ರೇಲಿಯಾದ ಆಲಿವರ್ ಡೇವಿಸ್ (ಈ ಹಿಂದೆ ಮಿಚೆಲ್ ಹಿಲ್ ಎಂದು ತಪ್ಪಾಗಿ ಉಲ್ಲೇಖಿಸಲಾಗಿತ್ತು) ಹೆಸರಲ್ಲಿದ್ದ 12 ಸಿಕ್ಸರ್‌ಗಳ ದಾಖಲೆಯನ್ನು ಮುರಿದು, ಅಂಡರ್-19 ವಿಶ್ವಕಪ್ ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

ವೈಭವ್ ಸೂರ್ಯವಂಶಿ 175 ರನ್ ಸಿಡಿಸಿದ್ದರೆ, ನಾಯಕ ಆಯುಷ್ ಮರಾಠೆ 53ರನ್, ವೇದಾಂತ್ ತ್ರಿವೇದಿ 32, ವಿಹಾನ್ ಮಲ್ಹೋತ್ರ 30, ಅಭಿಗ್ಯಾನ್ ಕುಂಡು 40, ಕಾನಿಷ್ಕ್ ಚೌವ್ಹಾನ್ 37 ರನ್ ನೆರವಿನಿಂದ ಭಾರತ ಭಾರತ 9 ವಿಕೆಟ್ ಕಳೆದುಕೊಂಡು 411 ರನ್ ಸಿಡಿಸಿತು. ಇದು ಅಂಡರ್ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದ ಗರಿಷ್ಠ ಮೊತ್ತಗಳ ದಾಖಲೆ ಪಟ್ಟಿಯಲ್ಲಿ ಸೇರಿಕೊಂಡಿದೆ.

ಬ್ಯಾಟಿಂಗ್ ಫ್ರೆಂಡ್ಲಿ ಹರಾರೆ ಪಿಚ್‌ನಲ್ಲಿ ಇಂಗ್ಲೆಂಡ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಬೆನ್ ಡಾಕಿನ್ಸ್ 66 ರನ್, ಬೆನ್ ಮೇಯ್ಸ್ 45, ಥಾಮಸ್ ರಿಯೂ 31 ರನ್ ಕಾಣಿಕೆ ನೀಡಿದರು. ಇತ್ತ ಸೆಲೆಬ್ ಫಾಲ್ಕೋನರ್ ಭಾರತೀಯ ಬೌಲರ್‌ಗಳಿಗೆ ತಲೆನೋವಾಗಿದ್ದರು. ಸಿಕ್ಸರ್ ಮೂಲಕವೇ ಅಬ್ಬರಿಸಿದ್ದರು. ಫಾಲ್ಕೋನರ್ 115 ರನ್ ಸಿಡಿಸಿ ಔಟಾಗೋ ಮೂಲಕ ಇಂಗ್ಲೆಂಡ್ 311 ರನ್‌ಗೆ ಆಲೌಟ್ ಆಯಿತು. 

ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಅಜೇಯವಾಗಿ ಟೂರ್ನಿಯನ್ನು ಮುಗಿಸಿದೆ. ಟೂರ್ನಿಯ 7 ಇನ್ನಿಂಗ್ಸ್‌ಗಳಲ್ಲಿ ಒಟ್ಟು 439 ರನ್ ಗಳಿಸಿದ ವೈಭವ್ ಸೂರ್ಯವಂಶಿ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದ ಈ 175 ರನ್ ಸೂರ್ಯವಂಶಿಯನ್ನು ಜಾಗತಿಕ ಕ್ರಿಕೆಟ್‌ನ ಮುಂದಿನ ಸೂಪರ್ ಸ್ಟಾರ್ ಆಗಿ ಬಿಂಬಿಸಿದೆ.

Exit mobile version