BMW, ಬೆನ್ಜ್, ಆಡಿ, ರೋಲ್ಸ್ ರಾಯ್ಸ್‌ನೊಂದಿಗೆ ಸಿ.ಜೆ. ರಾಯ್ ಅಂತಿಮ ಯಾತ್ರೆ

BeFunky collage 2026 02 01T161400.976

ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರ ಅಂತಿಮ ಯಾತ್ರೆ ಭಾನುವಾರ (ಫೆಬ್ರವರಿ 1, 2026) ಭಾವುಕತೆಯಿಂದ ನಡೆಯಿತು. ರಾಯ್ ಅವರು ಇಷ್ಟಪಡುತ್ತಿದ್ದ ಐಷಾರಾಮಿ ಕಾರುಗಳಾದ BMW, ಮರ್ಸಿಡಿಸ್ ಬೆನ್ಜ್, ಆಡಿ ಮತ್ತು ರೋಲ್ಸ್ ರಾಯ್ಸ್‌ಗಳೊಂದಿಗೆ ಅಂತಿಮ ಯಾನ ನಡೆಯಿತು. ಈ ಯಾತ್ರೆ ಬನ್ನೇರುಘಟ್ಟದ ಕಡೆಗೆ ಸಾಗಿತು.

ರಾಯ್ ಅವರ ಅಂತಿಮ ದರ್ಶನವನ್ನು ನೇಚರ್ಸ್ ಲಕ್ಸುರಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ  ನೀಡಿದರು. ನಂತರ ಸಂತ್ ಜೋಸೆಫ್ ಚರ್ಚ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ. ಅಂತ್ಯ ಸಂಸ್ಕಾರವನ್ನು ಬನ್ನೇರುಘಟ್ಟದ ಕಾನ್ಫಿಡೆಂಟ್ ಕ್ಯಾಸ್ಕೇಡ್‌ನಲ್ಲಿ ರಿಸಾರ್ಟ್ ಪ್ರದೇಶದಲ್ಲಿ ಅಂತ್ಯಕ್ರಿಯೆ , ಇದು ರಾಯ್ ಅವರ ವೈಯಕ್ತಿಕ ಇಚ್ಛೆಯಂತೆಯೇ ಆಯೋಜಿಸಲಾಗಿತ್ತು.

ಅಂತಿಮ ದರ್ಶನದ ವೇಳೆ ರಾಯ್ ಅವರ ಪತ್ನಿ ಮತ್ತು ಮಕ್ಕಳು ಗೋಳಾಡಿದರು. ವಿಶೇಷವಾಗಿ ರಾಯ್ ಅವರ ಮಗ ಪಾರ್ಥಿವ ಶರೀರವನ್ನು ನೋಡಿ ಬಿಕ್ಕಿಬಿಕ್ಕಿ ಅತ್ತನು. ರಾಯ್ ಅವರ ತಾಯಿ ವೀಲ್‌ಚೇರ್‌ನಲ್ಲಿ ಬಂದು ಮಗನ ಅಂತಿಮ ದರ್ಶನ ಪಡೆದರು.  ಈ ದೃಶ್ಯ ಹಲವರ ಹೃದಯವನ್ನು ಕಲಕಿತು. ಕುಟುಂಬಸ್ಥರು, ಸ್ನೇಹಿತರು, ಉದ್ಯಮಿಗಳು ಮತ್ತು ಅಭಿಮಾನಿಗಳ ಜೊತೆಗೆ ಭಾವುಕ ವಿದಾಯ.

ರಾಯ್ ಅವರ ಜೀವನ ಮತ್ತು ಪರಂಪರೆ
ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ರಾಯ್ ಅವರು ಕರ್ನಾಟಕ, ಕೇರಳ, ದುಬೈ ಮತ್ತು ಅಮೆರಿಕದಲ್ಲಿ ವ್ಯಾಪಾರ ವಿಸ್ತರಿಸಿದ್ದರು. ಅವರ ಆಕಸ್ಮಿಕ ನಿಧನವು ಉದ್ಯಮ ವಲಯದಲ್ಲಿ ಆಘಾತ ಮೂಡಿಸಿದೆ. ಅಂತಿಮ ಯಾತ್ರೆಯಲ್ಲಿ ಅವರ ಐಷಾರಾಮಿ ಜೀವನಶೈಲಿಯನ್ನು ಪ್ರತಿಬಿಂಬಿಸುವಂತೆ ಐಷಾರಾಮಿ ವಾಹನಗಳ ಜೊತೆಗೆ ಯಾತ್ರೆ ನಡೆದಿದ್ದು, ಅವರ ವ್ಯಕ್ತಿತ್ವವನ್ನು ಗುರುತಿಸುವಂತಿತ್ತು.

ಕಾನ್ಫಿಡೆಂಟ್ ಗ್ರೂಪ್ ಮತ್ತು ಕುಟುಂಬದ ಸದಸ್ಯರು ಈ ದುಃಖದ ಸಮಯದಲ್ಲಿ ಎಲ್ಲರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.

Exit mobile version