ಪ್ರಿಯಕರ ಬೇರೊಬ್ಬಳ ಜೊತೆ ಮಾತನಾಡಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ

ಪ್ರಿಯಕರ ಬೇರೊಬ್ಬಳ ಜೊತೆ ಮಾತನಾಡಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ

Chikkaballapura suicide

ಚಿಕ್ಕಬಳ್ಳಾಪುರ: ಪ್ರಿಯಕರ ಬೇರೊಬ್ಬ ಯುವತಿ ಜೊತೆ ಮಾತನಾಡಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿಯಲ್ಲಿ ನಡೆದಿದೆ. ಸಾದೇನಹಳ್ಳಿ ಗ್ರಾಮದ ಸುಚಿತ್ರಾ (17) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಗ್ರಾಮದ ನಿವಾಸಿಯಾದ ಆದರ್ಶ್ ಎಂಬ ಯುವಕನನ್ನು ಸುಚಿತ್ರಾ ಪ್ರೀತಿಸುತ್ತಿದ್ದರು. ಆದರೆ, ಆದರ್ಶ್ ಬೇರೆ ಯುವತಿಯೊಂದಿಗೆ ಮಾತನಾಡುತ್ತಿದ್ದ ವಿಚಾರವಾಗಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ. ನಿನ್ನೆ ನಡೆದ ಜಗಳದ ನಂತರ, ಇಂದು ಬೆಳಿಗ್ಗೆ ಸುಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇನ್ನು ಮಂಚೇನಹಳ್ಳಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Exit mobile version