ಬೆಂಗಳೂರು, ಅಕ್ಟೋಬರ್ 31: ತಮ್ಮ ತಂಡವನ್ನು ತೊರೆದು ಬೇರೆ ತಂಡಕ್ಕೆ ಹೋಗಿದ್ದಕದಕೆ ತಲೆ ಬೋಳಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವಿರಾಟ್ ನಗರದಲ್ಲಿ ನಡೆದಿದೆ.
ಪ್ರೀತಿ ಮತ್ತು ಚಿನ್ನಿ ನೇತೃತ್ವದ ಮಂಗಳಮುಖಿಯರ ಗುಂಪು, ಸುಕನ್ಯಾ (ಹೆಸರು ಬದಲಿಸಲಾಗಿದೆ) ತಮ್ಮ ತಂಡವನ್ನು ತೊರೆದು ಬೇರೆ ತಂಡದೊಂದಿಗೆ ಸೇರಿದ್ದಕ್ಕಾಗಿ ಮುಂಚೆ ಇದ್ದ ತಂಡದವರು ಕೋಪಗೊಂಡಿತ್ತು. ಹೀಗಾಗಿ ತೀವ್ರ ಕೋಪಗೊಂಡಿದ್ದ ಅವರು ಸುಕನ್ಯಾಳನ್ನು ಕೆ.ಆರ್. ಪುರದಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಬೊಮ್ಮನಹಳ್ಳಿ ವಿರಾಟ್ ನಗರಕ್ಕೆ ಕರೆದುಕೊಂಡು ಹೋದರು.
ಸುಕನ್ಯಾ ಕೈಮುಗಿದು ಕ್ಷಮೆ ಯಾಚಿಸಿದರೂ ಸಹ, ಗ್ಯಾಂಗ್ ಸದಸ್ಯರು ಅವರ ಮೇಲೆ ಹಿಟ್ಟಿನ ದೊಣ್ಣೆ, ಸೌಟು ಮತ್ತು ಕೈಗೆ ಸಿಕ್ಕ ಇತರ ವಸ್ತುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಜೊತೆಗೆ ಅವರ ತಲೆ ಕೇಶವನ್ನು ಬೋಳಿಸಿ ಅವಮಾನಿಸಿದ್ದಾರೆ. ಜೊತೆಗೆ ಈ ಘಟನೆನ್ನ ಬೇರೆಯವರಿಗೆ ವಿಡೆಯೋ ಕಾಲ್ ಮಾಡಿ ತೋರಿಸಿದ್ದಾರೆ. ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಂತರ ಬೊಮ್ಮನಹಳ್ಳಿ ಪೊಲೀಸ್ ತುರ್ತು ಕ್ರಮ ಕೈಗೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ಸೊಮೋಟೋ ಕೇಸ್ ನೋಂದಣಿ ಮಾಡಿ, ಘಟನೆಯಲ್ಲಿ ಭಾಗವಹಿಸಿದ 7 ಮಂಗಳಮುಖಿಯರನ್ನು ಬಂಧಿಸಿದ್ದಾರೆ.
 
			
 
					




 
                             
                             
                            