ಕರ್ನಾಟಕದ ಮಾಧ್ಯಮ ಲೋಕದಲ್ಲಿ ಹೊಸ ಯುಗವನ್ನು ರೂಪಿಸುತ್ತಿರುವ ಗ್ಯಾರಂಟಿ ನ್ಯೂಸ್, ಇದೀಗ ಸ್ಯಾಟಲೈಟ್ ವಾಹಿನಿಯಾಗಿ ರಾಜ್ಯದಾದ್ಯಂತ ಲಭ್ಯವಾಗಿದೆ. ಡಿಜಿಟಲ್ ಮೂಲಕ ಯೂಟ್ಯೂಬ್, ಫೇಸ್ಬುಕ್ ಮತ್ತು ವೆಬ್‌ಸೈಟ್ ಮೂಲಕ ಈಗಾಗಲೇ ಮನೆಮಾತಾಗಿತ್ತು . ಕನ್ನಡಿಗರಿಗೆ ನೈಜ, ತರ್ಕಬದ್ಧ ಮತ್ತು ಮೌಲ್ಯಯುತ ಸುದ್ದಿಗಳನ್ನು ತಲುಪಿಸುವ ಧ್ಯೇಯದೊಂದಿಗೆ ಈ ವಾಹಿನಿಯನ್ನು ಡಾ. ಜಿ. ಪರಮೇಶ್ವರ್ ಮತ್ತು ನಟ ರಾಘವೇಂದ್ರ ರಾಜ್ಕುಮಾರ್ ಅವರು ಲಾಂಚ್ ಮಾಡಿದ್ದರು . ಗ್ಯಾರಂಟಿ ನ್ಯೂಸ್ ಡಿಜಿಟಲ್ ಪ್ರಸಾರದ ಮೂಲಕ ಲಕ್ಷಾಂತರ ಪ್ರೇಕ್ಷಕರನ್ನು ಸಂಪರ್ಕಿಸಿತು. ವಿಶೇಷ ಸಂದರ್ಶನಗಳು, ಲೈವ್ ಪ್ರಸಾರಗಳು ಮತ್ತು ಸುದ್ದಿ ವಿಶ್ಲೇಷಣೆಗಳ ಮೂಲಕ ವಿಶ್ವಾಸ ಗಳಿಸಿದ ಇವರು, ಸ್ಯಾಟಲೈಟ್ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚು ಜನರನ್ನು ತಲುಪಲು ಸಿದ್ಧರಾಗಿದ್ದಾರೆ .
ಗ್ಯಾರಂಟಿ ನ್ಯೂಸ್ನ ಸ್ಯಾಟಲೈಟ್ ವಾಹಿನಿಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲಿಸ್ಟ್ ತ್ರಿವಿಕ್ರಮ್ ಲಮಾಣಿ ಶುಭಾಶಯ ಕೋರಿದರು. ಬಿಗ್ ಬಾಸ್ ಕನ್ನಡ ಸೀಸನ್ 9ರ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಗ್ಯಾರಂಟಿ ನ್ಯೂಸ್ ಕಚೇರಿಗೆ ಭೇಟಿ ನೀಡಿ ಶುಭಾಶಯಗಳನ್ನು ಹಂಚಿದ್ದಾರೆ.ತ್ರಿವಿಕ್ರಮ್ ಅವರು ತಮ್ಮ ಸಂದರ್ಶನದಲ್ಲಿ, “ಕನ್ನಡ ಮಾಧ್ಯಮದ ಗುಣಮಟ್ಟವನ್ನು ಹೆಚ್ಚಿಸುವ ಈ ಪ್ರಯತ್ನ ಅಭಿನಂದನೀಯ” ಎಂದು ಪ್ರಶಂಸಿಸಿದರೆ, ರೂಪೇಶ್ ರಾಜಣ್ಣ ಅವರು “ಗ್ಯಾರಂಟಿ ನ್ಯೂಸ್ ಸಾಕ್ಷರತೆ ಮತ್ತು ಸಾಮಾಜಿಕ ಬದಲಾವಣೆಗೆ ಕೊಡುಗೆ ನೀಡಲಿ” ಎಂದು ಕೋರಿದರು. ಹಿರಿಯ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ‘ಬಿಗ್ ಬಾಸ್’ ಶೋ ಮೂಲಕ ಹೆಚ್ಚು ಜನಪ್ರಿಯರಾದರು ಅವರು ಗ್ಯಾರಂಟಿ ನ್ಯೂಸ್ನ ಸ್ಯಾಟಲೈಟ್ ವಾಹಿನಿಗೆ ಶುಭಾಶಯ ಹಾರೈಸಿದರು.
ಗ್ಯಾರಂಟಿ ನ್ಯೂಸ್ನ ಸ್ಯಾಟಲೈಟ್ ಪ್ರಸಾರವು ಕೇವಲ ತಾಂತ್ರಿಕ ಹೆಜ್ಜೆಯಲ್ಲ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವ ಪ್ರಯತ್ನ. ರಾಜಕೀಯ, ಮನೋರಂಜನೆ, ಕ್ರೀಡೆ, ಸ್ಯಾಂಡಲ್ವುಡ್, ಮತ್ತು ವ್ಯವಹಾರ ಸೇರಿದಂತೆ ಎಲ್ಲಾ ರೀತಿಯ ಸುದ್ದಿಗಳನ್ನು 24×7 ಪ್ರಸಾರಮಾಡುವ ಇವರು, ಸ್ಥಳೀಯ ಸಮಸ್ಯೆಗಳಿಂದ ಹಿಡಿದು ರಾಷ್ಟ್ರೀಯ ಮಟ್ಟದ ವಿಷಯಗಳವರೆಗೆ ಸಮಗ್ರ ವಿಶ್ಲೇಷಣೆ ನೀಡುತ್ತಾರೆ .
ಡಿಜಿಟಲ್ ಯುಗದ ಸವಾಲುಗಳನ್ನು ಧೈರ್ಯದಿಂದ ಎದುರಿಸಿದ ಗ್ಯಾರಂಟಿ ನ್ಯೂಸ್, ಸ್ಯಾಟಲೈಟ್ ಮೂಲಕ ತನ್ನ ಪರಿವರ್ತನೆಯನ್ನು ಪೂರ್ಣಗೊಳಿಸಿದೆ. “ಕರ್ನಾಟಕದ ಜನತೆ ನಮ್ಮನ್ನು ಮೆಚ್ಚುವಂತೆ ಕೆಲಸ ಮಾಡುತ್ತೇವೆ” ಎಂಬ ಅವರ ಮಾತಿನಂತೆ, ಈ ವಾಹಿನಿ ಸುದ್ದಿ ವಿತರಣೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಕನ್ನಡದ ಹೆಮ್ಮೆಯಾಗಲಿದೆ .