ಬೀದರ್: ಚೆಂಡು ಹೂ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಸಸ್ಯಗಳನ್ನು ಬೆಳೆಸಿದ ಆರೋಪದ ಮೇಲೆ ಬೀದರ್ ಜಿಲ್ಲೆಯ ರೈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಸಂಬಂಧಿತ ಆರೋಪಿ ರೈತ ಸಂತೋಷ್ (ರೈತ ಸಂತೋಷ್), ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಸಾವಳಿ ಗ್ರಾಮದ ನಿವಾಸಿ. ಸಾವಳಿ ಗ್ರಾಮದ ಸರ್ವೆ ನಂಬರ್ 18/2 ರಲ್ಲಿರುವ ಅವನ ಜಮೀನಿನಲ್ಲಿ ಈ ಅಕ್ರಮ ಬೆಳೆ ನಡೆಸಲಾಗಿತ್ತು.
ಪೊಲೀಸರು ಪಡೆದ ಗುಪ್ತ ಮಾಹಿತಿಯ ಆಧಾರದ ಮೇಲೆ, ಶನಿವಾರ ದಾಳಿ ನಡೆಸಿದರು. ದಾಳಿಯ ಸಮಯದಲ್ಲಿ, ಚೆಂಡು ಹೂಗಳ ಗಿಡಗಳ ನಡುವೆ ಅಡಗಿಸಿ ಬೆಳೆಸಲಾಗಿದ್ದ ಗಾಂಜಾ ಸಸ್ಯಗಳು ಪತ್ತೆಯಾಗಿವೆ. ಒಟ್ಟು 51 ಗಾಂಜಾ ಗಿಡಗಳನ್ನು ಪೊಲೀಸರು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಒಟ್ಟು 15 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಳಿಸರು ತಿಳಿಸಿದ್ದಾರೆ.
ಆರೋಪಿ ರೈತ ಸಂತೋಷ್ ಅನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು, ಕಮಲನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧವಾಗಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.