ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ: ವಿದ್ಯುತ್ ಮೀಟರ್ ದರ ಏರಿಕೆ

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ: ವಿದ್ಯುತ್ ಮೀಟರ್ ದರ ಏರಿಕೆ

Untitled Design 2025 03 05t093945.422

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅನ್ನು ಕಡ್ಡಾಯಗೊಳಿಸಿದ್ದು, ಇದರಿಂದ ಗ್ರಾಹಕರಿಗೆ ಮೀಟರ್ ದರಗಳಲ್ಲಿ 400% ರಿಂದ 800% ರಷ್ಟು ಏರಿಕೆ ಮಾಡಿ ಶಾಕ್‌ ನೀಡಿದೆ. ಜನವರಿ 15ರಿಂದ ಜಾರಿಗೆ ಬಂದ ಈ ನಿಯಮಗಳು ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳಿಗೆ ಅನ್ವಯವಾಗುತ್ತವೆ.

ಸ್ಮಾರ್ಟ್ ಮೀಟರ್ ದರಗಳಲ್ಲಿ ಅಧಿಕ ಏರಿಕೆ

ಹೊಸ ಕಾಯಂ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿದ್ದು, ಗ್ರಾಹಕರು ಪ್ರಿಪೇಯ್ಡ್ ಅಥವಾ ಪೋಸ್ಟ್ಪೇಯ್ಡ್ ಆಯ್ಕೆ ಮಾಡಬಹುದು. ಆದರೆ, ತಾತ್ಕಾಲಿಕ ಸಂಪರ್ಕಗಳಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಮಾತ್ರ ಬಳಸಲು ಬಡ್ಡಿ ಹಾಕಲಾಗಿದೆ.

ಪ್ರಿಪೇಯ್ಡ್ ವ್ಯವಸ್ಥೆ: ನಿರಂತರ ರಿಚಾರ್ಜ್ 
ಮಾಸಿಕ 300 ರೂ. ನಿರ್ವಹಣಾ ಶುಲ್ಕದ ಹೊರೆ

ಸ್ಮಾರ್ಟ್ ಮೀಟರ್ ನಿರ್ವಹಣೆಗೆ ಬೆಸ್ಕಾಂ ಎಎಂಐ (ಅಡ್ವಾನ್ಸ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್) ಸಾಫ್ಟ್ವೇರ್ ಗುತ್ತಿಗೆದಾರರನ್ನು ನೇಮಿಸಿದೆ. ಇದರಿಂದ ಪ್ರತಿ ಮೀಟರ್‌ಗೆ ಮಾಸಿಕ 300ರೂ. ನಿರ್ವಹಣಾ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗಿದೆ. “ಇದು ಹೊಸ ಆರ್ಥಿಕ ಹೊರೆಯನ್ನು ಸೃಷ್ಟಿಸಿದೆ ಎಂದು ಕರ್ನಾಟಕ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ರಮೇಶ್ ಟೀಕಿಸಿದ್ದಾರೆ.

ಯೋಜನೆಯ ಸಮಸ್ಯೆಗಳು

ಕೇಂದ್ರ ಸರ್ಕಾರದ 2019ರ ವಿದ್ಯುತ್ ನೀತಿ ಪ್ರಕಾರ ಎಲ್ಲಾ ಮೀಟರ್ ಗಳನ್ನು ಸ್ಮಾರ್ಟ್ ಆಗಿ ಬದಲಾಯಿಸಿ ಪ್ರಿಪೇಯ್ಡ್ ವ್ಯವಸ್ಥೆ ಜಾರಿಗೊಳಿಸಬೇಕೆಂದಿದೆ. ಆದರೆ, ಬೆಸ್ಕಾಂ ಸಾಫ್ಟ್ವೇರ್ ಸಿದ್ಧತೆ, ಮೀಟರ್ ಪೂರೈಕೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸದೆ ಯೋಜನೆ ಜಾರಿಗೆ ತಂದಿದೆ.

ಗ್ರಾಹಕರ ಆರೋಪಗಳು

ಮುಂದೆ ಏನು?
ಗ್ರಾಹಕ ಸಂಘಗಳು ಮತ್ತು ರಾಜಕೀಯ ಪಕ್ಷಗಳು ಬೆಸ್ಕಾಂನ ನಿರ್ಧಾರವನ್ನು ವಿರೋಧಿಸುತ್ತಿದ್ದು, ದರಗಳ ಪುನರ್ಪರಿಶೀಲನೆ ಮತ್ತು ಸ್ಮಾರ್ಟ್ ಮೀಟರ್ ಅನುಷ್ಠಾನವನ್ನು ವಿಳಂಬಗೊಳಿಸುವಂತೆ ಒತ್ತಾಯ ಮಾಡುತ್ತಿವೆ.

 

 

Exit mobile version