ಬೆಂಗಳೂರು: ಗಂಡನಿಂದ ನಿರಂತರವಾಗಿ ಅನುಭವಿಸುತ್ತಿದ್ದ ಮಾನಸಿಕ ಹಿಂಸೆಗೆ ಬೇಸತ್ತು ವಿಜಯಲಕ್ಷ್ಮೀ (ತಾಯಿ) ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನವರಾದ ವಿಜಯಲಕ್ಷ್ಮೀ ಮತ್ತು ರಮೇಶ್ ದಂಪತಿಗಳು. ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿ, ಸುಮಾರು ಮೂರು ವರ್ಷಗಳ ಹಿಂದೆ ಉದ್ಯೋಗದ ಸಲುವಾಗಿ ಬೆಂಗಳೂರು ವಲಸೆ ಬಂದಿದ್ದರು. ಬಾಗಲಗುಂಟೆಯ ಬಾಡಿಗೆ ಮನೆಯೊಂದರಲ್ಲಿ ನಾಲ್ಕು ಜನ ಸಣ್ಣ ಕುಟುಂಬವಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದರು.
ಆದರೆ, ವಿಜಯಲಕ್ಷ್ಮೀಯ ಪತಿ ರಮೇಶ್ ಒಂದು ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಕುಟುಂಬದವರ ಪ್ರಕಾರ, ಇತ್ತೀಚೆಗೆ ರಮೇಶ್ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ವಿಜಯಲಕ್ಷ್ಮೀಗೆ ಡಿವೋರ್ಸ್ ನೀಡಲು ಬೆದರಿಕೆ ಹಾಕುತ್ತಿದ್ದ. ರಮೇಶ್ ಮನೆಯಲ್ಲಿದ್ದಾಗಲೆಲ್ಲ ಬೇರೆ ಬೇರೆ ಹುಡುಗಿಯರೊಂದಿಗೆ ಫೋನ್ ಮಾಡಿ ಮಾತನಾಡುವುದು, ಅವರೊಂದಿಗೆ ಅನುಚಿತ ಸಂಬಂಧ ಬೆಳೆಸಿದ್ದು ಮನೆಯಲ್ಲಿ ಅನೇಕ ಬಾರಿ ಜಗಳಕ್ಕೆ ಕಾರಣವಾಗುತ್ತಿತ್ತು. ಈ ಎಲ್ಲ ವಿಷಯಗಳಿಂದ ವಿಜಯಲಕ್ಷ್ಮೀ ಮಾನಸಿಕವಾಗಿ ಬಹಳ ನೊಂದುಕೊಂಡಿದ್ದಳು.
ಈ ಮಾನಸಿಕ ಹಿಂಸೆ ಮತ್ತು ನಿರಾಶೆ ತೀವ್ರರೂಪ ತಾಳಿದ್ದು, ಗುರುವಾರ ರಾತ್ರಿ. ಗಂಡ ರಮೇಶ್ ಮನೆಯಲ್ಲಿ ಇರಲಿಲ್ಲ. ಆ ಸಮಯದಲ್ಲಿ, ಮಾನಸಿಕ ಆಘಾತಕ್ಕೊಳಗಾದ ವಿಜಯಲಕ್ಷ್ಮೀ ಒಂದೂವರೆ ವರ್ಷದ ಮಗು ಭುವನ್ ಮತ್ತು ನಾಲ್ಕು ವರ್ಷದ ಮಗಳು ಬೃಂದಾ ಅವರನ್ನು ನೇಣು ಹಾಕಿ ಕೊಂದಿದ್ದಾಲೆ. ಅನಂತರ, ತಾನೂ ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶುಕ್ರವಾರ ವಿಜಯಲಕ್ಷ್ಮೀಯ ತಂಗಿ ಅಕ್ಕನನ್ನು ಭೇಟಿ ಮಾಡಲು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಪೋಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಬಾಗಲಗುಂಟೆ ಪೊಲೀಸರು ಮೂರು ಮೃತದೇಹಗಳನ್ನು ನೇಣಿನಿಂದ ಇಳಿಸಿ, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪತಿ ರಮೇಶ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕುಟುಂಬದವರ ಆರೋಪಗಳನ್ನು ಪರಿಗಣಿಸಿ, ರಮೇಶ್‌ನ ವರ್ತನೆ ಮತ್ತು ಮೂರನೇ ವ್ಯಕ್ತಿಯೊಂದಿಗಿನ ಸಂಬಂಧವೇ ಿದಕ್ಈಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.