ಉದ್ಯಮಿ ಮನೆಯಲ್ಲಿ ಕಳ್ಳತನ: ಚಿನ್ನಾಭರಣ, ನಗದು, ಕದ್ದೊಯ್ದ ಖದೀಮರು

Untitled design 2025 04 18t133816.297

ವರದಿ: ಮೂರ್ತಿ.ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಮತ್ತು ಕಾರು ಕದ್ದೊಯ್ದು ಪರಾರಿಯಾಗಿದ್ದಾರೆ. ಈ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ  ನಡೆದಿದೆ.

ಕಮ್ಮಸಂದ್ರನಲ್ಲಿ ಭಯಾನಕ ಕಳ್ಳತನ ನಡೆದಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯಾದ ರವೀಂದ್ರ ಅವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಮತ್ತು ಅವರ Renault Kwid ಕಾರು ಕಳವಾಗಿದೆ. ಈ ಕೃತ್ಯ ಮಾಗಡಿಯ ರಂಗನಾಥಸ್ವಾಮಿ ಜಾತ್ರೆಗೆ ಮನೆಯವರೆಲ್ಲರೂ ಹೋಗಿದ್ದ ವೇಳೆ ಮನೆಯಲ್ಲಿ ಕಳ್ಳತನ ನಡೆದಿದೆ.

ಘಟನೆಯಲ್ಲಿ ಕಳ್ಳರು ಹೇಗೆ ಕಾರ್ಯನಿರ್ವಹಿಸಿದರು

ಕಳ್ಳರು ಮನೆಯಿಂದ ಪ್ಲಂಬಿಂಗ್ ಪೈಪ್‌ಗಳ ಮೂಲಕ ಟೆರೇಸ್‌ಗೆ ಹತ್ತಿ, ನಂತರ ಮೂರನೇ ಮಹಡಿಯ ಬಾಗಿಲನ್ನು ಮೀಟಿ ಒಳನುಗ್ಗಿ, ಮನೆಯ ಡೋರ್ ಒಡೆದು ಹಾನಿ ಮಾಡಿ ಒಳ ನುಗ್ಗಿರುವ ಕಳ್ಳರ ಟೀಮ್, ಇತರ ಎಲ್ಲಾ ರೂಂಗಳನ್ನು ತಲಾಷ್ ಮಾಡಿ ಬರೋಬ್ಬರಿ ಕಳ್ಳರು 500 ಗ್ರಾಂ ಚಿನ್ನಾಭರಣ,5 ಲಕ್ಷ ರೂಪಾಯಿ ನಗದು, ಮತ್ತು ಮನೆಯ ಪಕ್ಕದಲ್ಲಿ ನಿಂತಿದ್ದ Renault Kwid ಕಾರು ಕದ್ದು ಪರಾರಿಯಾಗಿದ್ದಾರೆ.

ಮನೆ ಕಳ್ಳತನ ಬಗ್ಗೆ ಉದ್ಯಮಿ ರವೀಂದ್ರ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ನಾನು ಬೆಳಿಗ್ಗೆ 8:30 ಗಂಟೆಗೆ ಮನೆಗೆ ಬಂದು, ಬಾಗಿಲು ಲಾಕ್ ಇಲ್ಲದೆ ಇರುವುದನ್ನು ನೋಡಿ ಆತಂಕಗೊಂಡೆ. ಮನೆಯೊಳಗೆ ಹೋಗಿ, ರೂಂಗಳನ್ನು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಾದನಾಯಕನಹಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿ ಕಳ್ಳತನ ಅರೋಪಿಗಳನ್ನ ಬಂಧನ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಚಿನ್ನಾಭರಣ, 500 ಗ್ರಾಂ (₹50 ಲಕ್ಷ ಮೌಲ್ಯ), ನಗದು ₹5 ಲಕ್ಷ ರೂ., Renault Kwid (ನಂ. ಕೆಎ 52 ಎಂ 6385)ನಂಬರಿನ
ಕಾರು ಕದ್ದು ಪರಾರಿಯಾಗಿದ್ದಾರೆ.

 ಪೊಲೀಸ್ ತನಿಖೆ

ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಈ ಪ್ರಕರಣವನ್ನು ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರೆಯುತ್ತಿದೆ.

“ನಾವು ಕಳ್ಳರ ಪತ್ತೆಗೆ ತಂಡಗಳನ್ನು ರಚನೆ ಮಾಡಿ ಪರಿಶೀಲನೆ ನಡೆಸುತ್ತಿದ್ದೇವೆ. ಸ್ಥಳೀಯ ಜನರ ಸಹಕಾರವನ್ನು ಸಹ ಪಡೆಯುತ್ತಿದ್ದೇವೆ,” ಎಂದು ಮಾದನಾಯಕನಹಳ್ಳಿ ಪೊಲೀಸ್ ಅಧಿಕಾರಿ ಮುರಳೀಧರ್ ತಿಳಿಸಿದ್ದಾರೆ.

Exit mobile version