ಬೆಂಗಳೂರು: ಬೆಂಗಳೂರಿನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
27 ವರ್ಷದ ಮಂಜು ಎಂಬುವವರು ಹತ್ಯೆಯಾಗಿದ್ದು,ಇನ್ನೂ 30 ವರ್ಷದ ಧರ್ಮಶಿಲಾಂ ಎಂಬುವವರು ಆತ್ಮಹತ್ಯೆ ಮಾಡಿಕೊಂದಿದ್ದಾರೆ.ಇಬ್ಬರೂ ತಮಿಳುನಾಡಿನ ಕಲ್ಲಕುರುಚ್ಚಿ ಗ್ರಾಮದವರಾಗಿದ್ದಾರೆ.
ಮಂಜು ಮತ್ತು ಧರ್ಮಶಿಲಾಂ ಅವರಿಗೆ ಸುಮಾರು ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯ ನಂತರ ಪತಿ ಧರ್ಮಶಿಲಾಂ ಜೀವನೋಪಾಯಕ್ಕಾಗಿ ದುಬೈಗೆ ತೆರಳಿದ್ದ. ಅಲ್ಲಿ ಅವನು ಮೆಸ್ತ್ರಿ ಕೆಲಸ ಮಾಡುತ್ತಿದ್ದ. ಅವನ ಪತ್ನಿ ಮಂಜು ಬೆಂಗಳೂರಿನಲ್ಲೇ ನರ್ಸ್ ಆಗಿ ತನ್ನ ವೃತ್ತಿಯನ್ನು ಮುಂದುವರೆಸಿದ್ದಳು.
ಘಟನೆಗೆ ಕೇವಲ ಒಂದು ತಿಂಗಳ ಮುನ್ನವೇ ಧರ್ಮಶಿಲಾಂ ದುಬೈಯಿಂದ ಬೆಂಗಳೂರಿಗೆ ಹಿಂದಿರುಗಿದ್ದ. ಬೆಂಗಳೂರಿನಲ್ಲಿ ಅವನು ಮೆಸ್ತ್ರಿ ಕೆಲಸವೇ ಮುಂದುವರೆಸಿದ್ದ. ದಂಪತಿಗಳು ಉಲ್ಲಾಳ ಮುಖ್ಯ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ, ಮಂಜು ಅವರ ತಂದೆ ಪೆರಿಯಾಸ್ವಾಮಿ ಅವರೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರು.
ಗುರುವಾರ (ಸೆ.25)ದಂಪತಿಗಳ ನಡುವೆ ಮನೆಯ ಹಾಲ್‌ನಲ್ಲಿ ಯಾವುದೋ ವಿಷಯವಾಗಿ ತೀವ್ರ ಗಲಭೆ ಆರಂಭವಾಯಿತು. ಉಗ್ರಗೊಂಡ ಧರ್ಮಶಿಲಾಂ, ಜಗಳದ ಸಮಯದಲ್ಲೇ ಪತ್ನಿ ಮಂಜು ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿ, 7-8 ಬಾರಿ ಚಾಕುವಿನಿಂದ ಚುಚ್ಚಿ ಕೊಲೆಮಾಡಿದ್ದಾರೆ.
ಪತ್ನಿಯನ್ನು ಕೊಂದು ಹಿಂದೆಯೇ, ಧರ್ಮಶಿಲಾಂ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಹಾಲ್‌ನಲ್ಲಿದ್ದ ಪೈಪ್‌ಗೆ ನೈಲಾನ್ ಹಗ್ಗದ ನೇಣನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ.
ಘಟನೆ ನಡೆದ ದಿನ ಮಂಜು ಅವರ ತಂದೆ ಪೆರಿಯಾಸ್ವಾಮಿ ಸಂಬಂಧಿಕರ ಮನೆಗೆ ಹೋಗಿದ್ದರು. ಸಂಜೆ ಮರಳಿ ಮನೆಗೆ ಬಂದಾಗ, ಬಾಗಿಲು ಒಳಗಿನಿಂದ ಲಫಕ್ ಮಾಡಲಾಗಿತ್ತು, ಎಷ್ಟು ಬಡಿದರೂ ಯಾರೂ ತೆರೆಯಲಿಲ್ಲ. ನಂತರ ಪೆರಿಯಾಸ್ವಾಮಿ ನೆರೆಹೊರೆಯವರ ಸಹಾಯದಿಂದ ಡುಪ್ಲಿಕೇಟ್ ಕೀ ತಂದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.ನಂರೆ ಪರಿಯಾಸ್ವಾಮಿ ಪೊಳಿಸರಿಗೆ ಆಹಿತಿ ತಿಳಿಸಿದ್ದಾರೆ.
ಘಟನೆಯನ್ನು ತಿಳಿದ ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೆಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಮಂಜು ಮತ್ತು ಧರ್ಮಶಿಲಾಂ ಅವರ ದೇಹಗಳನ್ನು ಪೊಲೀಸರು ಪೊಸ್ಟ್ಮಾರ್ಟಮ್ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ರವಾನಾ ಮಾಡಿದ್ದಾರೆ.ಪೊಲೀಸರು ಈ ಕೊಲೆ-ಆತ್ಮಹತ್ಯೆಗೆ ಕಾರಣವಾದ ನಿಖರವಾದ ಕಾರಣವನ್ನು ಅರಿಯಲು ತನಿಖೆ ನಡೆಸುತ್ತಿದ್ದಾರೆ.ಘಟನೆಗೆ ಮೂಲ ಕಾರಣ ಇನ್ನೂ ತಿಳಿದುಬಂದಿಲ್ಲ.





