ಆನ್ಲೈನ್ ಗೇಮ್‌ ಚಟ: 14 ವರ್ಷದ ಬಾಲಕನನ್ನು ಹತ್ಯೆಗೈದ ಮಾವ

Untitled design 2025 08 07t223811.657

ಬೆಂಗಳೂರು: “PUBG” ಆಟವೋ, “Free Fire”ವೋ ಗೊತ್ತಿಲ್ಲ…ಆನ್ಲೈನ್ ಗೇಮ್‌ನ ಭಯಾನಕ ಚಟ
ಮೈಗೂಡಿಸಿಕೊಂಡು ತಾಯಿಯ ಮಾತು ಕೇಳದ ಮಗನಿಗೆ ತನ್ನ ಸೋದರ ಮಾವನೆ ಚಾಕುವಿನಿಂದ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರು ಕುಂಬಾರಹಳ್ಳಿಯಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಬಾಲಕ ಅಮೋಘ್ ನನ್ನು ಆತನ ಸೋದರ ಮಾವ ಮಾವ ನಾಗಪ್ರಸಾದ್ (50)ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಘಟನೆ ವಿವರ

ಅಮೋಘ್‌ನ ತಾಯಿ ಶಿಲ್ಪಗೆ ತನ್ನ ಮಗನ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದನ್ನು ನೋಡಿ ಬೇಸತ್ತಿದ್ದರು. ಎಷ್ಟೇ ಬುದ್ಧಿವಾದ ಹೇಳಿದರೂ, ಶಾಲೆಯನ್ನು ಬಿಟ್ಟು, ಮೊಬೈಲ್‌ನಲ್ಲಿ ಗೇಮ್‌ ಆಡುವುದರಲ್ಲೇ ತಲ್ಲೀನನಾಗಿದ್ದ ಅಮೋಘ್, ತಾಯಿಯ ಮಾತಿಗೆ ಕಿವಿಗೊಡಲಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಿಲ್ಪಾ, ತನ್ನ ಸಹೋದರ ನಾಗಪ್ರಸಾದ್‌ಗೆ ಈ ವಿಷಯವನ್ನು ತಿಳಿಸಿದರು. ಮಗನನ್ನು ಸರಿಯಾದ ದಾರಿಗೆ ತರಲು ನಾಗಪ್ರಸಾದ್, 10 ತಿಂಗಳ ಹಿಂದೆ ಅಮೋಘ್‌ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು.

ಆದರೆ, ಗೇಮಿಂಗ್‌ನ ಮಾಯಾಜಾಲದಿಂದ ಅಮೋಘ್‌ಗೆ ಹೊರಬರಲು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಆತನ ಚಟ ಕಡಿಮೆಯಾಗಲಿಲ್ಲ. ಆಗಾಗಲೇ ತಾಳ್ಮೆ ಕಳೆದುಕೊಂಡಿದ್ದ ನಾಗಪ್ರಸಾದ್‌ ಆಗಸ್ಟ್ 4ರಂದು ಚಾಕು ತೆಗೆದುಕೊಂಡು ಅಮೋಘ್‌ನ ಕುತ್ತಿಗೆಗೆ ಇರಿದು ಆತನನ್ನು ಕೊಲೆಗೈದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಕೊಲೆಯ ಬಳಿಕ, ನಾಗಪ್ರಸಾದ್ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ, ಆತನ ಈ ಪ್ರಯತ್ನ ವಿಫಲವಾಯಿತು. ಕೊಲೆಯ ನಾಲ್ಕು ದಿನಗಳ ಬಳಿಕ, ಆಗಸ್ಟ್ 7ರಂದು, ಆತ ಸ್ವಯಂ ಇಚ್ಛೆಯಿಂದ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆಯ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
Exit mobile version