ಬೆಂಗಳೂರಿನ ಹಲವೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ..ಎಲ್ಲೆಲ್ಲಿ ಗೊತ್ತಾ?

Untitled design 2025 09 17t112558.883

ಬೆಂಗಳೂರು, ಸೆಪ್ಟೆಂಬರ್ 17: ನಗರದಲ್ಲಿ ವಿದ್ಯುತ್ ಪೂರೈಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಮತ್ತು ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (ಬೆಸ್ಕಾಂ) ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿವೆ. ಇದರ ಪರಿಣಾಮವಾಗಿ ಇಂದು (ಸೆಪ್ಟೆಂಬರ್ 17) ಮತ್ತು ನಾಳೆ (ಸೆಪ್ಟೆಂಬರ್ 18) ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಎರಡೂ ಸಂಸ್ಥೆಗಳು ಮನವಿ ಮಾಡಿವೆ.

ಕೆಪಿಟಿಸಿಎಲ್ ವತಿಯಿಂದ ನಡೆಯುತ್ತಿರುವ ನಿರ್ವಹಣಾ ಕಾರ್ಯಗಳು ಪ್ರಮುಖವಾಗಿ 66/11 ಕೆವಿ ಕಟ್ಟಿಗೇನಹಳ್ಳಿ ಸಬ್‌ಸ್ಟೇಷನ್ ಮತ್ತು ಹೆಬ್ಬಾಳ ವಿಭಾಗದ ಸಿ-7 ಉಪವಿಭಾಗದಲ್ಲಿ ಕೇಂದ್ರೀಕೃತವಾಗಿವೆ. ಅಲ್ಲದೆ, 66/11 ಕೆವಿ ರಾಜನಕುಂಟೆ ಉಪಕೇಂದ್ರದ ವ್ಯಾಪ್ತಿಯಲ್ಲೂ ಕಾರ್ಯಗಳು ನಡೆಯಲಿವೆ. ಇದರಿಂದಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಸ್ಥಳಗಳು ರಾಯಭಾರ ಕಚೇರಿ, ಫಿಲಿಪ್ಸ್ ಕಂಪನಿ, ದ್ವಾರಕಾನಗರ, ಬಾಬಾನಗರ, ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್ ಮತ್ತು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, ಬಿಎಸ್‌ಎಫ್, ಪಿಡಿಎಮ್‌ಎಸ್, ವಿನಾಯಕನಗರ, ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ಡೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕೆಎಂಎಫ್, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಸೊನ್ನೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ.

ಬೆಸ್ಕಾಂ ಕೂಡ ತನ್ನ ನಿರ್ವಹಣಾ ಕಾರ್ಯಗಳನ್ನು ವಿಸ್ತರಿಸಿದ್ದು, ರಾಜಾನುಕುಂಟೆ ಮತ್ತು ಸಾರಕ್ಕಿ ಉಪಕೇಂದ್ರಗಳಲ್ಲಿ ಕಾರ್ಯಗಳು ನಡೆಯಲಿವೆ. ಇಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತ್ತು ನಾಳೆ ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ. ಇಂದಿನ ವಿದ್ಯುತ್ ವ್ಯತ್ಯಯದ ಪ್ರದೇಶಗಳು ಸಿಂಗನಾಯಕನಹಳ್ಳಿ, ಹೊನ್ನೇನಹಳ್ಳಿ, ಅಡ್ಡವಿಶ್ವನಾಥಪುರ, ರಾಜಾನುಕುಂಟೆ, ಶ್ರೀರಾಮನಹಳ್ಳಿ, ಮಾರಸಂದ್ರ, ಹನಿಯೂರು, ನೆಲಕುಂಟೆ, ಕೆಎಂಎಫ್, ಚೆಲ್ಲಹಳ್ಳಿ, ಬೂದಮನಹಳ್ಳಿ, ಬೈರಾಪುರ, ಕಾಕೋಲು, ದಿಟ್ಟೂರು, ಸೊನ್ನೇನಹಳ್ಳಿ, ಸೆಂಚುರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ.

ನಾಳೆಯ ವಿದ್ಯುತ್ ಕಡಿತದ ವಿವರಗಳು ಹೀಗಿವೆ

ಶಾಕಂಬರಿ ನಗರ, ಪೈಪ್ ಲೈನ್ ರೋಡ್, ರಾಘವೇಂದ್ರ ಸ್ವಾಮಿ ಮಠ, ಜೆ.ಪಿ ನಗರ ಮೊದಲನೇ ಹಂತ, 14ನೇ ಅಡ್ಡ ರಸ್ತೆ, ಸಲಾರ್ಪುರಿಯಾ ಅಪಾರ್ಟ್ ಮೆಂಟ್, ನಾಗರ್ಜನ ಅಪಾರ್ಟ್ ಮೆಂಟ್, ಪುಟ್ಟೇನಹಳ್ಳಿ, ಜಯನಗರ 8, 5, 7 ನೇ ಬ್ಲಾಕ್, ಐಟಿಐ ಲೇಔಟ್, ಎಸ್. ಬಿ.ಐ ಕಾಲೋನಿ, ಅರ್.ವಿ.ಡೆಂಟಲ್ ಕಾಲೇಜ್ ಮತ್ತು ಸುತ್ತಮುತ್ತಲ ಪ್ರದೇಶಗಳು. ಅಲ್ಲದೆ, 24ನೇ ಮೈನ್, ಎಲ್‌ಐಸಿ ಕಚೇರಿ, ಎಲ್‌ಐಸಿ ಕಾಲೋನಿ, ಕೆ ಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಜೆ.ಪಿ.ನಗರ 5ನೇ ಹಂತ, ಸಾಯಿ ನರ್ಸರಿ ರಸ್ತೆ, ಜಿ.ಪಿ.ನಗರ 6ನೇ ಹಂತ, 15ನೇ ಕ್ರಾಸ್, 16 ಹಾಗೂ 12 ನೇ ಕ್ರಾಸ್, ಆದರ್ಶ ರೆಸಿಡೆನ್ಸಿ ಅಪಾರ್ಟೆಂಟ್, ಬನ್ನೇರುಘಟ್ಟ ರೋಡ್, ಡಾಲರ್ಸ್ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ಅಪಾರ್ಟೆಂಟ್, ಕಲ್ಯಾಣಿ ಕೃಷ್ಣ ಮ್ಯಾಗ್ನಮ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಈ ನಿರ್ವಹಣಾ ಕಾರ್ಯಗಳು ವಿದ್ಯುತ್ ವ್ಯವಸ್ಥೆಯಲ್ಲಿ ಸಂಭವಿಸುವ ಸಮಸ್ಯೆಗಳನ್ನು ಮುಂಚಿತವಾಗಿ ತಪ್ಪಿಸುವ ಉದ್ದೇಶದಿಂದ ನಡೆಯುತ್ತಿವೆ. ಬೆಂಗಳೂರು ನಗರದ ವೇಗದ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದು, ಸಬ್‌ಸ್ಟೇಷನ್‌ಗಳನ್ನು ನವೀಕರಿಸುವ ಅಗತ್ಯವಿದೆ. ಕೆಪಿಟಿಸಿಎಲ್ ಮತ್ತು ಬೆಸ್ಕಾಂನಂತಹ ಸಂಸ್ಥೆಗಳು ನಿಯಮಿತವಾಗಿ ಇಂತಹ ಕಾರ್ಯಗಳನ್ನು ಕೈಗೊಳ್ಳುತ್ತವೆ. ಇದರಿಂದಾಗಿ ದೀರ್ಘಕಾಲೀನವಾಗಿ ವಿದ್ಯುತ್ ಪೂರೈಕೆಯ ಗುಣಮಟ್ಟ ಸುಧಾರಿಸುತ್ತದೆ. ಆದರೆ, ಇದು ಸಾರ್ವಜನಿಕರಿಗೆ ತಾತ್ಕಾಲಿಕ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ವಿಶೇಷವಾಗಿ ಆಸ್ಪತ್ರೆಗಳು, ಶಾಲೆಗಳು ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಬ್ಯಾಕಪ್ ಜನರೇಟರ್‌ಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

Exit mobile version