ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಮತ್ತು ‘ಗ್ರೇಟರ್ ಬೆಂಗಳೂರು’ ಘೋಷಣೆಗಳಿಗೆ ಈಗ ತೀವ್ರ ಸವಾಲು ಎದುರಾಗಿದೆ. ನಗರದ ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಮೂಲಸೌಕರ್ಯದ ಕೊರತೆಯಿಂದ ಬೇಸತ್ತ ಖಾಸಗಿ ಕಂಪನಿಗಳು ನಗರವನ್ನು ಬಿಟ್ಟು ಹೊರಡುವ ಸೂಚನೆ ಕೊಡಲು ಪ್ರಾರಂಭಿಸಿವೆ.
ಲಾಜಿಸ್ಟಿಕ್ ಸೇವಾ ಕಂಪನಿಯಾದ ಬ್ಲಾಕ್ ಬಕ್ ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕಳೆದ 9 ವರ್ಷಗಳಿಂದ ಬೆಂಗಳೂರಿನಲ್ಲಿ ಸೇವೆ ನೀಡೋಕೆ ಕಷ್ಟ ಆಗ್ತಿದೆ. ಬೆಳ್ಳಂದೂರಿನಲ್ಲಿರೋ ನಮ್ಮ ಕಚೇರಿ ಇದೀಗ ಕಚೇರಿ, ಮನೆಯಾಗಿದೆ. ಇದರಲ್ಲಿ ನಾವು ಮುಂದುವರೆಯುವುದು ಕಷ್ಟ. ನಾವು ಹೊರಗೆ ಹೋಗಲು ತೀರ್ಮಾನಿಸಿದ್ದೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದು ಒಂದೇ ಕಂಪನಿಯ ಸಮಸ್ಯೆಯಲ್ಲ. ಉದ್ಯಮ ಜಗತ್ತಿನ ದಿಗ್ಗಜಗಳಾದ ಮೋಹನ್ ದಾಸ್ ಪೈ ಮತ್ತು ಕಿರಣ್ ಮಜೂಂದಾರ್ ಷಾ ಅವರೂ ಸಹ ನಗರದ ರಸ್ತೆಗಳ ದುರಸ್ತಿಯಿಲ್ಲದ ಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಟ್ವೀಟ್ ಮೂಲಕ ಬೆಂಗಳೂರು ನಗರ ನಿಗಮ (ಬಿಬಿಎಂಪಿ)ವನ್ನು ಟ್ಯಾಗ್ ಮಾಡಿ, ಸರ್ಕಾರವು ನಗರವನ್ನು ನಡೆಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಕಿರಣ್ ಮಜೂಂದಾರ್ ಷಾ ಅವರು ಇದನ್ನು “ಅತ್ಯಂತ ಗಂಭೀರವಾದ ವಿಷಯ” ಎಂದು ಪರಿಗಣಿಸಿ, ತಕ್ಷಣದ ಪರಿಹಾರಕ್ಕೆ ಕರೆ ನೀಡಿದ್ದಾರೆ.
ಅಸಮಾಧಾನಕ್ಕೆ ಕಾರಣ
* ನಮ್ಮ ಸಹೋದ್ಯೋಗಿಗಳ ಪ್ರಯಾಣ 1.5+ ಗಂಟೆ ಹೆಚ್ಚಾಗಿದೆ
* ರಸ್ತೆಗಳು ಗುಂಡಿ ಮತ್ತು ಧೂಳಿನಿಂದ ತುಂಬಿವೆ
* ಹಾಳಾದ ರಸ್ತೆಗಳನ್ನ ರಿಪೇರಿ ಮಾಡಲು ಹಿಂದೇಟು ಹಾಕಲಾಗ್ತಿದೆ
* ಮುಂದಿನ 5 ವರ್ಷ ಯಾವುದೇ ಬದಲಾವಣೆ ಕಂಡು ಬರುವುದು ಕಷ್ಟವಾಗ್ತಿದೆ
* ಕೆಆರ್ ಪುರಂ ನಿಂದ ಸಿಲ್ಕ್ ಬೋರ್ಡ್ ವರೆಗೆ 500 ಐಟಿ ಕಂಪನಿಗಳಿವೆ
* 500 ಐಟಿ ಕಂಪನಿಗಳಲ್ಲಿ 9.5 ಲಕ್ಷ ಉದ್ಯೋಗಿಗಳು ಕೆಲ್ಸ ಮಾಡ್ತಿದ್ದಾರೆ
* ರಾಜ್ಯದ ವಾರ್ಷಿಕ ಆದಾಯದಲ್ಲಿ ಶೆ. 36% ಕೊಡುಗೆ ನೀಡ್ತಿದ್ದೇವೆ
* ಹೀಗಿದ್ರೂ ಮೂಲಭೂತ ಸೌಲಭ್ಯ ಸಿಗ್ತಿಲ್ಲ ಅಂತ ಅಸಮಧಾನ