ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕಿದ ಬೆಂಗಳೂರು ಪಿಜಿ ಮಾಲೀಕರು..! ರಾತ್ರಿ ಪಾರ್ಟಿ ಹೋಗುವವರು ಈ ಸುದ್ದಿ ನೋಡ್ಲೇಬೇಕು

Untitled design 2025 12 31T183516.821

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ, ನಗರದ ಸಾವಿರಾರು ಪಿಜಿಗಳಲ್ಲಿ ವಾಸಿಸುತ್ತಿರುವ ಯುವಕ-ಯುವತಿಯರಿಗೆ ಈ ಬಾರಿಯ ಸಂಭ್ರಮಾಚರಣೆಗೆ ಪಿಜಿ ಮಾಲೀಕರು ಬ್ರೇಕ್‌ ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಮತ್ತು ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಪಿಜಿ ಮಾಲೀಕರು ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಸಾಮಾನ್ಯವಾಗಿ ಹೊಸ ವರ್ಷದ ಸಂಭ್ರಮ ಶುರುವಾಗುವುದೇ ಮಧ್ಯರಾತ್ರಿ 12 ಗಂಟೆಗೆ. ಆದರೆ, ಪಿಜಿ ಮಾಲೀಕರು ನೀಡಿರುವ ಹೊಸ ಸೂಚನೆಯ ಪ್ರಕಾರ, ಪಿಜಿಯಲ್ಲಿರುವ ಯುವಕ, ಯುವತಿಯರು ರಾತ್ರಿ 12 ಗಂಟೆಯ ಒಳಗೆ ಪಿಜಿ ತಲುಪಿರಬೇಕು. ಒಂದು ವೇಳೆ ತಡವಾಗಿ ಬಂದರೆ ಬಾಗಿಲು ತೆರೆಯುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ. ಇದರಿಂದಾಗಿ ಹೊರಗಡೆ ಪಾರ್ಟಿ ಮುಗಿಸಿ ತಡರಾತ್ರಿ ಮರಳುವ ಪ್ಲಾನ್ ಮಾಡಿದ್ದವರಿಗೆ ಭಾರಿ ನಿರಾಸೆಯಾಗಿದೆ.

ಪಿಜಿ ಮಾಲೀಕರು ನೀಡಿರುವ ಪ್ರಮುಖ ನಿಯಮಗಳು:

ಕೇವಲ ಬೆಂಗಳೂರು ಮಾತ್ರವಲ್ಲದೆ, ಮಂಗಳೂರು, ಹುಬ್ಬಳ್ಳಿ, ಮೈಸೂರಿನಂತಹ ನಗರಗಳಲ್ಲೂ ಪಿಜಿ ಮಾಲೀಕರು ಇದೇ ರೀತಿಯ ಕಟದಟುನಿಟ್ಟಿನ ನಿಯಮ ಹಾಕಿದ್ದಾರೆ. ಪೊಲೀಸ್ ಇಲಾಖೆಯು ನಗರದ ಸುರಕ್ಷತೆಗೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ಪಿಜಿಗಳಲ್ಲಿ ಯಾವುದೇ ಗಲಾಟೆ ನಡೆಯಬಾರದು ಎಂಬುದು ಮಾಲೀಕರ ಉದ್ದೇಶವಾಗಿದೆ.

ಪಿಜಿ ಮಾಲೀಕರ ಈ ದಿಢೀರ್ ನಿರ್ಧಾರದಿಂದಾಗಿ ಸಾವಿರಾರು ಯುವಕರ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ. ನಾವು ಮುಂಚಿತವಾಗಿಯೇ ಪಾರ್ಟಿ ಟಿಕೆಟ್ ಬುಕ್ ಮಾಡಿದ್ದೇವೆ, ಈಗ ಈ ನಿಯಮಗಳಿಂದಾಗಿ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಪಿಜಿಯಲ್ಲಿ ವಾಸಿಸುವ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version