ಸುಂದರವಾಗಿದ್ದೀಯಾ..ನನ್ನ ಆಸೆ ಈಡೇರಿಸು: ಸೊಸೆ ಮೇಲೆ ಮಾವನಿಂದಲೇ ಲೈಂ*ಗಿಕ ದೌರ್ಜನ್ಯ

ಬೆಂಗಳೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ವ್ಯಕ್ತಿಯ ವಿರುದ್ಧ ಅವರ ಸೊಸೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 6 ಬಿಎನ್‌ಎಸ್ (BNS) ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಆರಂಭವಾಗಿದೆ.

ಸಂತ್ರಸ್ತ ಮಹಿಳೆ ಮತ್ತೊಂದು ಖಾಸಗಿ ಶಾಲೆಯ ಪ್ರಾಂಶುಪಾಲೆಯಾಗಿದ್ದು, ಹಲವು ತಿಂಗಳಿನಿಂದ ಮಾವನಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.

ಪತ್ರ ಬರೆದು ಕಿರುಕುಳ?

ಆರೋಪಿ ಮಾವ, ಸೊಸೆಯ ಬಗ್ಗೆ ಅಸಭ್ಯವಾಗಿ ಪತ್ರಗಳನ್ನು ಬರೆದು, ಅವನ್ನು ಆಕೆಯ ಮುಂದೆ ಓದುತ್ತಿದ್ದನಂತೆ. ನಂತರ ಆ ಪತ್ರಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದನೆಂಬ ಆರೋಪವೂ ಇದೆ. “ನೀನು ತುಂಬಾ ಸುಂದರವಾಗಿದ್ದೀಯಾ… ನನ್ನ ಆಸೆ ಈಡೇರಿಸು” ಎಂದು ಹೇಳುತ್ತಾ ಪದೇ ಪದೇ ಪೀಡಿಸುತ್ತಿದ್ದನೆಂದು ಮಹಿಳೆ ತಿಳಿಸಿದ್ದಾರೆ.

ಮನೆಯಲ್ಲೇ ಸೊಸೆ ಒಬ್ಬಳೇ ಇದ್ದ ಸಂದರ್ಭಗಳಲ್ಲಿ ಆಕೆಗೆ ಕಿರುಕುಳ ನೀಡುತ್ತಿದ್ದನೆಂಬ ಆರೋಪವಿದೆ. ಬಲವಂತವಾಗಿ ಬಟ್ಟೆ ತೆಗೆಯಲು ಯತ್ನಿಸಿ, ಹಲ್ಲೆ ನಡೆಸಲು ಪ್ರಯತ್ನಿಸಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಲೆಯ ಕ್ಯಾಬಿನ್‌ನಲ್ಲೂ ಆರೋಪಿ ಅಸಭ್ಯವಾಗಿ ವರ್ತಿಸಿದ್ದನೆಂದು ಗಂಭೀರ ಆರೋಪ ಕೇಳಿಬಂದಿದೆ.

ಬೆದರಿಕೆ ಆರೋಪ

ಈ ವಿಷಯವನ್ನು ತನ್ನ ಪತಿಗೆ ತಿಳಿಸಿದರೆ ಕೊಲ್ಲುವುದಾಗಿ ಮಾವ ಬೆದರಿಸಿದ್ದನೆಂಬ ಆರೋಪವೂ ದೂರಿನಲ್ಲಿ ತಿಳಿಸಲಾಗಿದೆ. ಕೊನೆಗೆ ಕಿರುಕುಳ ತಾಳಲಾರದೆ ಸಂತ್ರಸ್ತೆ ತನ್ನ ಪತಿಗೆ ಎಲ್ಲಾ ವಿಷಯವನ್ನು ವಿವರಿಸಿದ್ದಾಳೆ. ಪತಿ ತನ್ನ ತಂದೆಯನ್ನು ಬೈದು ಬುದ್ಧಿ ಹೇಳಿದ್ದರೂ, ಕಿರುಕುಳ ನಿಲ್ಲಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ, ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

6 BNS ಸೆಕ್ಷನ್‌ಗಳಡಿ ಪ್ರಕರಣ

ಪೊಲೀಸರು ಕೆಳಗಿನ 6 ಬಿಎನ್‌ಎಸ್ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದೆ.

Exit mobile version