ಯುವತಿಯೊಂದಿಗೆ ಕಂಪನಿ ಮಾಲೀಕನ ಅಸಭ್ಯ ವರ್ತನೆ: ಪ್ರಕರಣ ದಾಖಲು

Untitled design 2025 06 05t164421.310

ಬೆಂಗಳೂರು: ಅಕೌಂಟೆಂಟ್ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಕಂಪನಿ ಮಾಲಿಕನ ಅಸಭ್ಯ ವರ್ತನೆ ಮಾಡಿದ ಆರೋಪದ ಮೇಲೆ ಕಂಪನಿ ಮಾಲೀಕ ಅವಿನಾಶ್ ಶಶಿಕಾಂತ್ ಶಾ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಂಗಳೂರಿನ ಪೀಣ್ಯಾದ ಅಂಜನಾ ನಗರದ ಚೇತನ ಪ್ಯಾಕೇಜಿಂಗ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ಕಂಪನಿಯ ಮಾಲೀಕ ಅವಿನಾಶ್ ಶಶಿಕಾಂತ್ ಶಾ ಅವರ ವಿರುದ್ಧ ಅಸಭ್ಯ ವರ್ತನೆ ಹಾಗೂ ಬಲವಂತವಾಗಿ ಅತ್ಯಾಚಾರ ಕೃತ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿಯ ಹೇಳಿಕೆಯ ಪ್ರಕಾರ, ಕಂಪನಿ ಮಾಲೀಕನ ಮನೆಯಲ್ಲಿಯೇ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದು, ಸುಮಾರು ಏಳು ತಿಂಗಳಿನಿಂದ ಬೆಂಗಳೂರಿನ ಎಸ್ ಜೆ ಪಿ ರಸ್ತೆಯ ಬ್ರಾಂಚ್ ಆಫೀಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಒಂದು ತಿಂಗಳ ಹಿಂದೆ ತನ್ನ ಬೈಕ್‌ನಿಂದ ಅಪಘಾತವಾಗಿದ್ದ ಕಾರಣದಿಂದ, 15 ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಬುಧವಾರ ಬೆಳಿಗ್ಗೆ ಅವಿನಾಶ್ ರವರು ಅವರ ನಿವಾಸದ ಬಳಿ ಬಂದು, ‘ನಿನ್ನನ್ನು ಆಫೀಸ್ ಗೆ ಡ್ರಾಪ್ ಮಾಡುತ್ತೇನೆ’ ಎಂಬ ನೆಪದಲ್ಲಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆಫೀಸ್‌ಗೆ ಹೋಗದೇ, ನಾಗಸಂದ್ರ ಬಳಿ ಇರುವ ತನ್ನ ಜಿಂದಾಲ್ ಪ್ರದೇಶದಲ್ಲಿರುವ ಹೊಸ ಮನೆಗೆ ಕರೆದೊಯ್ದಿದ್ದಾರೆ.

ಯುವತಿಯೂ ಹೊಗಲು ನಿರಾಕರಿಸಿದರೂ, “ನಮ್ಮ ಹೊಸ ಮನೆ ತೋರಿಸುತ್ತೇನೆ ಬಾ” ಎಂದು ಕಾರಣ ಹೇಳಿ ಬಲವಂತವಾಗಿ ಒಳಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಅವರು ಬಾಗಿಲು ಮುಚ್ಚಿ, ಮಹಿಳೆಯನ್ನು ತಬ್ಬಿಕೊಳ್ಳಲು ಮತ್ತು ಮುತ್ತಿಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಯುವತಿ ಈ ಕೃತ್ಯಕ್ಕೆ ಭಯಗೊಂಡಿದ್ರು ಬಿಡದೆ, ಅರೋಪಿ ಅವಿನಾಶ್ “ನನ್ನ ಹೆಂಡತಿ ಜೊತೆ ನನ್ನ ಸಂಬಂಧ ಸರಿಯಿಲ್ಲ, ನಿನಗೆ ಏನು ಬೇಕು ಹೇಳು ಎಲ್ಲಾ ರೀತಿಯ ಸಹಾಯ ಬೇಕಾದರೂ ನಾನು ಮಾಡ್ತೀನಿ ಸಹಕರಿಸು” ಎಂಬಂತೆ ಮನವಿ ಮಾಡಿದ್ದಾರೆ.

ಘಟನೆಯ ನಂತರ ಗಾಬರಿಗೊಂಡ ಮಹಿಳೆ ತಕ್ಷಣವೇ ತಮ್ಮ ಅತ್ತಿಗೆಗೆ ಪೋನ್ ಮುಖಾಂತರ ಮೇಸೆಜ್ ಕಳಿಸಿದ್ರು, ಇನ್ನೂ ಯುವತಿಯ ಅತ್ತಿಗೆ ಸ್ಥಳಕ್ಕೆ ಬಂದು ಆತನಿಗೆ ಛೀಮಾರಿ ಹಾಕಿ ಯುವತಿಯನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ತನ್ನ ಅತ್ತಿಗೆ ಜೊತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಈ ದೂರಿನ ಆಧಾರದ ಮೇಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 2023ರ ಕಲಂ 74 (ಬಲವಂತದಿಂದ ಅತ್ಯಾಚಾರಕ್ಕೆ ಯತ್ನ ಹಾಗೂ ಅಸಭ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಪ್ರಾರಂಭಿಸಿದ್ದಾರೆ.

ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ

Exit mobile version