ಬಿಟಿಎಂ ಲೇಔಟ್​ ಕೇಸ್‌ಗೆ ರೋಚಕ ಟ್ವಿಸ್ಟ್‌: ಯುವತಿಗೆ ಕಿಸ್ ಕೊಟ್ಟ ಕೀಚಕನ ಬೆನ್ನಟ್ಟಿದ ಖಾಕಿ..!

Untitled design 2025 04 09t174426.932

ಕತ್ತಲಲ್ಲಿ ಹುಡುಗಿಗೆ ಕಿಸ್ ಕೊಟ್ಟು ಓಡಹೋಗಿರೋ ಕಿರಾತಕನ ಮತ್ತೊಂದು ದೃಶ್ಯ ಸಿಕ್ಕಿದೆ. ಬರೋಬ್ಬರಿ 300 ಸಿಸಿಟಿವಿ ಸರ್ಚ್ ಮಾಡಿರೋ ಪೊಲೀಸರು ಕೀಚಕನ ಹೆಡೆಮುರಿ ಕಟ್ಟೋಕೆ ಸಜ್ಜಾಗಿ ನಿಂತಿದೆ.

ಬಿಟಿಎಂ ಲೇಔಟ್‌ನ ಸದ್ದಗುಂಟೆ ಪಾಳ್ಯದಲ್ಲಿ ನಡೆದ ಘಟನೆ ಇದಾಗಿದೆ. ಕತ್ತಲ್ಲಿ ಕರಡಿ ಥರಾ ಹಿಂದೆನೇ ಓಡಿ ಬಂದು ಯುವತಿಗೆ ಅಡ್ಡ ಹಾಕಿ ಬಲವಂತವಾಗಿ ಕಿಸ್‌ ಕೊಟ್ಟು, ಮರಳಿ ಅದೇ ದಾರಿಯಲ್ಲಿ ವಾಪಸ್ ಓಡಿಹೋಗಿದ್ದ. ಏಪ್ರಿಲ್ 3ರಂದು ಘಟನೆ ನಡೆದ ಮಾರನೇ ದಿನವೇ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹೀಗೆ ವೈರಲ್ ಆಗ್ತಿದ್ದಂತೇ ಬಿಟಿಎಂ ಲೇಔಟ್ ಪೊಲೀಸರು ಕಿಸ್ ಕೊಟ್ಟವನು ಯಾರು..? ಈ ಹೆಣ್ಮಕ್ಕಳು ಯಾರು ಅಂತಾನೂ ಹುಡುಕೋಕೆ ಶುರು ಮಾಡಿದ್ದರು.

ಬೆಂಗಳೂರಲ್ಲಿ ಅಂದು ಮಧ್ಯರಾತ್ರಿ ಯುವತಿ ಖಾಸಗಿ ಅಂಗ ಮುಟ್ಟಿ ಯುವಕನ ವಿಕೃತಿ ಮೆರೆದ ಈ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಘಟನೆ ನಡೆದು ಒಂದು ವಾರವಾದ್ರೂ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿಲ್ಲ. ತೀವ್ರ ಚರ್ಚೆಯಾದ ಬಳಿಕ ಸುದ್ದಗುಂಟೆಪಾಳ್ಯದಲ್ಲಿ ಆರೋಪಿ ಓಡಾಟದ ಮತ್ತಷ್ಟು ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಇದೀಗ ಆರೋಪಿ ಪತ್ತೆಗೆ ಹುಡುಕಾಟ ನಡೆಸುತ್ತಿರೋ ಪೊಲೀಸರು ಬರೋಬ್ಬರಿ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಇದೀಗ ಮತ್ತೊಂದು ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಆ ಕಿರಾತಕ ಯುವತಿಯರ ಹಿಂದೆ ಬರೋದು ಮತ್ತು ಕೃತ್ಯವೆಸಗಿ ಗಾಬರಿಯಿಂದ ಓಡಿಹೋಗೋದು ಸೆರೆಯಾಗಿದೆ. ಇದರ ಬೆನ್ನಟ್ಟಿರೋ ಪೊಲೀಸರು ಆರೋಪಿ ಯಾವುದೇ ಮೂಲೆಯಲ್ಲಿ ಅವಿತುಕೊಂಡಿದ್ದರೂ ಹುಡುಕಿ ಕೋಳ ತೊಡಿಸೋಕೆ ಸಜ್ಜಾಗಿದ್ದಾರೆ.

ಸದ್ಯ ಈ ಸಿಸಿಟಿವಿ ದೃಶ್ಯಗಳ ಬೆನ್ನಟ್ಟಿ ಹೊರಟಿರೋ ಪೊಲೀಸರಿಗೆ ಸ್ಫೋಟಕ ಸುಳಿವು ಸಿಕ್ಕಿದೆ. ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತ ಖುಷಿಪಟ್ಟ ಆ ಕರಿಬಟ್ಟೆಯ ಕೀಚಕ ಸ್ವಲ್ಪ ದೂರಕ್ಕೆ ಓಡಿಹೋಗಿ ತನ್ನ ಬೈಕ್‌ನಲ್ಲಿ ಎಸ್ಕೇಪ್ ಆಗಿರೋ ಸಾಧ್ಯತೆಗಳಿವೆ. ಹೀಗಾಗಿ ಸದ್ಯದಲ್ಲೇ ಈತನ ಎಡೆಮುರಿಕಟ್ಟೋಕೆ ಖಾಕಿ ಪಣತೊಟ್ಟು ನಿಂತಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version