ಬೆಂಗಳೂರು: ಬೆಂಗಳೂರಿನ ಜಯದೇವ ಡೇರಿ ಸರ್ಕಲ್‌ನಲ್ಲಿ ನವೆಂಬರ್ 19, 2025ರ ಮಧ್ಯಾಹ್ನ ನಡೆದ ₹7.11 ಕೋಟಿ ಬೃಹತ್ ಹಗಲು ದರೋಡೆ ಪ್ರಕರಣದಲ್ಲಿ ಇದೀಗ ದೊಡ್ಡ ಬೆಳವಣಿಗೆ ಉಂಟಾಗಿದೆ. ದರೋಡೆ ಎಸಗಿದ ಶಂಕಿತ ಆರೋಪಿಗಳಲ್ಲಿ ಆರು ಜನರ ಸ್ಪಷ್ಟ ಫೋಟೋಗಳನ್ನು ಬೆಂಗಳೂರು ಪೊಲೀಸರು ಪಡೆದಿದ್ದಾರೆ. ಈ ಎಕ್ಸ್‌ಕ್ಲೂಸಿವ್ ಫೋಟೋಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದ್ದು, ಆರೋಪಿಗಳನ್ನ ಎಲ್ಲಾದರೂ ಕಂಡರೆ ಕೂಎಲೇ ಪೊಲೀಸರಿಗೆ ತಿಳಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸಿಸಿಟಿವಿ ದೃಶ್ಯಗಳು ಮತ್ತು ಸ್ಥಳೀಯ ಮೂಲಗಳಿಂದ ಪಡೆದ ಮಾಹಿತಿಯ ಆಧಾರದಲ್ಲಿ ಈ ಆರು ಶಂಕಿತರ ಫೋಟೋಗಳನ್ನು ಗುರುತಿಸಲಾಗಿದೆ. ದರೋಡೆ ದಿನದಂದು ಬಿಳಿ ಬಣ್ಣದ ಎರಡು ಇನ್ನೋವಾ ಕ್ರಿಸ್ಟಾ ಕಾರುಗಳಲ್ಲಿ ಬಂದಿದ್ದ ಗ್ಯಾಂಗ್‌ನಲ್ಲಿ ಒಟ್ಟು 7-8 ಜನ ಇದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಪೈಕಿ ಆರು ಜನರ ಫೋಟೋಗಳು ಲಭ್ಯವಾಗಿದ್ದು, ಉಳಿದವರ ಗುರುತು ಪತ್ತೆ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ.
ಮುಖಕ್ಕೆ ಮಾಸ್ಕ್ ಧರಿಸಿದ್ದರೂ ಸಿಸಿಟಿವಿಯಲ್ಲಿ ದೃಶ್ಯದಲ್ಲಿ ಕಾಣಿಸಿದಂತೆ 30-35 ವಯಸ್ಸಿನವರಾಗಿದ್ದಾರೆ. ಮತ್ತೊಬ್ಬ ಕೈಯಲ್ಲಿಕತ್ತಿ ಹಿಡಿದಿದ್ದ 28-32 ವಯಸ್ಸಿನ ವ್ಯಕ್ತಿಯಾಗಿದ್ದಾನೆ. ದರೋಡೆಯ ಸಮಯದಲ್ಲಿ ಕ್ಯಾಶ್ ವ್ಯಾನ್ ಬಳಿ 35-40 ವಯಸ್ಸಿನ ವ್ಯಕ್ತಿ ನಿಂತಿದ್ದನೆ. ಇನ್ನೋವಾ ಕಾರಿನ ಚಾಲಕ ಸ್ಥಾನದಲ್ಲಿ ಕಂಡಿದ್ದ 30ರ ವ್ಯಕ್ತಿ. ಎಸ್ಕೇಪ್ ಆಗುವಾಗ ಇನ್ನೋವಾ ಕಾರಿನಲ್ಲಿ ಕಂಡ ಇಬ್ಬರು ಯುವಕರು ಒಟ್ಟು 6 ರಿಂದ 7 ಮಂದಿ ಕೃತ್ಯದಲ್ಲಿ ಬಾಗಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಈ ಆರು ಜನರ ಫೋಟೋಗಳನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಚೇರಿ ಅಧಿಕೃತ ಎಕ್ಸ್ (ಟ್ವಿಟರ್) ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಯಾರಿಗಾದರೂ ಈ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ 112ಗೆ ಕರೆ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿ ಇರಿಸಲಾಗುವುದು ಮತ್ತು ರಿವಾರ್ಡ್ ಘೋಷಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
ದರೋಡೆ ನಡೆದ 48 ಗಂಟೆಗಳೊಳಗೇ ಈ ಫೋಟೋಗಳು ಲಭ್ಯವಾಗಿರುವುದು ಪೊಲೀಸರಿಗೆ ದೊಡ್ಡ ಬ್ರೇಕ್ ಥ್ರೂ ಎನ್ನಲಾಗುತ್ತಿದೆ. ಆದರೆ ಇನ್ನೂ ಆರೋಪಿಗಳನ್ನು ಬಂಧಿಸದಿರುವುದು ಆತಂಕ ಮೂಡಿಸಿದೆ. ಈ ಗ್ಯಾಂಗ್ ರಾಜ್ಯದಿಂದ ಹೊರಗೆ ತೆರಳಿರುವ ಸಾಧ್ಯತೆ ಇದ್ದು, ತಮಿಳುನಾಡು, ಕೇರಳ, ಮಹಾರಾಷ್ಟ್ರ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.
ಈ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ,ಈ ದರೋಡೆ ರಾಷ್ಟ್ರೀಯ ಮಟ್ಟದ ಗ್ಯಾಂಗ್ ಎಂಬ ಅನುಮಾನವಿದೆ. ಆದರೆ ಆರು ಶಂಕಿತರ ಫೋಟೋ ಲಭ್ಯವಾಗಿರುವುದು ದೊಡ್ಡ ಪ್ರಗತಿ. ಜನತೆಯ ಸಹಕಾರದಿಂದ 2-3 ದಿನಗಳಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ದರೋಡೆ ಪ್ರಕರಣದಲ್ಲಿ ಒಳಗಿನ ಸಂಪರ್ಕ (insider job) ಇರುವ ಸಾಧ್ಯತೆಯನ್ನೂ ಪೊಲೀಸರು ಆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಕ್ಯಾಶ್ ವ್ಯಾನ್ ಸಿಬ್ಬಂದಿಯ ವಿಚಾರಣೆ ಇನ್ನೂ ಮುಂದುವರಿದಿದೆ. ದರೋಡೆಯ ಸಮಯದಲ್ಲಿ ಕ್ಯಾಶ್ ವ್ಯಾನ್‌ನಲ್ಲಿ ಇದ್ದ ₹7.11 ಕೋಟಿ ರೂಪಾಯಿಯನ್ನು ಕೇವಲ 4 ನಿಮಿಷಗಳಲ್ಲಿ ಎತ್ತಿಕೊಂಡು ಹೋಗಿರುವುದು ಮುಂಚಿತವಾಗಿ ಯೋಜಿತ ದಾಳಿ ಎಂಬ ಅನುಮಾನ ಮೂಡಿಸಿದೆ.





