ಊಟದ ಬಳಿಕ ವಾಕಿಂಗ್ ಮಾಡುತ್ತೀರಾ? ಈ ಅಭ್ಯಾಸ ಲಾಭವೇ? ವೈದ್ಯರ ಸಲಹೆ ಏನು?

Untitled design 2026 03 05T072002.257

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಜಾಗೃತಿಯ ಭಾಗವಾಗಿ ಹಲವರು ಊಟ ಮಾಡಿದ ತಕ್ಷಣ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ವಿಶೇಷವಾಗಿ ಕಚೇರಿಯಲ್ಲಿ ದೀರ್ಘ ಕಾಲ ಕುಳಿತು ಕೆಲಸ ಮಾಡುವವರು ಅಥವಾ ತೂಕ ನಿಯಂತ್ರಣದ ಬಗ್ಗೆ ಕಾಳಜಿ ಇರುವವರು ಊಟದ ಬಳಿಕ ಸ್ವಲ್ಪ ನಡೆಯುವುದನ್ನು ಒಳ್ಳೆಯ ಅಭ್ಯಾಸವೆಂದು ಪರಿಗಣಿಸುತ್ತಾರೆ. ಆದರೆ ಈ ಅಭ್ಯಾಸ ಎಲ್ಲರಿಗೂ ಸೂಕ್ತವೇ? ಅಥವಾ ಕೆಲವರಿಗೆ ಹಾನಿಕಾರಕವೇ? ಎಂಬ ಪ್ರಶ್ನೆ ಬಹಳ ಮುಖ್ಯವಾಗಿದೆ.

ಪ್ರತಿಯೊಬ್ಬರ ದೇಹದ ರಚನೆ, ಜೀರ್ಣಕ್ರಿಯೆ ಮತ್ತು ಆರೋಗ್ಯ ಸ್ಥಿತಿ ವಿಭಿನ್ನವಾಗಿರುತ್ತದೆ. ಆದ್ದರಿಂದ ಸರಿಯಾದ ಮಾಹಿತಿ ತಿಳಿದುಕೊಂಡು ಮಾತ್ರ ಯಾವುದೇ ಆರೋಗ್ಯ ಅಭ್ಯಾಸವನ್ನು ಅನುಸರಿಸುವುದು ಉತ್ತಮ.

ತಜ್ಞರು ಏನು ಹೇಳುತ್ತಾರೆ?

ಊಟ ಮಾಡಿದ ತಕ್ಷಣವೇ ಚುರುಕಾಗಿ ಅಥವಾ ವೇಗವಾಗಿ ನಡೆಯುವುದು ಸಾಮಾನ್ಯವಾಗಿ ಸೂಕ್ತವಲ್ಲ. ಏಕೆಂದರೆ ನಾವು ಆಹಾರ ಸೇವಿಸಿದ ಬಳಿಕ ದೇಹದಲ್ಲಿನ ಹೆಚ್ಚಿನ ರಕ್ತಪ್ರವಾಹ ಜೀರ್ಣಾಂಗ ವ್ಯವಸ್ಥೆಯ ಕಡೆಗೆ ಸಾಗುತ್ತದೆ. ಇದು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಬಗ್ಗೆ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರ ಅಭಿಪ್ರಾಯವಾಗಿದೆ..

ಈ ಸಮಯದಲ್ಲಿ ತೀವ್ರ ವ್ಯಾಯಾಮ ಅಥವಾ ವೇಗದ ನಡಿಗೆ ಮಾಡಿದರೆ, ರಕ್ತಪ್ರವಾಹವು ಸ್ನಾಯುಗಳ ಕಡೆಗೆ ತಿರುಗಬಹುದು. ಇದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುವುದು ಅಥವಾ ಹೊಟ್ಟೆ ನೋವು, ಉಬ್ಬರು, ಆಮ್ಲೀಯತೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆದರೆ ಇದರಿಂದ ಊಟದ ನಂತರ ಸಂಪೂರ್ಣ ವಿಶ್ರಾಂತಿ ಮಾತ್ರವೇ ಬೇಕೆಂದು ಅರ್ಥವಲ್ಲ. ನಿಧಾನ ಮತ್ತು ಆರಾಮದಾಯಕ ನಡಿಗೆ ಯಾವುದೇ ಹಾನಿ ಮಾಡದು.

ಸರಿಯಾದ ಸಮಯ ಯಾವುದು?

ತಜ್ಞರ ಸಲಹೆಯ ಪ್ರಕಾರ, ಊಟ ಮಾಡಿದ 10 ರಿಂದ 15 ನಿಮಿಷಗಳ ನಂತರ ಲಘುವಾಗಿ ನಡೆಯುವುದು ಉತ್ತಮ. ವಿಶೇಷವಾಗಿ ಭಾರವಾದ ಊಟ ಮಾಡಿದಿದ್ದರೆ, ಮೊದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ನಂತರ 10 ರಿಂದ 20 ನಿಮಿಷಗಳ ಕಾಲ ನಿಧಾನಗತಿಯಲ್ಲಿ ನಡೆದುಬರುವುದು ಜೀರ್ಣಕ್ರಿಯೆಗೆ ಸಹಾಯಕ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ವೇಗ ಮುಖ್ಯವಲ್ಲ, ನಿಯಮಿತತೆ ಮುಖ್ಯ. ತುಂಬಾ ವೇಗವಾಗಿ ಅಥವಾ ದೂರ ನಡೆಯುವ ಅವಶ್ಯಕತೆ ಇಲ್ಲ.

ಊಟದ ನಂತರ ನಡೆಯುವುದರಿಂದಾಗುವ ಪ್ರಯೋಜನಗಳು

ಲಘು ನಡಿಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಿಂದ ಗ್ಯಾಸ್, ಹೊಟ್ಟೆ ಉಬ್ಬರು ಮತ್ತು ಭಾರವಾಗಿರುವ ಅನುಭವ ಕಡಿಮೆಯಾಗುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ವಿಶೇಷವಾಗಿ ಮಧುಮೇಹ ಹೊಂದಿರುವವರಿಗೆ ನಿಧಾನ ನಡಿಗೆ ಉಪಯುಕ್ತವಾಗಬಹುದು.

ಇನ್ನಷ್ಟು ಪ್ರಯೋಜನಗಳನ್ನು ನೋಡಿದರೆ

ಯಾರಿಗೆ ಎಚ್ಚರಿಕೆ ಅಗತ್ಯ?

ಆಮ್ಲೀಯತೆ, ಅಲ್ಸರ್, ಗಂಭೀರ ಜೀರ್ಣಕ್ರಿಯೆ ಸಮಸ್ಯೆಗಳು ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ. ವಿಶೇಷವಾಗಿ ಹಿರಿಯ ನಾಗರಿಕರು ಅಥವಾ ಗರ್ಭಿಣಿಯರು ತಮ್ಮ ದೈಹಿಕ ಸ್ಥಿತಿಗೆ ಅನುಗುಣವಾಗಿ ನಡಿಗೆ ಆಯ್ಕೆ ಮಾಡಬೇಕು.

ಊಟ ಮಾಡಿದ ತಕ್ಷಣವೇ ವೇಗವಾಗಿ ನಡೆಯುವುದು ಉತ್ತಮ ಅಭ್ಯಾಸವಲ್ಲ. ಆದರೆ 10–15 ನಿಮಿಷಗಳ ಬಳಿಕ ನಿಧಾನಗತಿಯಲ್ಲಿ 15–20 ನಿಮಿಷ ನಡೆದುಬರುವುದು ಆರೋಗ್ಯಕ್ಕೆ ಹಿತಕರ. ನಿಮ್ಮ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಅಭ್ಯಾಸವನ್ನು ರೂಪಿಸಿಕೊಳ್ಳುವುದು ಅತ್ಯಂತ ಮುಖ್ಯ.

Exit mobile version