ಕಿಡ್ನಿ ಸ್ಟೋನ್ ಈ ಪದ ಅತಿ ಹೆಚ್ಚು ವಯಸ್ಕರರ ಬಾಯಲ್ಲಿ ಕೇಳಿ ಬರುತ್ತಿತ್ತು. ಆದ್ರೇ ಇದೀಗ ಸಣ್ಣ ಮಕ್ಕಳಲ್ಲಿ ಕೂಡಾ ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬರ್ತಿದೆ. ಹಾಗಾದ್ರೆ ಇದನ್ನು ತಡೆಗಟ್ಟಲು ಯಾವೇಲ್ಲಾ ಕ್ರಮ ತೆಗೆದುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಅನ್ನುವುದು ತೀರ ಸಹಜವಾದ ಅನಾರೋಗ್ಯ ಸಮಸ್ಯೆಯಾಗಿ ಉಳಿದುಕೊಂಡಿದ್ದೆ. ಈಗ ಮಕ್ಕಳಲ್ಲೂ ಕೂಡ ಕಿಡ್ನಿ ಸ್ಟೋನ್ ಕಂಡುಬರುತ್ತಿರೋದು ಅಸಹಜವಾಗಿದ್ದು, ಪೋಷಕರು ಕೂಡ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಮಕ್ಕಳ ತಜ್ಞರೇ ಬೆಚ್ಚಿ ಬೀಳಿಸೋ ಮಾಹಿತಿ ನೀಡಿದ್ದು. ಪೋಷಕರೇ ಬೀ ಕೇರ್ ಫುಲ್ ಅಂತ ಹೇಳಿದ್ದಾರೆ.
ಕಿಡ್ನಿ ಸ್ಟೋನ್ ಯಾಕೆ ಹೆಚ್ಚುತ್ತಿದೆ?
- ಬೇಸಿಗೆಯಲ್ಲಿ ನೀರಿನ ಕೊರತೆ ರಕ್ತದಲ್ಲಿ ಖನಿಜಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ.
- ಪಿಜ್ಜಾ, ಬರ್ಗರ್, ಪ್ಯಾಕೆಟ್ ಜ್ಯೂಸ್ ನಂತಹ ಜಂಕ್ ಫುಡ್ ಯುರಿಕ್ ಆಸಿಡ್ ಹೆಚ್ಚಿಸುತ್ತದೆ.
- ಮಕ್ಕಳು ಶಾರೀರಿಕ ಚಟುವಟಿಕೆ ಕಡಿಮೆ ಮಾಡುವುದು ಮತ್ತು ಸೋಡಾ ಪಾನೀಯಗಳ ಸೇವನೆ.
ತಡೆಗಟ್ಟುವುದು ಹೇಗೆ?
- ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಲು ಒತ್ತು ನೀಡಿ.
- ಲವಣಕರಿತನ, ಸಿಹಿ ತಿಂಡಿಗಳನ್ನು ನಿಯಂತ್ರಿಸಿ.
- ಹಸಿರು ತರಕಾರಿ, ಸಿಟ್ರಸ್ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ.
- 2 ಗಂಟೆಗೊಮ್ಮೆ ಮಕ್ಕಳನ್ನು ಚಲಿಸುವಂತೆ ಪ್ರೋತ್ಸಾಹಿಸಿ.
ಸಮ್ಮರ್ ಹೀಟ್ ನಿಮ್ಮ ಕಿಡ್ನಿಗೆ ಡೇಂಜರ್.! ಜಂಕ್ ಫುಡ್ ತಿಂದ್ರೂ ಕಿಡ್ನಿ ಡ್ಯಾಮೇಜ್.!
ಬೇಸಿಗೆ ಶುರುವಾಯ್ತು ಅಂದ್ರೆ ಸಾಕು,ಅನಾರೋಗ್ಯಗಳು ಸಾಲು ಸಾಲಾಗಿ ವಕ್ಕರಿಸಿಕೊಳ್ಳುತ್ತೆ. ಈಗ ಕಿಡ್ನಿಗೂ ಕಂಟಕ ಎದುರಾಗಿದ್ದು, ಜಂಕ್ ಫುಡ್ ದಾಸರಾದವರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಸರಿಯಾಗಿ ನೀರು ಕುಡಿಯದೇ ಇರೋದ್ರಿಂದ ಡಿಹೈಡ್ರೇಷನ್ ಆಗಿ ಮಕ್ಕಳಲ್ಲೂ ಕಿಡ್ನಿ ಸಮಸ್ಯೆ ಹೆಚ್ಚಾಗಿದೆ. 5 ವರ್ಷಗಳ ಹಿಂದೆ ವಾರಕ್ಕೆ 4 ರಿಂದ 5 ಪ್ರಕರಣ ದಾಖಲಾಗಿದ್ರೆ, ಈಗ 10 ರಿಂದ 15ಕ್ಕೆ ಏರಿಕೆ ಆಗಿರೋದು ವೈದ್ಯರಿಗೂ ಕೂಡ ಆಶ್ಚರ್ಯ ವ್ಯಕ್ತ ಪಡಿಸುತ್ತಿದ್ದಾರೆ.
ಎಲ್ಲ ಅನಾರೋಗ್ಯ ಸಮಸ್ಯೆಗೂ, ನಮ್ಮ ಜೀವನ ಶೈಲಿನೇ ಕಾರಣವಾಗಿದ್ದು, ಮೊದಲು ಲೈಫ್ ಸ್ಟೈಲ್ ಮತ್ತು ನಮ್ಮ ಆಹಾರ ಪದ್ದತಿಯನ್ನ ಬದಲಾಯಿಸಿಕೊಳ್ಳೋದ್ರಿಂದ ವಯಸ್ಕರರಿಂದ ಹಿಡಿದು, ಮಕ್ಕಳವರೆಗೂ ಆರೋಗ್ಯವನ್ನು ಸುರಕ್ಷಿತವಾಗಿ, ಇಟ್ಟುಕೊಳ್ಳಬಹುದಾಗಿದೆ.