ಕೇಸರಿ (ಸಫ್ರಾನ್) ಎಂದರೆ ಕೇವಲ ಬಿರಿಯಾನಿ, ಪಾಯಸ ಅಥವಾ ಗರ್ಭಿಣಿಯರ ಹಾಲಿಗೆ ಬಣ್ಣ ಮತ್ತು ಪರಿಮಳ ನೀಡುವ ದುಬಾರಿ ಮಸಾಲೆ ಎಂದು ನೀವು ಭಾವಿಸಿದ್ದರೆ ತಪ್ಪು. ಆಯುರ್ವೇದದಲ್ಲಿ ಕೇಸರಿಯನ್ನು ಅದ್ಭುತ ಔಷಧಿಯಾಗಿ ಪರಿಗಣಿಸಲಾಗಿದೆ. ವಿಶೇಷವಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೇಸರಿ ನೀರನ್ನು ಕುಡಿಯುವ ಅಭ್ಯಾಸ ಮಾಡಿದರೆ. ಕೆಲವು ವಾರಗಳಲ್ಲೇ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾದ ಈ ಸಫ್ರಾನ್ ನೀರು ಆರೋಗ್ಯಕ್ಕೆ ಅದ್ಭುತ ಲಾಭ ನೀಡುತ್ತದೆ.
ಕೇಸರಿ ನೀರನ್ನು ಹೇಗೆ ತಯಾರಿಸಬೇಕು?
- 4-6 ಕೇಸರಿ ದಾರಗಳನ್ನು (strands) ಒಂದು ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಹಾಕಿ.
- 10-15 ನಿಮಿಷಗಳ ಕಾಲ ಅದನ್ನು ಒಂದಿಷ್ಟು ಬಿಡಿ (ರಾತ್ರಿ ಇಡೀ ನೆನೆಸಿದರೆ ಇನ್ನೂ ಉತ್ತಮ).
- ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನಿಧಾನವಾಗಿ ಕುಡಿಯಿರಿ. (ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಸೇರಿಸಿ ರುಚಿ ಹೆಚ್ಚಿಸಬಹುದು, ಆದರೆ ಹೆಚ್ಚು ಬಿಸಿ ನೀರು ಬಳಸಬೇಡಿ.)
ಬೆಳಗ್ಗೆ ಕೇಸರಿ ನೀರು ಕುಡಿಯುವುದರಿಂದಾಗುವ ಪ್ರಮುಖ ಆರೋಗ್ಯ ಪ್ರಯೋಜನಗಳು :
- ಚರ್ಮಕ್ಕೆ ಹೊಳಪು ಮತ್ತು ಆರೋಗ್ಯ : ಆಂಟಿಆಕ್ಸಿಡೆಂಟ್‌ಗಳು ಚರ್ಮದಲ್ಲಿ ಪಿಗ್ಮೆಂಟೇಶನ್ ಕಡಿಮೆ ಮಾಡಿ, ಕಾಂತಿ ಹೆಚ್ಚಿಸುತ್ತವೆ. ಕುಡಿಯುವುದರಿಂದ ಒಳಗಿನಿಂದಲೇ ಚರ್ಮ ಪೋಷಣೆಯಾಗುತ್ತದೆ.
- ಹಾರ್ಮೋನ್ ಬ್ಯಾಲೆನ್ಸ್ ಮತ್ತು ಮಹಿಳೆಯರ ಆರೋಗ್ಯ : ಋತುಚಕ್ರದ ಸಮಸ್ಯೆಗಳು, PMS ಸೆಳೆತ ಕಡಿಮೆಯಾಗುತ್ತದೆ. ಗರ್ಭಾವಸ್ಥೆಯಲ್ಲಿ (ಸರಿಯಾದ ಮೋತ್ರದಲ್ಲಿ) ಸಹಾಯಕವಾಗಬಹುದು.
- ಮನಸ್ಸಿನ ಶಾಂತಿ ಮತ್ತು ಮೂಡ್ ಬೂಸ್ಟ್ : ಒತ್ತಡ, ಆತಂಕ ಕಡಿಮೆಯಾಗಿ, ನಿದ್ರೆ ಸುಧಾರಿಸುತ್ತದೆ. ಡಿಪ್ರೆಶನ್ ಲಕ್ಷಣಗಳನ್ನು ನಿಯಂತ್ರಿಸಲು ಸಹಾಯಕ.
- ಜೀರ್ಣಕ್ರಿಯೆ ಸುಧಾರಣೆ : ಖಾಲಿ ಹೊಟ್ಟೆಯಲ್ಲಿ ಕುಡಿದರೆ ಜೀರ್ಣಾಗ್ನಿ ಹೆಚ್ಚಿ, ಉಬ್ಬರ, ಆಸಿಡಿಟಿ ಕಡಿಮೆಯಾಗುತ್ತದೆ.
- ಹೃದಯ ಮತ್ತು ಮೂಳೆಗಳ ಆರೋಗ್ಯ : ರಕ್ತ ಪರಿಚಲನೆ ಸುಧಾರಿಸಿ ಹೃದಯಕ್ಕೆ ಒಳ್ಳೆಯದು. ಕ್ಯಾಲ್ಸಿಯಂ ಸಹಾಯದಿಂದ ಮೂಳೆಗಳು ಬಲಗೊಳ್ಳುತ್ತವೆ.
- ಸಕರ್ ಕ್ರೇವಿಂಗ್ ಕಡಿಮೆ : ಸಿಹಿ ಆಹಾರದ ಆಸೆ ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಾಯಕ.
- ಇಮ್ಯೂನಿಟಿ ಮತ್ತು ಒಟ್ಟಾರೆ ಆರೋಗ್ಯ : ಉರಿಯೂತ ಕಡಿಮೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಎಚ್ಚರಿಕೆ: ಹೆಚ್ಚಿನ ಪ್ರಮಾಣದಲ್ಲಿ (10+ strands ದಿನಕ್ಕೆ) ಕುಡಿಯಬೇಡಿ. ಗರ್ಭಿಣಿಯರು ಅಥವಾ ಔಷಧಿ ಸೇವಿಸುವವರು ವೈದ್ಯರ ಸಲಹೆ ಪಡೆಯಿರಿ. ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ಮಾತ್ರ.
