ರಾತ್ರಿ ಊಟದ ನಂತರ ಒಂದು ಹಿಡಿ ಜೀರಿಗೆ ತಿಂದರೆ ತೂಕ ಇಳಿಯುತ್ತಾ?

Untitled design 2026 02 11T232842.840

ಭಾರತೀಯ ಅಡುಗೆಮನೆಯಲ್ಲಿ ಜೀರಿಗೆಗೆ (Cumin) ಅತ್ಯಂತ ಪ್ರಮುಖ ಸ್ಥಾನವಿದೆ. ಕೇವಲ ಅಡುಗೆಯ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ, ಆಯುರ್ವೇದದಲ್ಲಿ ಇದಕ್ಕೊಂದು ಪವಿತ್ರ ಸ್ಥಾನವಿದೆ. ಸಾಮಾನ್ಯವಾಗಿ ನಾವು ಜೀರ್ಣಕ್ರಿಯೆಗಾಗಿ ಊಟದ ನಂತರ ಜೀರಿಗೆ ಜಗಿಯುವುದನ್ನು ನೋಡಿದ್ದೇವೆ. ಆದರೆ, ಇತ್ತೀಚಿನ ಸಂಶೋಧನೆಗಳು ರಾತ್ರಿ ಊಟದ ನಂತರ ಜೀರಿಗೆ ಸೇವಿಸುವುದು ತೂಕ ಇಳಿಸಿಕೊಳ್ಳಲು (Weight Loss) ಸಹಕಾರಿ ಎಂಬ ಆಸಕ್ತಿದಾಯಕ ಮಾಹಿತಿಯನ್ನು ಹೊರಹಾಕಿವೆ.

ಬಯೋಇಂಟೆಲಿಜೆನ್ಸ್ (2026) ಮತ್ತು ‘ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್’ (2025) ವರದಿಗಳ ಪ್ರಕಾರ, ಜೀರಿಗೆಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ದ್ರವ್ಯರಾಶಿ ಸೂಚ್ಯಂಕ (BMI) ಮತ್ತು ಸೊಂಟದ ಸುತ್ತಳತೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಜೀರಿಗೆಯಲ್ಲಿರುವ ಉತ್ಕರ್ಷಣ ನಿರೋಧಕಗಳು (Antioxidants) ಮತ್ತು ಫೈಬರ್ ಅಂಶಗಳು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ದೇಹದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತವೆ.

ತೂಕ ಇಳಿಕೆಯಲ್ಲಿ ಜೀರಿಗೆಯ ಪಾತ್ರ:
  1. ಚಯಾಪಚಯ ಕ್ರಿಯೆ (Metabolism) ಹೆಚ್ಚಳ: ಜೀರಿಗೆಯು ದೇಹದ ಉಷ್ಣತೆಯನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುವ ಮೂಲಕ ಕೆಲೋರಿಗಳನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ಇದು ರಾಮಬಾಣ.

  2. ಜೀರ್ಣಕಾರಿ ಕಿಣ್ವಗಳ ಪ್ರಚೋದನೆ: ಜೀರಿಗೆಯನ್ನು ಜಗಿಯುವುದರಿಂದ ಲಾಲಾರಸ ಮತ್ತು ಜೀರ್ಣಕಾರಿ ಕಿಣ್ವಗಳು ಹೆಚ್ಚು ಉತ್ಪತ್ತಿಯಾಗುತ್ತವೆ. ಇದು ಆಹಾರವು ಶಕ್ತಿಯಾಗಿ ಪರಿವರ್ತನೆಯಾಗಲು ಸಹಾಯ ಮಾಡುತ್ತದೆ.

  3. ರಕ್ತದ ಸಕ್ಕರೆ ನಿಯಂತ್ರಣ: ಊಟದ ನಂತರ ರಕ್ತದಲ್ಲಿ ಇನ್ಸುಲಿನ್ ಮಟ್ಟ ಏರುವುದನ್ನು ಜೀರಿಗೆ ತಡೆಯುತ್ತದೆ. ಇನ್ಸುಲಿನ್ ಸಮತೋಲನದಲ್ಲಿದ್ದರೆ ದೇಹವು ಕೊಬ್ಬನ್ನು ಸಂಗ್ರಹಿಸುವ ಬದಲು ಅದನ್ನು ಬಳಸಿಕೊಳ್ಳುತ್ತದೆ.

  4. ಹಸಿವಿನ ನಿಯಂತ್ರಣ: ರಾತ್ರಿ ಊಟದ ನಂತರ ಜೀರಿಗೆ ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಇದು ತಡರಾತ್ರಿಯ ‘ಕ್ರೇವಿಂಗ್ಸ್’ ಅಥವಾ ಅನಗತ್ಯ ಹಸಿವನ್ನು ತಡೆಯುತ್ತದೆ.

ಸೇವಿಸುವ ಸರಿಯಾದ ಕ್ರಮ:
ಎಚ್ಚರಿಕೆ ಮತ್ತು ಅಡ್ಡಪರಿಣಾಮಗಳು:

ಜೀರಿಗೆಯನ್ನು ಮಿತವಾಗಿ ಸೇವಿಸಬೇಕು. ಅತಿಯಾದ ಸೇವನೆಯು ಎದೆಯುರಿ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತೀರಾ ಕಡಿಮೆ ಮಾಡಬಹುದು.

Exit mobile version