ಹಣ್ಣುಗಳ ರಸವನ್ನು ಕುಡಿದು ಲಾಭ ಪಡೆಯುವುದು ಎಲ್ಲರಿಗೂ ತಿಳಿದಿದೆ. ಆದರೆ, ಅದೇ ರೀತಿ ತರಕಾರಿಗಳಿಂದ ತಯಾರಿಸಿದ ಜ್ಯೂಸ್ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ತರಕಾರಿ ಜ್ಯೂಸ್ಗಳು ಪೋಷಕಾಂಶಗಳಿಂದ ತುಂಬಿದ ಪ್ರಕೃತಿಯ ಅಮೂಲ್ಯ ಉಡುಗೊರೆ. ಇವುಗಳ ನಿಯಮಿತ ಸೇವನೆಯಿಂದ ದೇಹದ ಒಳಹೊರಗೆ ಸಂಪೂರ್ಣ ಆರೋಗ್ಯವನ್ನು ಪಡೆಯಬಹುದು.
ದೇಹದ ತೂಕ ಕಡಿಮೆ ಮಾಡಲು: ಚೀನಿಕಾಯಿ ಜ್ಯೂಸ್
ದೇಹದ ತೂಕವನ್ನು ನಿಯಂತ್ರಿಸಲು ಮತ್ತು ಹೊಟ್ಟೆ ಭರ್ತಿಯಾಗಿದೆ ಎನ್ನುವ ಹೊಟ್ಟೆ ಉಬ್ಬರ ದೀರ್ಘಕಾಲ ಪಡೆಯಲು ಚೀನಿಕಾಯಿ ಜ್ಯೂಸ್ ಉತ್ತಮ. ಇದರಲ್ಲಿ ವಿಟಮಿನ್‌ಗಳು ಮಾತ್ರವಲ್ಲದೆ, ಮೆಗ್ನೀಸಿಯಂ, ಕಬ್ಬಿಣ ಮತ್ತು ಫಾಸ್ಫರಸ್ನಂತಹ ಖನಿಜಾಂಶಗಳು ಸಮೃದ್ಧವಾಗಿವೆ. ಇವು ಚಯಾಪಚಯ ಕ್ರಿಯೆಯನ್ನು ಹುರಿದುಂಬಿಸುತ್ತದೆ. ವಾರಕ್ಕೆ ಎರಡು ಬಾರಿ ಈ ರಸವನ್ನು ತಯಾರಿಸಿ ಕುಡಿಯಲು ಪ್ರಾರಂಭಿಸಿ. ರುಚಿಗಾಗಿ ಸಕ್ಕರೆ ಬದಲಿಗೆ ಜೇನುತುಪ್ಪ, ಸ್ವಲ್ಪ ನಿಂಬೆರಸ ಮತ್ತು ಪುದೀನಾ ಎಲೆಗಳನ್ನು ಸೇರಿಸಬಹುದು.
ಕಣ್ಣು ಮತ್ತು ರಕ್ತ ಸಮಸ್ಯೆಗೆ ಪರಿಹಾರ: ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು. ಇದು ಫೈಬರ್ (ನಾರು) ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದೆ. ವಿಟಮಿನ್-ಎ ಯಿಂದ ತುಂಬಿದ ಈ ರಸ ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಸಮಸ್ಯೆಗಳಿಂದ ರಕ್ಷಿಸುತ್ತದೆ. ಕಬ್ಬಿಣದ ಉತ್ತಮ ಮೂಲವಾಗಿರುವ ಇದು ರಕ್ತಹೀನತೆ (Anemia) ಸಮಸ್ಯೆಯಿರುವವರಿಗೆ ಔಷಧಿಯಂತೆ. ಇದರ ಸೇವನೆಯಿಂದ ಚರ್ಚೆ ಮತ್ತು ತ್ವಚೆ ಸಹ ಉಜ್ಜ್ವಲವಾಗುತ್ತದೆ.
ರಕ್ತದೊತ್ತಡ ಮತ್ತು ಶಕ್ತಿಗೆ ಔಷಧಿ: ಬೀಟ್ರೂಟ್ ಜ್ಯೂಸ್
ಬೀಟ್ರೂಟ್ ಜ್ಯೂಸ್ ಅನ್ನು ಅನೇಕ ರೋಗಗಳಿಗೆ ಪರಿಹಾರವಾಗಿ ಸೂಚಿಸಲಾಗುತ್ತದೆ. ಇದರಲ್ಲಿ ಮ್ಯಾಂಗನೀಸ್, ವಿಟಮಿನ್‌ಗಳು ಮತ್ತು ಕಬ್ಬಿಣದಂಶ ಧಾರಾಳವಾಗಿದೆ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಈ ರಸಕ್ಕೆ ಒಂದು ಚಿಟಿಕೆ ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸವನ್ನು ಬೆರೆಸಿ ಕುಡಿದರೆ, ರಕ್ತದೊತ್ತಡ (BP) ಸಮಸ್ಯೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಒಂದು ಶಕ್ತಿವರ್ಧಕ ಪಾನೀಯ.
ಮುಖ್ಯ ಸೂಚನೆಗಳು
ತರಕಾರಿ ಜ್ಯೂಸ್ ತಯಾರಿಸಿದ ನಂತರ 15-20 ನಿಮಿಷಗಳೊಳಗೇ ಕುಡಿಯುವುದು ಉತ್ತಮ. ಇದರಿಂದ ಎಲ್ಲಾ ಪೋಷಕಾಂಶಗಳನ್ನು ಪೂರ್ಣವಾಗಿ ಪಡೆಯಬಹುದು. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆ ಇದ್ದರೆ, ಡಾಕ್ಟರರ ಸಲಹೆಯ ಮೇಲೆ ಈ ರಸಗಳನ್ನು ಸೇವಿಸುವುದು ಉತ್ತಮ.