ಇತ್ತೀಚಿಗೆ ಕಿನ್ನತೆಗೆ ಒಳಗಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಕೆಲವರಿಗೆ ಕಿನ್ನತೆ ಹಾಗೂ ಬೇಸರದ ನಡುವೆ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಒಮ್ಮೊಮ್ಮೆ ಅವರಿಗೆ ಏನಾಗುತ್ತಿದೆ ಎಂಬೂದೇ ತಿಳಿದಿರುವುದಿಲ್ಲ. ಇತ್ತಿಚಿಗಷ್ಟೇ ಬೆಂಗಳೂರಿನಲ್ಲಿ ಒಬ್ಬ ಟೆಕ್ಕಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆದರೂ ಭಾನುವಾರ ಆನ್ಲೈನ್ ಡೆಲಿವೆರಿ ಮೂಲಕ ನನ್ನ ಒಂಟಿತನ ಮರೆಯುತ್ತಿದ್ದೇನೆ ಎಂದು ಹೇಳಿದ್ದರು. ಹೀಗೆ ಎಷ್ಟೋ ಜನ ನಮಗೆ ಗೊತ್ತಿಲದೇ ,ನಮ್ಮ ಅಕ್ಕ ಪಕ್ಕದಲ್ಲೆ ಖಿನ್ನತೆಗೆ ಒಳಗಾಗಿರುತ್ತಾರೆ.
ಖಿನ್ನತೆ ಬರಲು ಯಾವುದೇ ವಯೋಮಿತಿ ಇಲ್ಲ. ಎಲ್ಲಾ ರೀತಿಯ ಮಕ್ಕಳು, ಮಹಿಳೆಯರು ಪುರುಷರು ಯುವಕರು ಹೀಗೆ ಯಾರಿಗಾದರೂ ಬರಬಹುದಾಗಿದೆ. ಇದು ಮಾನಸಿಕ ಸಮಸ್ಯೆಯಾಗಿದೆ. ಒಂಟಿತನ, ನಿರಾಸೆ ಹಾಗೂ ಇತರರಿಂದ ತಿರಸ್ಕಾರಕ್ಕೊಳಗಾದರೆ ವ್ಯಕ್ತಿ ಖಿನ್ನತೆಗೆ ಒಳಗಾಗಬಹುದು.
ಖಿನ್ನತೆ ಎಂದರೇನು..?
ಖಿನ್ನತೆಯು ಒಂದು ಗಂಭೀರ ಮಾನಸಿಕ ಆರೋಗ್ಯ ಸ್ಥಿತಿಯಾಗಿದೆ, ಇದು ವ್ಯಕ್ತಿಯ ಆಲೋಚನೆ, ಭಾವನೆ ಮತ್ತು ನಡವಳಿಕೆಯನ್ನು ಆಳವಾಗಿ ಪ್ರಭಾವಿಸುತ್ತದೆ. ಸಾಮಾನ್ಯ ಬೇಸರ ಅಥವಾ ದುಃಖವು ಕೆಲವೇ ದಿನಗಳಲ್ಲಿ ಕಡಿಮೆಯಾಗುವುದುಂಟು, ಆದರೆ ಖಿನ್ನತೆಯು ದೀರ್ಘಕಾಲದವರೆಗೆ ಇರುವ ಅಸ್ವಸ್ಥತೆಯಾಗಿದೆ.
ಖಿನ್ನತೆಯ ಪ್ರಕಾರಗಳು:
1. ಮೈಲ್ಡ್ ಡಿಪ್ರೆಶನ್ (Mild Depression)
ಮೈಲ್ಡ್ ಡಿಪ್ರೆಶನ್ ಅಥವಾ ಮಂದ ಖಿನ್ನತೆಯು, ಖಿನ್ನತೆಯ ಪ್ರಾರಂಭಿಕ ಹಂತವಾಗಿದೆ. ಇಲ್ಲಿ ವ್ಯಕ್ತಿಯು ನಿರಂತರವಾಗಿ ದುಃಖ, ನಿರಾಸೆ ಅನುಭವಿಸುತ್ತಾರೆ.ರೆ ಈ ಲಕ್ಷಣಗಳ ತೀವ್ರತೆ ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ವ್ಯಕ್ತಿಯು ಸಾಮಾಜಿಕವಾಗಿ ಸಕ್ರಿಯವಾಗಿರಬಹುದು, ಆದರೆ ಅದರಲ್ಲಿ ಆನಂದ ಅಥವಾ ಉತ್ಸಾಹ ಕಂಡುಬರುವುದಿಲ್ಲ.
2.ಮಾಡರೇಟ್ ಡಿಪ್ರೆಶನ್ (Moderate Depression)
ಮಧ್ಯಮ ಮಟ್ಟದ ಖಿನ್ನತೆಯಲ್ಲಿ ದೈನಂದಿನ ಜೀವನದ ಮೇಲೆ ಇದರ ಪ್ರಭಾವ ಗಮನಾರ್ಹವಾಗಿರುತ್ತದೆ. ಕೆಲಸದ Productivity, ಶಾಲಾ ಪಾಠ, ಮನೆಯ ಕೆಲಸ, ಮತ್ತು ಸಾಮಾಜಿಕ ಸಂಬಂಧಗಳು ಸ್ಪಷ್ಟವಾಗಿ ಬಾಧಿತವಾಗುತ್ತವೆ. ವ್ಯಕ್ತಿಯು ಹೆಚ್ಚಿನ ಸಮಯ ದುಃಖಿತನಾಗಿ, ಕಿರಿಕಿರಿಯಾಗಿ ಕಾಣಿಸಬಹುದು.
3. ಸಿವಿಯರ್ ಡಿಪ್ರೆಶನ್ (Severe Depression)
ಸಿವಿಯರ್ ಡಿಪ್ರೆಶನ್ ಖಿನ್ನತೆಯು, ಖಿನ್ನತೆಯ ಅತ್ಯಂತ ತೀವ್ರವಾದ ರೂಪವಾಗಿದೆ. ಈ ಸ್ಥಿತಿಯಲ್ಲಿನ ವ್ಯಕ್ತಿಯ ದೈನಂದಿನ ಕಾರ್ಯನಿರ್ವಹಣೆ ಗಣನೀಯವಾಗಿ ಕುಂಠಿತವಾಗುತ್ತದೆ. ಮೂಲ ಕಾರ್ಯಗಳಾದ ಸ್ನಾನ ಮಾಡುವುದು, ಊಟ ಮಾಡುವುದು, ಅಥವಾ ಹಾಸಿಗೆದಿಂದ ಏಳುವುದು ಸಹ ಕಷ್ಟಸಾಧ್ಯವಾಗಬಹುದು. ಈ ಹಂತವು ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ಈ ಹಂತದಲ್ಲಿ ಔಷಧ ಮತ್ತು ಥೆರಪಿಯ ಅವಶ್ಯಕತೆ ಇರುತ್ತದೆ.
ಖಿನ್ನತೆಯ ಲಕ್ಷಣಗಳು:
ದೇಹದಲ್ಲಿ ನೋವು, ಶಕ್ತಿಹೀನತೆ, ನಿದ್ರೆ ಮತ್ತು ಆಹಾರದ ಮಾದರಿಯಲ್ಲಿ ಹಠಾತ್ ಬದಲಾವಣೆಗಳು ಕಂಡುಬರುತ್ತವೆ. ಮಾನಸಿಕವಾಗಿ ನಿರಂತರ ದುಃಖ, ಚಡಪಡಿಕೆ, ಏಕಾಂಗಿತನ ಮತ್ತು ಯಾವುದರಲ್ಲೂ ಆಸಕ್ತಿ ಕಳೆದುಕೊಳ್ಳಬಹುದು.
ಖಿನ್ನತೆ ತಪ್ಪಿಸುವ ವಿಧಾನ
ಅವರ ಭಾವನೆಗಳನ್ನು ಅರ್ಥಮಾಡಲು ಪ್ರಯತ್ನಿಸಿ ಮತ್ತು ಅವರಿಗೆ ಸಧ್ಯವಾದಷ್ಟು ಸಮಯಕೊಡಿ.ಅವರು ಹೇಳುವ ಪ್ರತಿ ಮಾತನ್ನು ನೀವೇನು ನಿರ್ಣಯಿಸದೇ ಕೇಳಿಸಿಕೊಳ್ಳಿ. ಇವುಗಳೊಟ್ಟಿಗೆ ಅವರು ಹೇಳುವುದಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿ.
ಇವೆಲ್ಲವುದರ ಜೊತೆಗೆ ನೀವು ಅವರೊಟ್ಟಿಗೆ ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆಗಳನ್ನು ತಿಳಿದು ಸಾಧ್ಯವಾದಷ್ಟು ಪರಿಹಾರ ನೀಡಿ.ಎಲ್ಲಾ ಸಮಸ್ಯೆಗೂ ಕೇವಲ ಔಷಧಗಳೇ ಕೆಲಸ ಮಾಡುವುದಿಲ್ಲ ಕೆಲವೊಮ್ಮೆ ನಮ್ಮ ಒಂದು ಪ್ರೀತಿಯ ಮಾತು ಸಹ ಔಷಧವಾಗಿ ಪರಿಣಮಿಸಬಹುದು. ಹೀಗಾಗಿ ಅವರಿಗೆ ಹೆಚ್ಚು ಸಮಯಕೊಟ್ಟು





