ಬೆಂಗಳೂರು: ಜಗತ್ತಿನ ಅನೇಕ ರಾಷ್ಟ್ರಗಳ ವಿರುದ್ಧ ಟ್ರಂಪ್ ಟ್ಯಾರಿಫ್ ವಾರ್ ಘೋಷಿಸಿದ್ದಾರೆ. ಭಾರತವೂ ಸೇರಿದಂತೆ ಚೀನಾ, ಮೆಕ್ಸಿಕೋ, ದಕ್ಷಿಣ ಕೊರಿಯಾ ಮೊದಲಾದ ರಾಷ್ಟ್ರಗಳಿಗೆ ಮನಸ್ಸಿಗೆ ಬಂದಂತೆ ಟ್ಯಾರಿಫ್ ಹೆಚ್ಚಿಸಿದ್ದಾರೆ. ಆದರೆ, ಇದು ಕಾನೂನುಬಾಹಿರ ಎಂದು ಅಮೆರಿಕದ ಫೆಡರಲ್ ಕೋರ್ಟ್ ಹೇಳಿದೆ.
ಅಮೆರಿಕದ ಫೆಡರಲ್ ಕೋರ್ಟ್ ಎಂದರೆ, ಭಾರತದಲ್ಲಿ ಹೈಕೋರ್ಟ್ ಇದ್ದಂತೆ. ನ್ಯೂಯಾರ್ಕ್ ಫೆಡರಲ್ ಕೋರ್ಟ್ ಟ್ರಂಪ್ ಸರ್ಕಾರದ ಟ್ಯಾರಿಫ್ ವಾರ್ ಕುರಿತಂತೆ, ಈ ತೆರಿಗೆ ಯುದ್ಧ ಯಾಕೆ ಎಂಬ ಪ್ರಶ್ನೆಗೆ ಸೂಕ್ತ ಕಾರಣಗಳನ್ನ ನೀಡೋದ್ರಲ್ಲಿ ಫೇಲ್ ಆಗಿದೆ. ಆದರೆ, ಅದನ್ನ ಪ್ರಶ್ನೆ ಮಾಡಿ ಟ್ರಂಪ್ ಸರ್ಕಾರ ಅಮೆರಿಕದ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸೋದಕ್ಕೆ ಅವಕಾಶ ಇದೆ. ಈ ಕೇಸಿನಲ್ಲಿ ಭಾರತದ ಮೇಲೆ ಹೇರಿರುವ ಟ್ಯಾರಿಫ್ ವಾರ್ ಪ್ರಸ್ತಾಪ ಇಲ್ಲ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನಿರ್ಧಾರದಿಂದಾಗಿ ಅಮೆರಿಕ ಸರ್ಕಾರಕ್ಕೆ ಲಾಭಕ್ಕೆ ಬದಲು ನಷ್ಟವೇ ಹೆಚ್ಚು. ಕಳೆದ ಏಪ್ರಿಲ್‌ನಿಂದ ಚೀನಾ, ಮೆಕ್ಸಿಕೋ, ಕೆನಡಾಗಳಿಂದ ಅಮೆರಿಕ್ಕೆ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಲಾಗಿದೆ. ನ್ಯೂಯಾರ್ಕ್ ಕೋರ್ಟ್ ಟ್ರಂಪ್ ಸರ್ಕಾರದ ಟ್ಯಾರಿಫ್ ವಾರ್‌ಗೆ ತಡೆ ನೀಡಿದ್ದರೂ, ಸುಪ್ರೀಂಕೋರ್ಟ್‌ಗೆ ಹೋಗೋಕೆ ಅವಕಾಶ ಕೊಟ್ಟಿರೋದ್ರಿಂದ ಟ್ರಂಪ್ ಅವರ ನಿರ್ಧಾರ ಚಾಲ್ತಿಯಲ್ಲಿರುತ್ತದೆ. ಟ್ಯಾರಿಫ್ ಕುರಿತಂತೆ ಇರೋ ಗೊಂದಲ ಕಂಟಿನ್ಯೂ ಆಗುತ್ತೆ.
ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕ ಸರ್ಕಾರಕ್ಕೆ ಬರೋ ಆದಾಯ 159 ಬಿಲಿಯನ್ ಡಾಲರ್ ನಷ್ಟವಾಗ್ತಿದೆಯಂತೆ. ನಷ್ಟ ಏನಂದ್ರೆ, ಅಮೆರಿಕದ ಇಂಪೋರ್ಟರ್ಸ್ ಅಂದ್ರೆ, ಆಮದು ಮಾಡಿಕೊಳ್ಳೋ ಉದ್ಯಮಿಗಳು, ಸಂಸ್ಥೆಗಳಿಗೆ ಅದರಿಂದ ಆಗುವ ನಷ್ಟವನ್ನ ಅಮೆರಿಕ ಸರ್ಕಾರವೇ ರೀಫಂಡ್ ಮಾಡಿಕೊಡಬೇಕು. ಜುಲೈ ಹೊತ್ತಿಗೇ ಈ ರೀತಿ ಕೊಡಬೇಕಾದ ರೀಫಂಡ್ 159 ಬಿಲಿಯನ್ ಡಾಲರ್ ಆಗಿದ್ಯಂತೆ. ಇಷ್ಟು ದೊಡ್ಡ ಮೊತ್ತ ರೀಫಂಡ್ ಮಾಡಬೇಕಾಗುತ್ತೆ ಅನ್ನೋದನ್ನೇ ಅಮೆರಿಕ ಸರ್ಕಾರ ನಿರೀಕ್ಷೆ ಮಾಡಿರಲಿಲ್ವಂತೆ.
ಹೀಗಾದರೆ, ಆ ನಷ್ಟವನ್ನ ತುಂಬಬೇಕಾದ ಜವಾಬ್ದಾರಿ ಅಮೆರಿಕನ್ ಜನಗಳ ಮೇಲೆ ಬೀಳುತ್ತೆ. ಆಗ ಅಮೆರಿಕದಲ್ಲಿ ಲಕ್ಷಾಂತರ ಜನ ಕೆಲಸ ಕಳೆದುಕೊಳ್ಳಬಹುದು. ಅದರಲ್ಲೂ ಕಡಿಮೆ ವೇತನದವರು ಬೀದಿಗೆ ಬೀಳಬಹುದು. ಸೇವಿಂಗ್ಸ್ ಕಡಿಮೆಯಾಗಬಹುದು. ಹಾಗೇನಾದ್ರೂ ಆದರೆ, ಮೆಡಿಕಲ್ ಕೇರ್ ಮತ್ತು ಸೋಷಿಯಲ್ ಸೆಕ್ಯುರಿಟಿ ವೆಚ್ಚವೇ ಉಲ್ಟಾಪಲ್ಟಾ ಆಗಬಹುದು. ಜೊತೆಗೆ, ಅಮೆರಿಕದ ಬೆದರಿಕೆಯಿಂದಾಗಿ ಮಿತ್ರ ರಾಷ್ಟ್ರಗಳು ದೂರ ಆಗ್ತಾ ಹೋದ್ರೆ, ಮತ್ತೆ ಅದನ್ನ ಪುನರ್ ಸ್ಥಾಪನೆ ಮಾಡೋದು ಕಷ್ಟ ಅಂತಾ ಅಮೆರಿಕದ ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅವರ ನಿರ್ಧಾರದಿಂದ ಕಷ್ಟಕ್ಕೆ ಸಿಕ್ಕಿ ಹಾಕ್ಕೊಂಡಿರೋದು ಅಮೆರಿಕದ ಅಂತಾರಾಷ್ಟ್ರೀಯ ರಾಯಭಾರಿಗಳು ಮತ್ತು ಅಧಿಕಾರಿಗಳು. ಅವರಿಗೆ ಟ್ರಂಪ್ಗೆ ಹೇಳೋಕೂ ಆಗದೇ, ಬಿಡೋಕೂ ಆಗದೆ, ಈಗ ಯಾವ್ಯಾವ ದೇಶಗಳ ಮೇಲೆ ಟ್ರಂಪ್ ಟ್ಯಾರಿಫ್ ಘೋಷಣೆ ಮಾಡಿದ್ದಾರೋ, ಆಯಾ ದೇಶಗಳ ಅಧಿಕಾರಿಗಳ ಜೊತೆ ಸ್ವಲ್ಪ ವೇಯ್ಟ್ ಮಾಡಿ ಅಂತಾ ಕೇಳ್ಕೊಳ್ತಿದ್ಧಾರೆ. ಮೊದ ಮೊದಲು ಕಾದು ನೋಡುವ ತಂತ್ರ ಫಾಲೋ ಮಾಡ್ತಿದ್ದ ಹಲವು ದೇಶಗಳ ಉನ್ನತ ಅಧಿಕಾರಿಗಳು ಈಗ ತಾಳ್ಮೆ ಕಳೆದುಕೊಳ್ತಿದ್ದಾರೆ.
ಅಮೆರಿಕದ ಆರ್ಥಿಕ ವ್ಯವಸ್ಥೆ ಡೇಂಜರ್ ಝೋನ್ಗೆ ಹೋಗಲಿದೆ ಎನ್ನುವುದು ಆರ್ಥಿಕ ತಜ್ಞರ ವಾದ. ಆದರೆ, ಟ್ರಂಪ್ ಇರೋವ್ರು ಆರಂಭದಿಂದಲೂ ಅಮೆರಿಕದ ವಿರುದ್ಧ ನಡೆಯುತ್ತಾ ಇದ್ದ ಟ್ಯಾರಿಫ್ ಸಮರವನ್ನು ನಾವೀಗ ಅವರಿಗೇ ತಿರುಗಿಸ್ತಾ ಇದ್ದೇವೆ. ಸುಪ್ರೀಂಕೋರ್ಟ್ ಏನಾದರು, ಟ್ರಂಪ್ ಅವರ ನಿರ್ಧಾರ ತಪ್ಪು ಅಂತಾ ಅಂಥಾ ಘೋಷಿಸಿಬಿಟ್ರೆ, ಆಗ ನಿಜವಾಗಿ ಅಮೆರಿಕದ ಆರ್ಥಿಕತೆ ಡೇಂಜರ್ ಝೋನ್ಗೆ ಹೋಗುತ್ತೆ ಅಂತಾ ವಾದಿಸ್ತಿದ್ದಾರೆ.
ಅಮೆರಿಕವನ್ನ ಮತ್ತೆ ಪವರ್‌ಫುಲ್ ಮಾಡೋಕೆ ಟ್ಯಾರಿಫ್ ವಾರ್ ಒಂದೇ ಮಾರ್ಗ ಅನ್ನೋದು ಟ್ರಂಪ್ ಪರ ನಿಂತವರ ವಾದ.
ವಿಚಿತ್ರ ಅಂದ್ರೆ, ಅಮೆರಿಕದ ಈಗಿನ ಆರ್ಥಿಕ ಸ್ಥಿತಿ ಯಾವ ಮಟ್ಟಕ್ಕೆ ಇದೆ ಅಂದ್ರೆ, ಟ್ರಂಪ್ ಅವರ ನಿರ್ಧಾರ ಸರಿ ಅಂತಾ ಫೆಡರಲ್ ಕೋರ್ಟ್ ತೀರ್ಪು ಕೊಟ್ರೂ, ಅಮೆರಿಕದ ಅರ್ಥ ವ್ಯವಸ್ಥೆ ಹಾಳಾಗುತ್ತೆ. ನಷ್ಟ ಆದವರಿಗೆ ರೀಫಂಡ್ ಕೊಡೋಕೇ ಆಗಲ್ಲ. ಅಮೆರಿಕದ ಟ್ಯಾರಿಫ್ ವಾರ್ ತಪ್ಪು ಅಂತಾ ಬಂದ್ರೂ ಪ್ರಾಬ್ಲಂ. ಯಾಕಂದ್ರೆ, ಆಗಬೇಕಾದ ಡ್ಯಾಮೇಜ್ ಆಗಿ ಹೋಗಿದೆ. ಟ್ರಂಪ್ ಅವರಿಗೆ ಈಗ ಬಹುತೇಕ ರಾಷ್ಟ್ರಗಳ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಬಹುತೇಕ ಅಂತಾರಾಷ್ಟ್ರೀಯ ಸಂಬಂಧಗಳು ನೆಗೋಷಿಯೇಷನ್ ಹಂತ ದಾಟಿ ಹೋಗಿವೆ.