ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಗಿಫ್ಟ್: ವಿವಾಹದ ವಿಡಿಯೋ ವೈರಲ್

Untitled design 2026 02 12T113224.187

ಸಾಮಾನ್ಯವಾಗಿ ಮದುವೆಗಳಲ್ಲಿ ಅತಿಥಿಗಳಿಗೆ ಸಿಹಿತಿಂಡಿ, ನೆನಪು ಉಡುಗೊರೆ ಅಥವಾ ಸಣ್ಣ ಕಾಣಿಕೆಗಳನ್ನು ನೀಡುವುದು ರೂಢಿ. ಆದರೆ ಸೌದಿ ಅರೇಬಿಯಾದಲ್ಲಿ ನಡೆದ ವಿಭಿನ್ನ ಮದುವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಕಾರಣವೇನೆಂದರೆ, ಮದುವೆಗೆ ಆಗಮಿಸಿದ ಅತಿಥಿಗಳಿಗೆ ವಧುವಿನ ಸಹೋದರನೇ ಸ್ವತಃ ಶುದ್ಧ ಚಿನ್ನದ ಬಿಸ್ಕಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ..

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ. ಸುಮಾರು 100 ಗ್ರಾಂ ತೂಕವಿರುವ ಚಿನ್ನದ ಬಿಸ್ಕಟ್‌ಗಳನ್ನು ಅತಿಥಿಗಳಿಗೆ ನೀಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಅತಿಥಿಗಳು ಸಾಲಿನಲ್ಲಿ ನಿಂತು ಈ ಅಪರೂಪದ ಉಡುಗೊರೆಯನ್ನು ಸ್ವೀಕರಿಸಿದ್ದಾರೆ…

ಚಿನ್ನದ ಬೆಲೆ ಗಗನಕ್ಕೇರಿದ ಸಮಯದಲ್ಲಿ ಅದ್ಭುತ ಕಾಣಿಕೆ

ಚಿನ್ನದ ಬೆಲೆ ಸಾಮಾನ್ಯ ಜನರ ಕೈಗೆಟುಕದ ಮಟ್ಟಿಗೆ ಏರಿಕೆಯಾಗಿದೆ. ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಈಗಾಗಲೇ 1 ಲಕ್ಷ ರೂಪಾಯಿ ಗಡಿ ದಾಟಿರುವ ಹಿನ್ನೆಲೆ, 100 ಗ್ರಾಂ ಚಿನ್ನದ ಬಿಸ್ಕಟ್ ಉಡುಗೊರೆಯಾಗಿ ನೀಡುವುದು ಎಷ್ಟು ದೊಡ್ಡ ಮೊತ್ತವೋ ಊಹಿಸಬಹುದು. ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಕನಸಿನಂತೆಯೇ ತೋರುತ್ತದೆ.

ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಸಮಾರಂಭ ಭರ್ಜರಿಯಾಗಿ ನಡೆಯುತ್ತಿರುವುದು ಕಾಣಿಸುತ್ತದೆ. ವಧುವಿನ ಸಹೋದರ ಅತಿಥಿಗಳ ಬಳಿ ತೆರಳಿ ಚಿನ್ನದ ಬಿಸ್ಕಟ್‌ಗಳನ್ನು ಹಸ್ತಾಂತರಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲವರು ಆಘಾತದಿಂದ ನಗುತ್ತಾ ಸ್ವೀಕರಿಸುತ್ತಿರುವರೆಂದರೆ, ಕೆಲವರು ಮೊದಲಿಗೆ ನಿರಾಕರಿಸಲು ಪ್ರಯತ್ನಿಸುತ್ತಿರುವುದೂ ಕಾಣುತ್ತದೆ.

ಈ ದೃಶ್ಯವು ಮದುವೆಯ ವೈಭವ ಮತ್ತು ಕುಟುಂಬದ ಆರ್ಥಿಕ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿರುವ ಈ ವಿಡಿಯೋ, 74 ಸಾವಿರಕ್ಕೂ ಅಧಿಕ ವ್ಯೂವ್ ಗಳಿಸಿದೆ. ನೂರಾರು ಜನರು ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲವರು “ನಮಗೂ ಇಂತಹ ಮದುವೆಗೆ ಆಹ್ವಾನ ಕೊಟ್ಟರೆ ಖಂಡಿತವಾಗಿ ಹೋಗುತ್ತೇವೆ” ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು “ಇಂತಹ ಮದುವೆಗಳ ಮಾಹಿತಿ ಇದ್ದರೆ ಮುಂಚಿತವಾಗಿ ತಿಳಿಸಿ” ಎಂದು ಮನವಿ ಮಾಡಿದ್ದಾರೆ. ಆದರೆ ಕೆಲವರು ಇದನ್ನು ಅತಿರೇಕದ ಪ್ರದರ್ಶನ ಎಂದು ಟೀಕಿಸಿದ್ದಾರೆ.

ಮದುವೆ ಯಾವಾಗ, ಎಲ್ಲಿ?

ಈ ಮದುವೆ ಯಾವ ದಿನಾಂಕದಲ್ಲಿ ಮತ್ತು ಸೌದಿ ಅರೇಬಿಯಾದ ಯಾವ ಭಾಗದಲ್ಲಿ ನಡೆದಿತು ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಮಾತ್ರ ವೇಗವಾಗಿ ಹರಡುತ್ತಿದ್ದು, ಹಲವರ ಕುತೂಹಲ ಕೆರಳಿಸಿದೆ. ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಸೌದಿಯ ಶ್ರೀಮಂತ ಕುಟುಂಬದ ಮದುವೆ ಎಂದು ಹೇಳಿಕೊಂಡಿದ್ದಾರೆ.

Exit mobile version