ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ದ ಪಾಕಿಸ್ತಾನ ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.
ಪಾಕಿಸ್ತಾನ ತನ್ನ ರಾಜಧಾನಿಯಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳನ್ನು ಆಹ್ವಾನಿಸಿ, 5 ಸ್ಟಾರ್ ಸೆರೆನಾ ಹೊಟೆಲ್‌ನಲ್ಲಿ ವಾಸ್ತವ್ಯ ಮತ್ತು ಮಾತುಕತೆಗೆ ವ್ಯವಸ್ಥೆ ಮಾಡಿತ್ತು. ಭದ್ರತೆಗೂ ಭಾರಿ ಖರ್ಚು ಮಾಡಲಾಗಿತ್ತು. ಆದರೆ ಮಾತುಕತೆ ಸಂಪೂರ್ಣ ವಿಫಲವಾಗಿದೆ. ಈಗ ಪಾಕಿಸ್ತಾನದಲ್ಲಿ ದೊಡ್ಡ ಪ್ರಶ್ನೆ ಎದುರಾಗಿದೆ “ಹೊಟೆಲ್ ಬಿಲ್ ಯಾರು ಭರಿಸುತ್ತಾರೆ?”
ಪಾಕಿಸ್ತಾನದ ತಲೆನೋವು :
- ಅಮೆರಿಕ ಮತ್ತು ಇರಾನ್ ಅತಿಥಿಗಳಿಗೆ ಸ್ಟಾರ್ ಹೊಟೆಲ್ ವ್ಯವಸ್ಥೆ, ಭಾರಿ ಭದ್ರತೆ ಮತ್ತು ಇತರ ವೆಚ್ಚಗಳು ಭಾರೀ ಮೊತ್ತವಾಗಿದೆ.
- ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಈ ವೆಚ್ಚ ಭರಿಸುವುದು ದೊಡ್ಡ ಹೊರೆಯಾಗಿದೆ.
- “ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಈ ವಿಫಲ ಪ್ರಯತ್ನ ಬೇಕಿತ್ತಾ?” ಎಂಬ ಟೀಕೆಗಳು ಪಾಕಿಸ್ತಾನದಲ್ಲಿ ಜೋರಾಗಿವೆ.
IMF . https://t.co/7lawC16oGa
— Paresh Rawal (@SirPareshRawal) April 12, 2026
ಪರೇಶ್ ರಾವಲ್ ಪ್ಯಾರಡಿ ಉತ್ತರ ವೈರಲ್ :
ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಕೆ.ಜಿ.ಎಸ್. ದಿಲ್ಲೋನ್ ಅವರು ಸಾಮಾಜಿಕ ಮಾಧ್ಯಮದಲ್ಲಿ “ಹೊಟೆಲ್ ಬಿಲ್ ಯಾರು ಕ್ಲಿಯರ್ ಮಾಡುತ್ತಾರೆ?” ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಬಾಲಿವುಡ್ ನಟ ಪರೇಶ್ ರಾವಲ್ ಅವರ ಪ್ಯಾರಡಿ ಎಕ್ಸ್ ಖಾತೆಯಿಂದ ಒಂದೇ ಪದದಲ್ಲಿ ಉತ್ತರ ಬಂದಿದೆ. “IMF” (ಅಂತಾರಾಷ್ಟ್ರೀಯ ಹಣಕಾಸು ನಿಧಿ).
ಈ ಉತ್ತರ ಭಾರಿ ವೈರಲ್ ಆಗಿದ್ದು, ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಪಾಕಿಸ್ತಾನ ಈಗ ಅಮೆರಿಕ-ಇರಾನ್ ಮಾತುಕತೆಯ ವೆಚ್ಚವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮಾತುಕತೆ ವಿಫಲವಾದರೂ, ಹೊಟೆಲ್ ಬಿಲ್ ಮತ್ತು ಭದ್ರತೆ ವೆಚ್ಚವನ್ನು ಭರಿಸುವುದು ಪಾಕಿಸ್ತಾನಕ್ಕೆ ದೊಡ್ಡ ಸವಾಲಾಗಿದೆ.





