ನಿಲ್ದಾಣದಲ್ಲಿ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ: ತಪ್ಪಿದ ಭಾರೀ ಅನಾಹುತ!

Your paragraph text (1)

ವಾಷಿಂಗ್ಟನ್: ಅಮೆರಿಕದ ಮೊಂಟಾನಾ ರಾಜ್ಯದ ಕಾಲಿಸ್ಪೆಲ್ ನಗರ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಅಪಘಾತವೊಂದು ಸಂಭವಿಸಿದೆ. ಇಳಿಯುತ್ತಿದ್ದ ಸಿಂಗಲ್ ಎಂಜಿನ್ ವಿಮಾನವೊಂದು ನಿಲ್ದಾಣದಲ್ಲಿ ನಿಂತಿದ್ದ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಾಲ್ಕು ಜನರನ್ನು ಹೊತ್ತೊಯ್ಯುತ್ತಿದ್ದ ಸೊಕಾಟಾ ಟಿಬಿಎಂ 700 ಟರ್ಬೊಪ್ರೊಪ್ ವಿಮಾನವು ರನ್‌ವೇ ಕೊನೆಯಲ್ಲಿ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಕಾಲಿಸ್ಪೆಲ್ ಪೊಲೀಸ್ ಮುಖ್ಯಸ್ಥ ಜೋರ್ಡಾನ್ ವೆನೆಜಿಯೊ ಮತ್ತು ಫೆಡರಲ್ ವಿಮಾನಯಾನ ಆಡಳಿತ (ಎಫ್‌ಎಎ) ತಿಳಿಸಿದೆ. ಅಪಘಾತದಿಂದ ಉಂಟಾದ ಬೆಂಕಿಯು ಹುಲ್ಲಿನ ಪ್ರದೇಶಕ್ಕೆ ಹರಡಿದರೂ, ಪೈಲಟ್ ಮತ್ತು ಮೂವರು ಪ್ರಯಾಣಿಕರು ಸುರಕ್ಷಿತವಾಗಿ ಇಳಿದರು.

ದಕ್ಷಿಣದಿಂದ ಬಂದ ವಿಮಾನವು ಇಳಿಯುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಈ ವಿಮಾನ ನಿಲ್ದಾಣವು ವಾಯುವ್ಯ ಮೊಂಟಾನಾದ ಕಾಲಿಸ್ಪೆಲ್ ನಗರದ ದಕ್ಷಿಣ ಭಾಗದಲ್ಲಿದ್ದು, ಸುಮಾರು 30,000 ಜನಸಂಖ್ಯೆಯ ನಗರಕ್ಕೆ ಸೇರಿದ ಸಣ್ಣ ನಿಲ್ದಾಣವಾಗಿದೆ. ವಿಮಾನವನ್ನು 2011ರಲ್ಲಿ ನಿರ್ಮಿಸಲಾಗಿದ್ದು, ವಾಷಿಂಗ್ಟನ್‌ನ ಪುಲ್‌ಮನ್‌ನ ಮೀಟರ್ ಸ್ಕೈ ಎಲ್‌ಎಲ್‌ಸಿ ಕಂಪನಿಯ ಒಡೆತನದಲ್ಲಿದೆ ಎಂದು ಎಫ್‌ಎಎ ದಾಖಲೆಗಳು ತಿಳಿಸಿವೆ. ಕಂಪನಿ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ. ಅಪಘಾತದ ತನಿಖೆ ಮುಂದುವರಿದಿದೆ.

Exit mobile version