ಅಮೆರಿಕ: ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿರುವ ಮೈಕ್ರೋಸಾಫ್ಟ್ ಕಂಪನಿಯ ಕ್ಯಾಂಪಸ್‌ನಲ್ಲಿ ಭಾರತೀಯ ಮೂಲದ ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಘಟನೆಯಿಂದಾಗಿ, ಮಲ್ಟಿನ್ಯಾಷನಲ್ ಕಂಪನಿಯಾದ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಗಳ ಮೇಲೆ ಅತಿಯಾದ ಕೆಲಸದ ಒತ್ತಡ ಹೇರಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಭಾರತದ ಇಂದೋರ್ ಮೂಲದ 28 ವರ್ಷದ ಪ್ರತೀಕ್ ಪಾಂಡೆ ಎಂಬ ಸಾಫ್ಟ್‌ವೇರ್ ಎಂಜಿನಿಯರ್, ಆಗಸ್ಟ್ 19ರ ಸಂಜೆ ಮೈಕ್ರೋಸಾಫ್ಟ್‌ನ ಮೌಂಟೇನ್ ವ್ಯೂ ಕ್ಯಾಂಪಸ್‌ಗೆ ಪ್ರವೇಶಿಸಿದ್ದರು. ಆದರೆ, ಆಗಸ್ಟ್ 20ರ ಮುಂಜಾನೆ ಅವರು ಶವವಾಗಿ ಪತ್ತೆಯಾಗಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಕಚೇರಿಯ ರಾತ್ರಿ ಪಾಳಿಯ ಸಿಬ್ಬಂದಿ ಕೆಲಸ ನಿರ್ವಹಿಸುವ ವೇಳೆ ಪ್ರತೀಕ್‌ರವರ ಮೃತದೇಹ ಕಂಡುಬಂದಿದೆ.
ಪೊಲೀಸರ ಆರಂಭಿಕ ತನಿಖೆಯಲ್ಲಿ ಮೃತದೇಹದ ಸ್ಥಿತಿಯಿಂದ ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಕ್ರಿಮಿನಲ್ ಘಟನೆಯ ಸೂಚನೆ ಕಂಡುಬಂದಿಲ್ಲ. ಆದರೂ, ಈ ಘಟನೆಯನ್ನು ಪೊಲೀಸರು ಕ್ರಿಮಿನಲ್ ತನಿಖೆಯಾಗಿ ಪರಿಗಣಿಸಿಲ್ಲ ಎಂದು ವರದಿಯಾಗಿದೆ.
ಕುಟುಂಬದ ಆತಂಕ
ಮೃತ ಪ್ರತೀಕ್‌ರವರ ಕುಟುಂಬಸ್ಥರು ಈ ಘಟನೆಗೆ ತೀವ್ರ ಕೆಲಸದ ಒತ್ತಡವೇ ಕಾರಣವಿರಬಹುದು ಎಂದು ಶಂಕಿಸಿದ್ದಾರೆ. ಪ್ರತೀಕ್ ಹಲವು ಬಾರಿ ರಾತ್ರಿಯಿಡೀ ಕೆಲಸ ಮಾಡುತ್ತಿದ್ದರು. ಕೆಲಸದ ಒತ್ತಡದಿಂದ ಆತನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರಬಹುದು ಎಂದು ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.