ರಷ್ಯಾದಲ್ಲಿ ಭೂಕಂಪದ ಬೆನ್ನಲ್ಲೇ 600 ವರ್ಷಗಳ ನಂತರ ಜ್ವಾಲಾಮುಖಿ ಸ್ಫೋಟ

Untitled design 2025 08 03t205616.691

ರಷ್ಯಾ, ಕಮ್ಮಟ್ಕಾ: 600 ವರ್ಷಗಳ ನಂತರ ರಷ್ಯಾದ ಕ್ರಾಶೆನ್ನಿಕೋವ್ ಜ್ವಾಲಾಮುಖಿ ಮತ್ತೆ ಸ್ಫೋಟಗೊಂಡಿದೆ. ಇದು 2025ರ ಆಗಸ್ಟ್ 3ರಂದು ನಡೆದಿದ್ದು, ಸುನಾಮಿ ಎಚ್ಚರಿಕೆಯನ್ನು ಫ್ರೆಂಚ್ ಪಾಲಿನೇಷ್ಯಾ ಮತ್ತು ಚಿಲಿಯವರೆಗೆ ವಿಸ್ತರಿಸಿದೆ. ಈ ಪ್ರಕೃತಿ ವಿಕೋಪವು ಜನರಲ್ಲಿ ಕುತೂಹಲದ ಜೊತೆಗೆ ಭಯದ ವಾತಾವರಣವನ್ನೂ ಸೃಷ್ಟಿಸಿದೆ.

ಕುರಿಲ್ ದ್ವೀಪಗಳಲ್ಲಿ ಸಂಭವಿಸಿದ ಈ ಭೂಕಂಪವು ರಿಕ್ಟರ್ ಮಾಪಕದಲ್ಲಿ 7.0ಕ್ಕೂ ಹೆಚ್ಚಿನ ತೀವ್ರತೆಯನ್ನು ದಾಖಲಿಸಿದೆ ಎಂದು ರಷ್ಯಾದ ಭೂವಿಜ್ಞಾನ ತಜ್ಞರು ತಿಳಿಸಿದ್ದಾರೆ. ಈ ಭೂಕಂಪದ ಆಘಾತವು ಕಮ್ಮಟ್ಕಾ ದ್ವೀಪದಲ್ಲಿರುವ ಕ್ರಾಶೆನ್ನಿಕೋವ್ ಜ್ವಾಲಾಮುಖಿಯನ್ನು ಜಾಗೃತಗೊಳಿಸಿರಬಹುದು ಎಂದು ಊಹಿಸಲಾಗಿದೆ. “ಬುಧವಾರದ ಭೂಕಂಪಕ್ಕೂ ಈ ಜ್ವಾಲಾಮುಖಿ ಸ್ಫೋಟಕ್ಕೂ ನಿಕಟ ಸಂಬಂಧವಿರಬಹುದು. ಈ ಘಟನೆಯು ಕಮ್ಮಟ್ಕಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಕ್ರಾಶೆನ್ನಿಕೋವ್‌ನಲ್ಲಿ 600 ವರ್ಷಗಳ ನಂತರ ಮೊದಲ ಬಾರಿಗೆ ಸಂಭವಿಸಿದೆ,” ಎಂದು ರಷ್ಯಾದ ಜ್ವಾಲಾಮುಖಿ ತಜ್ಞೆ ಓಲ್ಲಾ ಗಿರಿನಾ ಹೇಳಿದ್ದಾರೆ.

ಕ್ರಾಶೆನ್ನಿಕೋವ್ ಜ್ವಾಲಾಮುಖಿಯು ಕೊನೆಯ ಬಾರಿಗೆ 1463ರಲ್ಲಿ ಲಾವಾ ಚಿಮ್ಮಿತ್ತು ಎಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ. ಈಗ, ಶತಮಾನಗಳ ನಿದ್ರೆಯ ನಂತರ, ಈ ಜ್ವಾಲಾಮುಖಿಯು ಮತ್ತೆ ಚಿಮ್ಮಿದ್ದು, ಆಕಾಶದಲ್ಲಿ ಬಿಳಿ ಬೂದಿಯ ಮೋಡಗಳನ್ನು ಚಿಮ್ಮಿಸಿದೆ. ಜಾಲತಾಣಗಳಲ್ಲಿ ಈ ಸ್ಫೋಟದ ದೃಶ್ಯಗಳು ವೈರಲ್ ಆಗಿದೆ.

“ಈ ಜ್ವಾಲಾಮುಖಿಯ ಸ್ಫೋಟವು ಕೇವಲ ಸ್ಥಳೀಯವಾಗಿ ಮಾತ್ರವಲ್ಲ, ಜಾಗತಿಕವಾಗಿಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಸುನಾಮಿ ಎಚ್ಚರಿಕೆಯಿಂದಾಗಿ ಕರಾವಳಿ ಪ್ರದೇಶಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ,” ಎಂದು ಓಲ್ಲಾ ಗಿರಿನಾ ಎಚ್ಚರಿಸಿದ್ದಾರೆ. ಭೂಕಂಪದಿಂದ ಉಂಟಾದ ಭೂಮಿಯ ಒಳಗಿನ ಒತ್ತಡವು ಜ್ವಾಲಾಮುಖಿಯನ್ನು ಚಿಮ್ಮಿಸಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಈ ಘಟನೆಯಿಂದ ಕಮ್ಮಟ್ಕಾ ದ್ವೀಪದ ಸುತ್ತಮುತ್ತಲಿನ ಪರಿಸರದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಜ್ವಾಲಾಮುಖಿ ಸ್ಫೋಟದಿಂದ ಉಂಟಾಗುವ ಬೂದಿಯು ವಾಯುಮಂಡಲದಲ್ಲಿ ಹರಡಿದರೆ, ಅದು ಸ್ಥಳೀಯ ಹವಾಮಾನದ ಮೇಲೆ ಪರಿಣಾಮ ಬೀರಬಹುದು. ಇದರ ಜೊತೆಗೆ, ಸುನಾಮಿ ಭೀತಿಯಿಂದ ಕರಾವಳಿ ನಗರಗಳಲ್ಲಿ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ. ರಷ್ಯಾದ ಸರ್ಕಾರವು ಈ ವಿಕೋಪದಿಂದ ಉಂಟಾಗಬಹುದಾದ ಅಪಾಯಗಳನ್ನು ಎದುರಿಸಲು ತುರ್ತು ಕ್ರಮಗಳನ್ನು ಕೈಗೊಂಡಿದೆ.

Exit mobile version