ಜಪಾನ್‌ನಲ್ಲಿ ನಾಳೆ (ಜುಲೈ 5) ಭೂಕಂಪ ಮತ್ತು ಸುನಾಮಿ ಸಂಭವಿಸಲಿದೆ ಎಂಬ ದಶಕಗಳ ಹಿಂದಿನ ಭವಿಷ್ಯವಾಣಿಯು ಏಷ್ಯಾದಾದ್ಯಂತ ಆತಂಕವನ್ನುಂಟುಮಾಡಿದೆ. ಈ ಭವಿಷ್ಯವಾಣಿಯಿಂದಾಗಿ ಜಪಾನ್‌ಗೆ ತೆರಳಲು ಜನರು ಹಿಂದೇಟಾಕುತ್ತಿದ್ದಾರೆ.
ಈ ಭವಿಷ್ಯವಾಣಿಯು 2021ರಲ್ಲಿ ರಿಯೋ ತತ್ಸುಕಿ ಎಂಬಾಕೆಯಿಂದ ರಚಿತವಾದ ‘ದಿ ಫ್ಯೂಚರ್ ಐ ಸೀ’ ಎಂಬ ಮಾಂಗಾದಿಂದ ಬಂದಿದೆ. ‘ನ್ಯೂ ಬಾಬಾ ವಂಗ’ ಎಂದು ಕರೆಯಲ್ಪಡುವ ತತ್ಸುಕಿ, 1995ರ ಕೋಬೆ ಭೂಕಂಪ ಮತ್ತು 2011ರ ಟೊಹೊಕು ಸುನಾಮಿಯನ್ನು ಊಹಿಸಿದ್ದರು. ಇತ್ತೀಚೆಗೆ, ಜಪಾನ್‌ನ ಟೋಕರಾ ದ್ವೀಪಗಳಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜುಲೈ 5ರಂದು ದೊಡ್ಡ ಭೂಕಂಪ ಆಗಲಿದೆ ಎಂಬ ಆತಂಕ ಜನರಲ್ಲಿ ಮತ್ತಷ್ಟು ಹೆಚ್ಚಿಸಿದೆ.
ಜಪಾನ್ ಮತ್ತು ಫಿಲಿಪೈನ್ಸ್ ನಡುವಿನ ಸಮುದ್ರದಡಿಯಲ್ಲಿ ಬಿರುಕು ರೂಪುಗೊಂಡು, 2011ರ ಜಪಾನ್ ಸುನಾಮಿಗಿಂತ ಮೂರು ಪಟ್ಟು ದೊಡ್ಡದಾದ ಭಾರೀ ಅಲೆಗಳು ಉಂಟಾಗಲಿವೆ ಎಂಬ ಬಾಬಾ ವಂಗರ ಭವಿಷ್ಯವಾಣಿ ನಿಜವಾಗುತ್ತ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.
ಹೌದು, ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಈ ಪ್ರದೇಶದಲ್ಲಿ ಭೂಗರ್ಭದಲ್ಲಿ ಇಂತಹದ್ದೇ ಚಟುವಟಿಕೆಯನ್ನು ಕಂಡುಹಿಡಿದಿದ್ದು, ಭವಿಷ್ಯದಲ್ಲಿ ದೊಡ್ಡ ಭೂಕಂಪದ ಸಾಧ್ಯತೆಯ ಎಚ್ಚರಿಕೆಯನ್ನು ನೀಡಿವೆ.
ಕಳೆದ 1,400 ವರ್ಷಗಳಲ್ಲಿ, ಜಪಾನ್‌ನ ನಂಕೈ ತ್ರೋವೇನಲ್ಲಿ ಪ್ರತಿ 100 ರಿಂದ 200 ವರ್ಷಗಳಿಗೊಮ್ಮೆ ‘ಮೆಗಾ-ಭೂಕಂಪ’ ಸಂಭವಿಸಿದೆ. ಇದರ ಇತ್ತೀಚಿನ ಘಟನೆ 1946ರಲ್ಲಿ ಸಂಭವಿಸಿತ್ತು, ಇದು ರಿಕ್ಟರ್ ಮಾಪಕದಲ್ಲಿ 8.1 ರಿಂದ 8.4 ತೀವ್ರತೆಯನ್ನು ದಾಖಲಿಸಿತ್ತು. 2011ರಲ್ಲಿ ಸಂಭವಿಸಿದ 9.0 ರಿಂದ 9.1 ತೀವ್ರತೆಯ ಭೂಕಂಪವು ಜಪಾನ್‌ನ ಇತಿಹಾಸದ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿತ್ತು, ಇದು ವಿನಾಶಕಾರಿ ಸುನಾಮಿಗೆ ಕಾರಣವಾಯಿತು.
ಮುಂದಿನ 30 ವರ್ಷಗಳಲ್ಲಿ ನಂಕೈ ಸ್ಟ್ರೇಟ್‌ನಲ್ಲಿ 7.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸುವ ಸಾಧ್ಯತೆ ಶೇ.82 ಇದೆ. ಇಂತಹ ಭೂಕಂಪವು 298,000 ಜನರ ಸಾವಿಗೆ ಕಾರಣವಾಗಬಹುದು ಮತ್ತು 2 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದು ಜಪಾನ್ ಭೂಕಂಪ ಸಂಶೋಧನಾ ಸಂಸ್ಥೆ (JERA) ಅಂದಾಜಿಸಿದೆ.
ಈ ತತ್ಸುಕಿಯ ಭವಿಷ್ಯವಾಣಿಗಳು ಮತ್ತು ಇತ್ತೀಚಿನ ಭೂಕಂಪದ ಚಟುವಟಿಕೆಗಳು ಜಪಾನ್ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿವೆ.





