ಡಿಯಾಗೋ ಗಾರ್ಸಿಯಾ ದ್ವೀಪ ರಕ್ಷಣೆಗೆ ಬ್ರಿಟನ್ ಸಬ್‌ ಮರೀನ್..!

ವರದಿ: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್

ಟೆಹರಾನ್ : ಇರಾನ್ ಹಾಗೂ ಅಮೆರಿಕಾದ ನಡುವಿನ ಯುದ್ಧ 22ನೇ ದಿನಕ್ಕೆ ಕಾಲಟ್ಟಿದ್ದು ಮತ್ತಷ್ಟು ಭೀಕರತೆಯನ್ನ ಪಡೆಯುತ್ತಿದೆ. ಇದರಿಂದಾಗಿ ಇಡೀ ವಿಶ್ವವೇ ಗ್ಯಾಸ್, ಪೆಟ್ರೊಲ್, ಡಿಸೇಲ್ ಸೇರಿದಂತೆ ಹಲವು ವಸ್ತುಗಳಿಗೆ ತೊಂದರೆಯುಂಟಾಗಿದ್ದು, ಈ 2 ದೇಶಗಳ ಯುದ್ಧದಿಂದಾಗಿ ಸಾಮಾನ್ಯ ಜನರು ಪರಾದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಡಿಯಾಗೋ ಗಾರ್ಸಿಯಾ ರಕ್ಷಣೆಗೆ ಸಬ್ ಮರೀನ್ 

ಅಮೆರಿಕಾ ಸಹಾಯಕ್ಕೆ ನಿಂತಿರುವ ಬ್ರಿಟನ್‌ನ ಡಿಯಾಗೋ ಗಾರ್ಸಿಯಾ ಮೇಲೆ ಇರಾನ್ ಮಿಸೈಲ್ ದಾಳಿಯನ್ನ ನಡೆಸಿದ್ದು, ಇದು ಅಮೆರಿಕಕ್ಕೆ ಅಚ್ಚರಿಯನ್ನ ಉಂಟು ಮಾಡಿದೆ. ಯಾಕೆಂದರೆ ಈವರೆಗೆ ಅಮೆರಿಕಾ ಇರಾನ್ ಬಳಿ ಕೇವಲ 2 ಸಾವಿರ ರೇಂಜ್ ಹೋಗುವಂತಹ ಮಿಸೈಲ್‌ ಅನ್ನು ಮಾತ್ರ ಹೊಂದಿದೆ ಎಂದು ಅಂದಾಜಿಸಿತ್ತು. ಆದರೆ 4 ಸಾವಿರ ಕಿಲೋಮೀಟರ್ ರೇಂಜ್‌ನ ಮಿಸೈಲ್ ದಾಳಿಯನ್ನ ಕಂಡು ಇದೀಗ ಅಮೆರಿಕ ಶಾಕ್‌ ಆಗಿದೆ. ಇದು ಒಂದು ರೀತಿಯಲ್ಲಿ ಬ್ರಿಟನ್‌ಗೂ ಕೂಡ ವಾರ್ನಿಂಗ್ ಎನ್ನಬಹುದಾಗಿದೆ. ಅಲ್ಲದೇ, ಇರಾನನ್ನೂ ನಿಯಂತ್ರನಕ್ಕೆ ತರಲು ಅಣು ಬಾಂಬ್ ಹೊತ್ತ ಸಬ್ಮರೀನ್‌ ಅನ್ನೂ ಕೂಡ ನಿಯೋಜಿಸಲಾಗಿದೆ. ಇದರಿಂದಾಗಿ ಮತ್ತಷ್ಟು ತೀವ್ರತೆಗೆ ಕಾಲಿಡಲಿದ್ಯಾ ಎಂಬುದನ್ನ ನೋಡಬೇಕಾಗಿದೆ.

ಇರಾನ್‌ಗೆ ಅಮೆರಿಕಾ ವಾರ್ನಿಂಗ್ 

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಅದಷ್ಟು ಬೇಗ ಗ್ರೀನ್ ಸಿಗ್ನಲ್ ನೀಡುವಂತೆ ಇರಾನ್‌ಗೆ ಅಮೆರಿಕಾ ವಾರ್ನಿಂಗ್ ನೀಡಿದೆ. ಒಂದು ವೇಳೆ ಹಾರ್ಮುಜ್ ದ್ವೀಪವನ್ನ ತೆರವುಗೊಳಿಸದಿದ್ದಲ್ಲಿ ನಿಮ್ಮ ಸರ್ವನಾಶ ಕಟ್ಟಿಟ್ಟ ಬುತ್ತಿ ಎಂದು ಇರಾನ್‌ಗೆ ವಾರ್ನಿಂಗ್ ನೀಡಿದ್ದು, ಇದು ಇರಾನ್‌ ಮತ್ತಷ್ಟು ಕೆರಳುವಂತೆ ಮಾಡಿದೆ.

ನಟಾಂಜ್ ಮೇಲಿನ ಆಟ್ಯಾಕ್‌ಗೆ ಇರಾನ್ ಕೌಂಟರ್

ಅಣು ಸ್ಥಾವರದ ನಟಾಂಜ್ ಮೇಲಿನ ಆಟ್ಯಾಕ್ ನಂತರ ಕೆರಳಿರುವ ಇರಾನ್ , ಇಸ್ರೇಲ್‌ನ ಡಿಮೋನದ ಸಾರ್ವಜನಿಕ ಪ್ರದೇಶದ ಮೇಲೆ ದಾಳಿಯನ್ನ ಮಾಡಿದೆ. ಈ ದಾಳಿಯಲ್ಲಿ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಕೂಡ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮಂಗಳೂರಿಗೆ ಬಂತು ಗ್ಯಾಸ್ ಹೊತ್ತ ಹಡಗು 

ಇದೇಲ್ಲದರ ನಡುವೆ ಗಮನಾರ್ಹ ವಿಷಯವೆಂದರೆ ಹಾರ್ಮುಜ್ ದ್ವೀಪದಿಂದ ಗ್ಯಾಸ್ ಹೊತ್ತಿರುವಂತಹ ಆಕ್ವಾ ಟೈಟನ್ ಹೆಸರಿನ ಹಡಗೊಂದು ಇದೀಗ ಮಂಗಳೂರಿನ ಬಂದರಿಗೆ ತಲುಪಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಗ್ಯಾಸ್ ಸಮಸ್ಯೆ ಬಗೆಹರಿಯುತ್ತ ಎಂಬುದನ್ನ ಕಾದು ನೋಡಬೇಕಾಗಿದೆ. ಯಾಕೆಂದರೆ ಈಗಾಗಲೇ ಗ್ಯಾಸ್ ಶಾರ್ಟೆಜ್‌ನಿಂದಾಗಿ ಹಲವು ಹೋಟೆಲ್‌ಗಳು ಬಂದ್ ಆಗಿದ್ದು ಹೋಟೆಲ್ ಉದ್ಯಮಿಗಳು ಸೇರಿದಂತೆ ಸಾಮಾನ್ಯ ಜನರು ಪರದಾಡುವಂತಹ ಸ್ಥಿತಿ ಬಂದು ತಲುಪಿದೆ. ಒಟ್ಟಿನಲ್ಲಿ ಈ ಯುದ್ಧ ಕೊನೆಗೊಂಡು ಅದಷ್ಟು ಬೇಗ ಎಲ್ಲವೂ ಸರಿಹೋದರೆ ಸಾಕು ಎಂಬುದು ಎಲ್ಲರ ಒತ್ತಾಸೆಯಾಗಿದೆ.

| Reported by: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್
Exit mobile version