ತೆಹ್ರಾನ್/ವಾಷಿಂಗ್ಟನ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನಿನ ಹಿರಿಯ ನಾಯಕರು ಹತ್ಯೆಯಾದ ಘಟನೆಗೆ ಪ್ರತೀಕಾರವಾಗಿ, ಇರಾನ್ ನಡೆಸಿದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಮೂವರು ಅಮೆರಿಕನ್ ಸೈನಿಕರು ಮೃತಪಟ್ಟು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.. ಅಮೆರಿಕದ ಕೇಂದ್ರೀಯ ಕಮಾಂಡ್ (ಸೆಂಟ್ಕಾಂ) ಭಾನುವಾರ ಈ ಸಾವು-ನೋವುಗಳನ್ನು ಅಧಿಕೃತವಾಗಿ ದೃಢಪಡಿಸಿದೆ.
ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಹಲವು ಸೈನಿಕ ತಾಣಗಳ ಮೇಲೆ ಏರ್‌ಸ್ಟ್ರೈಕ್ ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಹಿರಿಯ ನಾಯಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಅಮೆರಿಕದ ಸೇನಾ ಅಧಿಕಾರಿಗಳ ಪ್ರಕಾರ, ಇರಾನ್ ತನ್ನ ಪ್ರತೀಕಾರದ ಭಾಗವಾಗಿ ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ಸೈನಿಕ ನೆಲೆಗಳು ಹಾಗೂ ಮಿತ್ರ ರಾಷ್ಟ್ರಗಳ ಸೌಲಭ್ಯಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಕೆಲವು ಕ್ಷಿಪಣಿಗಳನ್ನು ಗಗನದಲ್ಲೇ ತಡೆಹಿಡಿಯಲಾಗಿದ್ದು, ಕೆಲವು ನೆಲೆಗಳಿಗೆ ನೇರ ಹಾನಿಯಾಗಿದೆ. ಇದರಿಂದ ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಇರಾನ್ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಅಮೆರಿಕ–ಇಸ್ರೇಲ್ ದಾಳಿಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸೈನಿಕರಷ್ಟೇ ಅಲ್ಲದೆ ಸಾಮಾನ್ಯ ನಾಗರಿಕರೂ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಲವು ಸೈನಿಕ ತಾಣಗಳು ಮತ್ತು ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಈ ಹಿನ್ನೆಲೆ ಇರಾನ್ ಸರ್ಕಾರ ‘ಕಠಿಣ ಪ್ರತೀಕಾರ’ದ ಎಚ್ಚರಿಕೆ ನೀಡಿತ್ತು.
ವಿವಿಧ ದೇಶಗಳು ತಮ್ಮ ನಾಗರಿಕರಿಗೆ ಎಚ್ಚರಿಕೆ ಸೂಚನೆಗಳನ್ನು ನೀಡುತ್ತಿವೆ. ಕೆಲವು ರಾಷ್ಟ್ರಗಳು ತಮ್ಮ ರಾಯಭಾರ ಕಚೇರಿಗಳ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಕ್ರಮ ಕೈಗೊಂಡಿವೆ. ಅಮೆರಿಕದ ಅಧ್ಯಕ್ಷರು ಈ ದಾಳಿಯನ್ನು ‘ನ್ಯಾಯಸಮ್ಮತ ಆತ್ಮರಕ್ಷಣೆ’ ಎಂದು ವಿವರಿಸಿದ್ದು, ಸೈನಿಕರ ಸಾವಿಗೆ ಹೊಣೆಗಾರರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇತ್ತ ಇರಾನ್ ನಾಯಕತ್ವ ಅಮೆರಿಕ ಮತ್ತು ಇಸ್ರೇಲ್ ಕ್ರಮವನ್ನು ‘ಆಕ್ರಮಣಕಾರಿ ಯುದ್ಧ’ ಎಂದು ಖಂಡಿಸಿದೆ.
ಲ್ಫ್ ಪ್ರದೇಶದ ತೈಲ ಸರಬರಾಜು ಮಾರ್ಗಗಳು, ಸಾಗರ ಮಾರ್ಗಗಳು ಹಾಗೂ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.