ಅಮೆರಿಕ ತಣ್ಣಗಾದರೂ ಮುಗೀತಿಲ್ಲ ಯುದ್ಧ..! ಇಸ್ರೇಲ್ ವಿರುದ್ಧ ಕ್ಲಸ್ಟರ್ ಬಾಂಬ್ ಪ್ರಯೋಗಿಸಿದ ಇರಾನ್

Untitled design 2026 03 24T163959.128

ಜೆರುಸಲೇಂ: ಇಡೀ ವಿಶ್ವವೇ ಆತಂಕದಿಂದ ನೋಡುತ್ತಿರುವ ಕೊಲ್ಲಿ ರಾಷ್ಟ್ರಗಳ ಸಂಘರ್ಷ ಈಗ ಅತಿ ದೊಡ್ಡ ಹಂತಕ್ಕೆ ತಲುಪಿದೆ. ಅಮೆರಿಕ ಶಾಂತಿ ಮಾತುಕತೆಗೆ ಪ್ರಯತ್ನಿಸುತ್ತಿದ್ದರೂ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ದ ಮಾತ್ರ ನಿಲ್ಲುತ್ತಿಲ್ಲ. ಪ್ರಸ್ಥತ ಇರಾನ್‌ ಇಸ್ರೇಲ್‌ ವಿರುದ್ದ ದಾಳಿ ಮಾಡಿದೆ.

ಇರಾನ್ ಈಗ ನೇರ ಸಂಘರ್ಷಕ್ಕೆ ಇಳಿದಿದ್ದು, ಇಸ್ರೇಲ್ ವಿರುದ್ಧ ಅಪಾಯಕಾರಿ ಕ್ಲಸ್ಟರ್ ಬಾಂಬ್‌ಗಳನ್ನು (Cluster Bombs) ಪ್ರಯೋಗಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಕೇವಲ ಸೇನಾ ನೆಲೆಗಳನ್ನಷ್ಟೇ ಅಲ್ಲದೆ, ಇಸ್ರೇಲ್‌ನ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದು ವಿಶ್ವಸಂಸ್ಥೆ ಸೇರಿದಂತೆ ಅನೇಕ ಮಾನವ ಹಕ್ಕುಗಳ ಸಂಘಟನೆಗಳ ಆತಂಕಕ್ಕೆ ಕಾರಣವಾಗಿದೆ. ನೂರಾರು ಕ್ಷಿಪಣಿಗಳು ಏಕಕಾಲದಲ್ಲಿ ಇಸ್ರೇಲ್‌ನ ನಗರಗಳ ಮೇಲೆ ದಾಳಿ ಮಾಡುತ್ತಿದ್ದು, ರಕ್ಷಣಾ ವ್ಯವಸ್ಥೆಯಾದ ಐರನ್ ಡೋಮ್ ಕೂಡ ಒತ್ತಡಕ್ಕೆ ಸಿಲುಕಿದೆ.

ಇತ್ತ ಇಸ್ರೇಲ್ ಕೂಡ ಇರಾನ್‌ನ ಅತ್ಯಂತ ಪ್ರಬಲ ಸೇನಾ ಪಡೆಯಾದ IRGC (Islamic Revolutionary Guard Corps) ನ ಪ್ರಧಾನ ಕಚೇರಿಯನ್ನೇ ಧ್ವಂಸಗೊಳಿಸಲು ಇಸ್ರೇಲ್ ಮುಂದಾಗಿದೆ. ಇರಾನ್‌ನ ರಾಜಧಾನಿ ತೆಹ್ರಾನ್‌ನಲ್ಲಿರುವ IRGC ಬೇಹುಗಾರಿಕಾ ಕೇಂದ್ರದ ಮೇಲೆ ಇಸ್ರೇಲ್ ವಿನಾಶಕಾರಿ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ಸರ್ಕಾರದ ಹಲವು ಪ್ರಮುಖ ಇಲಾಖಾ ಕಟ್ಟಡಗಳನ್ನು ಇಸ್ರೇಲಿ ವಾಯುಪಡೆ ಗುರಿಯಾಗಿಸಿಕೊಂಡಿದೆ. ಇರಾನ್‌ನ ಆಡಳಿತ ಯಂತ್ರವನ್ನೇ ಅಸ್ತವ್ಯಸ್ತಗೊಳಿಸುವುದು ಇಸ್ರೇಲ್‌ನ ಪ್ರಮುಖ ತಂತ್ರವಾಗಿದೆ.

ಇರಾನ್ ಬೆಂಬಲಿತ ಲೆಬನಾನ್‌ನ ಹೆಜ್ಬೊಲ್ಲಾ (Hezbollah) ಉಗ್ರ ಸಂಘಟನೆ ಕೂಡ ಇಸ್ರೇಲ್ ಮೇಲೆ ಮುಗಿಬಿದ್ದಿದ್ದು, ಇಸ್ರೇಲ್‌ನ ಉತ್ತರ ಭಾಗದ ನಗರಗಳ ಮೇಲೆ ಹೆಜ್ಬೊಲ್ಲಾ ನಿರಂತರವಾಗಿ ರಾಕೆಟ್ ದಾಳಿ ನಡೆಸುತ್ತಿದೆ. ಇದರಿಂದಾಗಿ ಇಸ್ರೇಲ್ ಈಗ ಎರಡು ಬದಿಗಳಿಂದ (ಉತ್ತರ ಮತ್ತು ಪೂರ್ವ) ದಾಳಿಯನ್ನು ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡರೆ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದೆ. ಅಮೆರಿಕವು ಯುದ್ಧವನ್ನು ತಣ್ಣಗಾಗಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಇರಾನ್ ಮತ್ತು ಇಸ್ರೇಲ್ ಪರಸ್ಪರ ಸೋಲಿಸುವವರೆಗೆ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ.

Exit mobile version