ವರದಿ: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್
ಟೆಹ್ರಾನ್ : ಇರಾನ್ ಹಾಗೂ ಇಸ್ರೇಲ್ ನಡುವಿನ ಭೀಕರ ಕದನ ಮುಗಿಯುವ ಲಕ್ಷಣಗಳೇ ಕಾಣ್ತಿಲ್ಲ. ಇಂದು ಕೂಡ ಯುದ್ಧ ಮುಂದುವರೆದಿದ್ದು, ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿಗಳ ಸುರಿಮಳೆಯನ್ನೇ ಸುರಿಸಿದೆ. ಇದರಿಂದಾಗಿ ಹಲವು ಮಂದಿ ಗಾಯಗೊಂಡಿದ್ದು ಸಾಮಾನ್ಯ ಜನರ ಸ್ಥಿತಿ ಪರದಾಡುವಂತೆ ಆಗಿದೆ.
ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿದ್ರೆ ಬಿಡಲ್ಲ
ಒಂದು ವೇಳೆ ಅಮೆರಿಕಾ ಏನಾದ್ರೂ ನಮ್ಮ ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯನ್ನ ಮಾಡಿದ್ರೆ ಹಾರ್ಮುಜ್ ಜಲಸಂಧಿಯನ್ನ ಸಂಪೂರ್ಣವಾಗಿ ಕ್ಲೋಸ್ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನ ಅಮೆರಿಕಾಕ್ಕೆ ಇರಾನ್ ನೀಡಿದೆ.
ಯುದ್ದದ ವೆಚ್ಚವನ್ನ ನಿಭಾಯಿಸಲು ಹಾರ್ಮುಜ್ ಜಲಸಂಧಿಗೆ ಬರುವ ಹಡಗುಗಳ ಮೇಲೆ ಇರಾನ್ 18 ಕೋಟಿ ಶುಲ್ಕವನ್ಗನ ಹೇರುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಈ ಯುದ್ಧದಿಂದಾಗಿ ಇರಾನ್ ಇಸ್ರೇಲ್ ಮಾತ್ರವಲ್ಲದೇ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿದೆ. ಕ್ಯೂಬಾದಲ್ಲಿಯೂ ಕೂಡ ಇಂಧನ ಸಿಗದ ಕಾರಣ ಇಡೀ ದ್ವೀಪವೇ ಕತ್ತಲಿನ ಕೂಪವಾಗಿ ಮಾರ್ಪಟಿದೆ.
ಸೆನ್ಸೆಕ್ಸ್ ನಲ್ಲಿ ಮತ್ತೆ ಕರಡಿ ಆರ್ಭಟ : ಈ ಯುದ್ದದಿಂದಾಗಿ ಇಂದು ಕೂಡ ಷೇರುಪೇಟೆ ಮತ್ತಷ್ಟು ಕುಸಿದಿದೆ. ಷೇರು ಪೇಟೆಯಲ್ಲಿ ಹೂಡಿಕೆ ಮಾಡಿರುವವರು ಮುಂದೆ ತಮ್ಮ ಕಥೆ ಏನು ಎಂದು ಯೋಚಿಸುತ್ತ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸೌದಿ ಮೇಲೆ ಇರಾನ್ ಮತ್ತೆ ದಾಳಿ
ಗಲ್ಫ್ ರಾಷ್ಟ್ರಗಳ ಯುದ್ಧ ಮತ್ತಷ್ಡು ಭೀಕರವಾಗುತ್ತಿದ್ದು ಇಂದು ಕೂಡ ಸೌದಿ ಅರೇಬಿಯ ಮೇಲೆ ಇರಾನ್ ಡ್ರೋನ್ ಹಾಗೂ ಮಿಸೈಲ್ನಿಂದ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇನ್ನೂ ಯುದ್ಧದಿಂದಾಗಿ ಏಷಿಯ ದೇಶಗಳಿಗೆ ತೈಲವನ್ನ ರಫ್ತು ಮಾಡುತ್ತಿದ್ದ ಸೌದಿ ಅರೇಬಿಯ ಏಪ್ರಿಲ್ ವರಗೂ ಕೂಡ ತನ್ನ ರಫ್ತನ್ನು ನಿಲ್ಲಿಸಿದೆ. ಇದರಿಂದಾಗಿ ಸಾಕಷ್ಟು ದೇಶಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ಫಿಕ್ಸ್ ಎನ್ನಬಹುದಾಗಿದೆ.
48 ಗಂಟೆಯೊಳಗೆ ಹಾರ್ಮುಜ್ ಜಲಸಂಧಿಯನ್ನ ತೆರೆಯುವಂತೆ ವಾರ್ನಿಂಗ್
ಅಮೆರಿಕಾ ಇರಾನ್‌ಗೆ ಇನ್ನೂ 48 ಗಂಟೆಯೊಳಗೆ ತೆರೆಯುವಂತೆ ಆಮೆರಿಕಾ ಇರಾನ್‌ಗೆ ವಾರ್ನಿಂಗ್ ನೀಡಿತ್ತು. ಇದಕ್ಕೆ ಒಪ್ಪದ ಇರಾನ್ ಬರೀಯ ತನ್ನ ಮಿತ್ರ ರಾಷ್ಟ್ರಗಳಿಗೆ ಮಾತ್ರ ಅನುಮತಿಯನ್ನ ನೀಡಿದೆ. ಅಮೆರಿಕಾದ ವಾರ್ನಿಂಗ್ ಗೆ ಪ್ರತಿಕ್ರಿಯೆ ನೀಡಿರುವ ಇರಾನ್ ಅಮೆರಿಕಾದ ಯಾವ ಬೆದರಿಕೆಗೂ ಕೂಡ ಇರಾನ್ ಬಗ್ಗುವುದಿಲ್ಲ ಎಂದು ಟಾಂಗ್ ಕೂಡ ನೀಡಿದೆ.
ಒಟ್ಟಿನಲ್ಲಿ ಈ ಯುದ್ಧದಿಂದಾಗಿ ನೂರಾರು ಜನ ಅಮಾಯಕರು ಜೀವನ ನಡೆಸಲು ಕಷ್ಟ ಪಡುತಿದ್ದಾರೆ. ಅದಷ್ಟು ಬೇಗ ಯುದ್ಧ ಮುಗಿಯಲಿ ಎಂಬುದು ಎಲ್ಲರ ಆಶಯವಾಗಿದೆ.
