ಬರಾಕ್ ಒಬಾಮ ಸಲಿಂಗಕಾಮಿ, ಮಿಶೆಲ್ ಒಬಾಮ ಗಂಡು: ಎಲಾನ್ ಮಸ್ಕ್ ತಂದೆ ಸ್ಫೋಟಕ ಹೇಳಿಕೆ

ಬರಾಕ್ ಒಬಾಮ ಸಲಿಂಗಕಾಮಿ ಎಂದ ಎಲಾನ್ ಮಸ್ಕ್ ತಂದೆ!

Barack obama, michelle obama

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಶೆಲ್ ಒಬಾಮ ಕುರಿತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಒಬಾಮ ಅವರನ್ನು ‘ವಿಚಿತ್ರ ವ್ಯಕ್ತಿ’ ಎಂದು ಕರೆಯುವ ಅವರು, “ಮಿಶೆಲ್ ಒಬಾಮ ಒಬ್ಬ ಗಂಡು” ಎಂದು ಗಂಭೀರ ಆರೋಪ ಮಾಡಿದ್ದಾರೆ. “ಅವರು ಹೆಣ್ಣಿನಂತೆ ವೇಷ ಧರಿಸುತ್ತಾರೆ” ಎಂದು ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪಾಡ್‌ಕಾಸ್ಟ್‌ನಲ್ಲಿ ಪ್ರಚೋದನಾತ್ಮಕ ಹೇಳಿಕೆ!

‘ವೈಡ್ ಅವೇಕ್ ಪಾಡ್‌ಕಾಸ್ಟ್’ನಲ್ಲಿ ಜೋಶುವಾ ರೂಬಿನ್ ಜೊತೆ ಮಾತುಕತೆಯಲ್ಲಿ, ಎಲಾನ್ ಮಸ್ಕ್ ತಂದೆ, “ಬರಾಕ್ ಒಬಾಮ ಒಬ್ಬ ಸಲಿಂಗಕಾಮಿ” ಎಂದು ಹೇಳಿದ್ದಾರೆ. 2014ರಲ್ಲಿ ಹಾಸ್ಯನಟ ಜೋನ್ ರಿವರ್ಸ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು. 2014ರಲ್ಲಿ ಹಾಸ್ಯನಟ ಜಾನ್ ರಿವರ್ಸ್ ಮಾಜಿ ಪ್ರಥಮ ಮಹಿಳೆಯ ಲಿಂಗದ ಬಗ್ಗೆ ತಮಾಷೆ ಮಾಡಿದಾಗ, ನಮಗೆ ಈ ಪಿತೂರಿ ಸಿದ್ಧಾಂತದ ಸತ್ಯ ಗೊತ್ತಾಯಿತು. ಬರಾಕ್‌ ಒಬಾಮ ಸಲಿಂಗಕಾಮಿಯಾಗಿದ್ದು, ಮಿಶೆಲ್‌ ಮಹಿಳೆಯರಂತೆ ವೇಷ ಧರಿಸಿ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ..” ಎಂದು ಎರೋಲ್‌ ಮಸ್ಕ್‌ ಗಂಭೀರ ಆರೋಪ ಮಾಡಿದ್ದಾರೆ.

ಮಿಶೆಲ್ ಒಬಾಮ ಬಗ್ಗೆ ವಾದಾತ್ಮಕ ಹೇಳಿಕೆ

“ಮಿಶೆಲ್ ಒಬಾಮ ವಾಸ್ತವದಲ್ಲಿ ಗಂಡು. ಅವರು ಮಹಿಳೆಯರಂತೆ ವೇಷ ಧರಿಸುತ್ತಿದ್ದಾರೆ. ಈ ಸತ್ಯ ಈಗ ಬಹಿರಂಗವಾಗಿದೆ” ಎಂದು ಎರೋಲ್ ಮಸ್ಕ್ ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆಗಳಿಗೆ ಯಾವುದೇ ದೃಢೀಕರಿಸಿದ ಪುರಾವೆಗಳಿಲ್ಲ.

ಇನ್ನು ಪಾಡ್‌ಕಾಸ್ಟ್‌ನಲ್ಲಿ ತಮ್ಮ ಪುತ್ರ ಎಲಾನ್‌ ಮಸ್ಕ್‌ ಅವರ ಬಗ್ಗೆಯೂ ಮಾತನಾಡಿರುವ ಎರೋಲ್‌ ಮಸ್ಕ್‌, “ಎಲಾನ್ ಮಸ್ಕ್ ಒಬ್ಬ ಒಳ್ಳೆಯ ತಂದೆಯಲ್ಲ..” ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ “ಅವರು ತಮ್ಮ ಕೆಲಸದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ, ಮಕ್ಕಳ ಜೀವನದಿಂದ ದೂರ ಇದ್ದಾರೆ” ಎಂದು ಹೇಳಿದ್ದಲ್ಲದೆ, ತಮ್ಮ ಮಾತುಗಳಿಗೆ ಎಲಾನ್ ಮಸ್ಕ್ ಗುಂಡಿಕ್ಕಬಹುದು ಎಂದಿದ್ದಾರೆ.

ಹಿಂದಿನ ಬಿರುಸಿನ ಸಂಬಂಧ

ಎಲಾನ್ ಮಸ್ಕ್ ಈ ಹಿಂದೆಯೇ ತಮ್ಮ ತಂದೆಯನ್ನು “ದುಷ್ಟ” ಮತ್ತು “ಭಯಾನಕ ಮನುಷ್ಯ” ಎಂದು ಕರೆಯುತ್ತಿದ್ದರು.

ಸಾರಾಂಶ:

ಎರೋಲ್ ಮಸ್ಕ್ ನೀಡಿದ ಈ ಹೇಳಿಕೆಗಳು ಅಮೆರಿಕದಲ್ಲಿ ಭಾರೀ ಟೀಕೆ ಹುಟ್ಟುಹಾಕಿವೆ. ಬಹುತೇಕರು ಈ ಆರೋಪಗಳನ್ನು ಸುಳ್ಳು ಮತ್ತು ಆಧಾರರಹಿತವೆಂದು ತಿರಸ್ಕರಿಸಿದ್ದಾರೆ.

Exit mobile version