ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಅಬುಧಾಬಿ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಭಾಗವಹಿಸಿ, ಸ್ಥಳೀಯ ಸಂಸ್ಕೃತಿಗೆ ಗೌರವ ತೋರಿಸುವಂತೆ ಹಿಜಾಬ್ ಧರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ .
ಎಕ್ಸ್ಪೀರಿಯನ್ಸ್ ಅಬುಧಾಬಿ” (Experience Abu Dhabi) ಅಭಿಯಾನದ ಭಾಗವಾಗಿ ಬಿಡುಗಡೆಯಾದ ಈ ಜಾಹೀರಾತು ವೀಡಿಯೋದಲ್ಲಿ ದಂಪತಿಗಳು ಅಬುಧಾಬಿಯ ವಿವಿಧ ಪ್ರವಾಸಿ ತಾಣಗಳನ್ನು ಅನ್ವೇಷಿಸುವುದನ್ನು ಕಾಣಬಹುದು . ವೀಡಿಯೋದ ಕೊನೆಯ ಭಾಗದಲ್ಲಿ, ಶೇಖ್ ಜಾಯೆದ್ ಗ್ರಾಂಡ್ ಮಸೀದಿ ಆವರಣದಲ್ಲಿ ದೀಪಿಕಾ ಕೆಂಪು ಬಣ್ಣದ ಹಿಜಾಬ್ ಧರಿಸಿರುವ ದೃಶ್ಯ ಕಾಣಸಿಗುತ್ತದೆ . ಇದರಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ವಿವಾದ ಸೃಷ್ಠಿಯಗಿದೆ. ದೀಪಿಕಾ ಹಿಂದೂ ಸಂಸ್ಕೃತಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರೆ, ಇನ್ನು ಕೆಲವರು ಇದನ್ನು ದ್ವಿಮುಖ ನೀತಿ ಮತ್ತು ಹಣಕ್ಕಾಗಿ ಮಾಡಿದ ಕ್ರಿಯೆ ಎಂದು ಟೀಕಿಸಿದ್ದಾರೆ .
ಈ ವಿವಾದದ ನಡುವೆಯೂ ದೀಪಿಕಾ ಅವರ ಅಭಿಮಾನಿಗಳು ಮತ್ತು ಸಮರ್ಥಕರು ಅವರ ಪಕ್ಷವಾಗಿ ದೃಢವಾಗಿ ನಿಂತಿದ್ದಾರೆ. ಅಭಿಮಾನಿಗಳು, ಶೇಖ್ ಜಾಯೆದ್ ಗ್ರಾಂಡ್ ಮಸೀದಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯೂ ಸ್ಥಳೀಯ ನಿಯಮಗಳನ್ನು ಪಾಲಿಸಬೇಕು ಮತ್ತು ಮಹಿಳೆಯರು ತಲೆ ಮುಚ್ಚಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ . ಇದು ಸಂಸ್ಕೃತಿಗೆ ಗೌರವ ತೋರಿಸುವ ಸಾರ್ವತ್ರಿಕ ನಡವಳಿಕೆಯ ಭಾಗವಾಗಿದೆ ಎಂದು ವಾದಿಸಿದ್ದಾರೆ. ಒಬ್ಬ ಅಭಿಮಾನಿ, “ನಮ್ಮ ದೇವಾಲಯಗಳಲ್ಲಿ ವಿದೇಶಿ ಪ್ರವಾಸಿಗರು ಯೋಗ್ಯವಾದ ಬಟ್ಟೆ ಧರಿಸಬೇಕೆಂದು ನಾವು ನಿರೀಕ್ಷಿಸುವಂತೆಯೇ, ಅರಬ್‌ನಲ್ಲಿ ದೀಪಿಕಾ ಅವರು ತಲೆ ಮುಚ್ಚಿಕೊಂಡಿದ್ದಾರೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಇನ್ನು ಕೆಲವರು, ವಿಶ್ವವಿಖ್ಯಾತ ಗಾಯಕಿ ರಿಯಾನಾ ಸಹ ಅದೇ ಮಸೀದಿಗೆ ಭೇಟಿ ನೀಡಿದಾಗ ಹಿಜಾಬ್ ಧರಿಸಿದ್ದನ್ನು ಉದಾಹರಣೆಗೆ ತಂದಿದ್ದಾರೆ . ದೀಪಿಕಾ ಅವರು ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದಾಗಲೂ ಸಂಪ್ರದಾಯಗಳನ್ನು ಗೌರವದಿಂದ ಪಾಲಿಸಿದ್ದಾರೆ ಎಂದು ಅವರ ಸಮರ್ಥಕರು ತಿಳಿಸಿದ್ದಾರೆ .
