• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳ ಆರ್ಭಟ! ದೇಶವನ್ನೇ ಇಬ್ಬಾಗ ಮಾಡುತ್ತಾ ಬಲೂಚಿಸ್ತಾನ ಹೋರಾಟ?

ಆಂತರಿಕ ಅಸ್ಥಿರತೆಯಿಂದ ಕಂಗಾಲಾಗಿದೆ ಪಾಕಿಸ್ತಾನ.. ಬಲೂಚಿಸ್ತಾನ ಹೋರಾಟದ ಕಂಪ್ಲೀಟ್ ಡೀಟೇಲ್ಸ್..

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 12, 2025 - 2:59 pm
in Flash News, ವಿದೇಶ, ವಿಶೇಷ
0 0
0
Blochistan

ಪಾಕಿಸ್ತಾನದ ನೈಋತ್ಯ ಗಡಿಯಲ್ಲಿ ಇರೋ ಬಲೂಚಿಸ್ತಾನ ಪ್ರಾಂತ್ಯ, ಇದೀಗ ಟೈಂ ಬಾಂಬ್ ರೀತಿ ಪರಿವರ್ತನೆಯಾಗಿದೆ! ರೈಲನ್ನೇ ಹೈಜಾಕ್ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಈ ಹೋರಾಟಕ್ಕೆ ಸುದೀರ್ಘ ಇತಿಹಾಸವೇ ಇದೆ. ಕಳೆದ 7 ದಶಕಗಳಿಂದ ನಡೆಯುತ್ತಿರುವ ಹೋರಾಟ, ಇದೀಗ ನಿರ್ಣಯಕ ಘಟ್ಟವನ್ನೇ ತಲುಪಿದೆ. ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆಯುತ್ತಿರೋ ಈ ಹೋರಾಟ, 2023ರಲ್ಲಿ ತಾರಕಕ್ಕೇರಿತು. ಪಾಕಿಸ್ತಾನ ಸೈನ್ಯದ ಕಾರ್ಯಾಚರಣೆಗಳಿಗೆ ಸಡ್ಡು ಹೊಡೆದ ಪ್ರತ್ಯೇಕತಾವಾದಿಗಳು, ಪಾಕ್ ಸರ್ಕಾರಕ್ಕೇ ಸವಾಲಾಗಿದ್ದಾರೆ. ಇತ್ತ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಹೆಚ್ಚಾಗಿವೆ ಅನ್ನೋ ಆರೋಪಗಳೂ ತೀವ್ರಗೊಂಡಿವೆ. ಬಲೂಚಿ ರಾಷ್ಟ್ರೀಯತಾವಾದಿಗಳಂತೂ ಪಾಕಿಸ್ತಾನ ಸರ್ಕಾರವು ತಮ್ಮ ವಿರುದ್ಧ ಸಾಂಸ್ಕೃತಿಕ ಹಾಗೂ ಆರ್ಥಿಕ ಶೋಷಣೆ ಮಾಡ್ತಿದೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಬಲೂಚಿಸ್ತಾನದ ಸಂಪನ್ಮೂಲಗಳ ನಿಯಂತ್ರಣ, ರಾಜಕೀಯ ಹಾಗೂ ಆರ್ಥಿಕ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟದ ಸಮಗ್ರ ವಿವರ ಇಂತಿದೆ:

ಬಲೂಚಿಸ್ತಾನ ಹೋರಾಟದ ಹಿನ್ನೆಲೆ ಏನು?

ಬಲೂಚಿಸ್ತಾನ ಪ್ರಾಂತ್ಯ 1947ರಲ್ಲಿ ಪಾಕಿಸ್ತಾನದೊಂದಿಗೆ ಸ್ವಯಂ ಪ್ರೇರಿತವಾಗಿ ವಿಲೀನಗೊಂಡಿತು. ಆದರೆ, ಕರಾರು ಪ್ರಕಾರ ಪ್ರಾಂತ್ಯಕ್ಕೆ ಸ್ವಾಯತ್ತತೆ ನೀಡಬೇಕಿತ್ತು. ಇದನ್ನು ಪಾಕಿಸ್ತಾನ ಸರ್ಕಾರ ನಿರ್ಲಕ್ಷಿಸಿತು. ಹೀಗಾಗಿ, 1948ರಲ್ಲೇ ಮೊದಲ ಬಾರಿಗೆ ಸಶಸ್ತ್ರ ಹೋರಾಟ ನಡೆಯಿತು. 1958, 1962 ಹಾಗೂ 2004ರಲ್ಲಿ ಇದೇ ರೀತಿಯ ಸಂಘರ್ಷಗಳು ನಡೆದವು. 2004ರ ನಂತರ ಈ ಹೋರಾಟ ಇನ್ನಷ್ಟು ಸಂಘಟಿತವಾಯ್ತು. ಬಲೂಚಿ ಲಿಬರೇಷನ್ ಆರ್ಮಿ (BLA), ಬಲೂಚಿ ಲಿಬರೇಷನ್ ಫ್ರಂಟ್ (BLF) ನೇತೃತ್ವದಲ್ಲಿ ಇಂದಿಗೂ ಈ ಸಂಘರ್ಷ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಭೀಕರ ಸ್ವರೂಪದಲ್ಲಿ ನಡೆಯುತ್ತಿದೆ.

RelatedPosts

ಬಾಂಗ್ಲಾದೇಶದಲ್ಲಿ ವೈಭವದ ನವರಾತ್ರಿ: 33,350 ಮಂಟಪಗಳಲ್ಲಿ ದುರ್ಗಾ ಪೂಜೆ

ಬಿಗ್ ಬಾಸ್ ಕನ್ನಡ 12: ಟಿವಿ ತಾರೆ ಅಭಿಷೇಕ್ ದೊಡ್ಮನೆಗೆ ಎಂಟ್ರಿ

ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!

ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು

ADVERTISEMENT
ADVERTISEMENT
ಬಲೂಚಿಸ್ತಾನ ಸಂಘರ್ಷಕ್ಕೆ ಮೂಲ ಕಾರಣಗಳೇನು?
  1. ಸಂಪನ್ಮೂಲಗಳ ದುರ್ಬಳಕೆ: ಬಲೂಚಿಸ್ತಾನ ಪ್ರಾಂತ್ಯ ಪಾಕಿಸ್ತಾನದ 40% ನೈಸರ್ಗಿಕ ಅನಿಲ, ಸುವರ್ಣ, ತಾಮ್ರದಂತಹ ಖನಿಜ ಸಂಪತ್ತನ್ನು ಹೊಂದಿದೆ. ಆದರೆ, ಸ್ಥಳೀಯರಿಗೆ ಉದ್ಯೋಗ ಅಥವಾ ಆದಾಯದ ಹಂಚಿಕೆ ಅತಿ ಕಡಿಮೆ.
  2. ರಾಜಕೀಯ ನಿರ್ಲಕ್ಷ್ಯ: ಬಲೂಚಿಸ್ತಾನ ಪ್ರಾಂತ್ಯದ ಪ್ರಾತಿನಿಧ್ಯ ಕೇಂದ್ರ ಸರ್ಕಾರದಲ್ಲಿ ನಗಣ್ಯ. 2018ರ ಚುನಾವಣೆಯಲ್ಲಿ ಬಲೂಚಿಸ್ತಾನದಲ್ಲಿ ಕೇವಲ 20 % ಮತದಾನ ನಡೆಯಿತು ಎಂದು ವರದಿಗಳು ಹೇಳುತ್ತಿವೆ.
  3. ಮಾನವ ಹಕ್ಕುಗಳ ಉಲ್ಲಂಘನೆ: ಪಾಕ್ ಸೇನೆ ನಡೆಸುವ ಕಾರ್ಯಾಚರಣೆಗಳಲ್ಲಿ ಬಲೂಚಿಸ್ತಾನದ ಲೆಕ್ಕವಿಲ್ಲದಷ್ಟು ಮಂದಿ ಕಣ್ಮರೆಯಾಗಿದ್ದಾರೆ. ಕಣ್ಮುಂದೆಯೇ ಇದ್ದವರು ಎಲ್ಲಿ ಹೋದರು? ಅವರ ಕಥೆ ಏನಾಯ್ತು? ಅವರ ಸ್ಥಿತಿ ಏನು ಅನ್ನೋದು ಯಾರಿಗೂ ಗೊತ್ತಿಲ್ಲ! ಪಾಕ್ ಸೇನೆಯ ಈ ಹಿಂಸಾತ್ಮಕ ಕೃತ್ಯಗಳನ್ನ ಖುದ್ದು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳೇ ಟೀಕಿಸಿವೆ.
  4. ಸಾಂಸ್ಕೃತಿಕವಾಗಿ ಹತ್ತಿಕ್ಕುವ ಯತ್ನ: ಬಲೂಚಿ ಭಾಷೆ, ಸಂಸ್ಕೃತಿಯನ್ನು ಪಾಕ್ ಸರ್ಕಾರ ಹತ್ತಿಕ್ಕುವ ಯತ್ನ ನಡೆಯುತ್ತಿದೆ ಅನ್ನೋ ಆಕ್ರೋಶವೂ ಈ ಭಾಗದಲ್ಲಿದೆ..
ಬಲೂಚಿಸ್ತಾನದ ಇಂದಿನ ಪರಿಸ್ಥಿತಿ ಏನಾಗಿದೆ?
  • ಬಲೂಚಿಸ್ತಾನದ ಪ್ರತ್ಯೇಕತಾವಾದಿ ಹೋರಾಟಗಾರರು ರೈಲನ್ನೇ ಹೈಜಾಕ್ ಮಾಡಿದರು ಅನ್ನೋದು ಇತ್ತೀಚಿನ ಸುದ್ದಿ.. ಆದರೆ, ಈ ಸಂಘರ್ಷ 2023ರಿಂದಲೇ ನಿರಂತರ ಜಾರಿಯಲ್ಲಿದೆ. ಪಾಕ್ ಸೇನೆಯ ಮೇಲೆ, ಪೊಲೀಸರ ಮೇಲೆ ಲೆಕ್ಕವಿಲ್ಲದಷ್ಟು ದಾಳಿಗಳು ನಡೆದಿವೆ. ಅದರಲ್ಲೂ BLA ನಡೆಸುವ ಶಸ್ತ್ರ ಸಜ್ಜಿತ ಸಂಘಟಿತ ದಾಳಿಗೆ ಪಾಕ್ ಸೇನೆಯ ಸಾವಿರಾರು ಯೋಧರು ಬಲಿಯಾಗಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಗ್ವಾದರ್ ಬಂದರಿನ ಮೇಲೆ ನಡೆದ ದಾಳಿ, ಆಗಸ್ಟ್‌ನಲ್ಲಿ ಕ್ವೆಟ್ಟಾದಲ್ಲಿ ಸಿಬ್ಬಂದಿ ವಾಹನದ ಮೇಲೆ ನಡೆದ ಬಾಂಬ್ ದಾಳಿಗಳು ವಿಶ್ವದ ಗಮನ ಸೆಳೆದವು..
  • ಇತ್ತ ಪಾಕ್ ಸೇನೆಯು ಬಲೂಚಿಸ್ತಾನ ಪ್ರತ್ಯೇಕತಾವಾದಿಗಳನ್ನು ನಿಗ್ರಹಿಸಲು ಆಪರೇಷನ್ ಕೋಲ್ಡ್ ಸ್ನೋ ಎಂಬ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತು. ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ಸೇನೆ ಹೇಳಿಕೊಂಡಿದೆ. ಆದರೆ, ಬಲೂಚಿಸ್ತಾನ ಪ್ರತ್ಯೇಕತಾವಾದಿ ಹೋರಾಟಗಾರರ ಪ್ರಕಾರ, ಈ ಸಂಖ್ಯೆ ಸಾವಿರ ದಾಟಿದೆ.. ಅಷ್ಟೇ ಅಲ್ಲ, ಹತ್ಯೆಗೀಡಾದವರಲ್ಲಿ ಜನ ಸಾಮಾನ್ಯರು, ಮಹಿಳೆಯರು ಹಾಗೂ ಮಕ್ಕಳೂ ಇದ್ದಾರೆ ಎಂಬ ಆರೋಪಗಳೂ ಇವೆ.
  • ಚೀನಾ – ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (CPEC) ಯೋಜನೆಗೆ ಬಲೂಚಿಸ್ತಾನ ಕೇಂದ್ರವಾಗಿದೆ. ಆದರೆ, CPECಗೆ ಸ್ಥಳೀಯರು ವಿರೋಧ ತೋರಿದ್ದಾರೆ. ನಮ್ಮ ಪ್ರಾಂತ್ಯದ ಸಂಪತ್ತನ್ನು ದೋಚುವ ಯೋಜನೆ ಇದು ಎಂದು ಕಿಡಿ ಕಾರುತ್ತಿದ್ದಾರೆ.
ಪಾಕ್ ಸರ್ಕಾರದ ಪ್ರತಿಯೊಂದು ನಡೆಯೂ ಸಂಶಯಾಸ್ಪದ!
  • ಪಾಕಿಸ್ತಾನದ ಪ್ರಧಾನ ಮಂತ್ರಿ ಷಹಬಾಜ್ ಷರೀಫ್ ಅವರು ಬಲೂಚಿಸ್ತಾನ ಅಭಿವೃದ್ಧಿಗೆ 650 ಬಿಲಿಯನ್ ರೂಪಾಯಿ ಹೂಡಿಕೆ ಮಾಡಿದ್ದೇವೆ ಎಂದು ಘೋಷಿಸಿದ್ದಾರೆ. ಆದರೆ, ಸ್ಥಳೀಯರು ಮಾತ್ರ ಇದನ್ನು “ಸೇನೆಗೆ ನೀಡಿರುವ ಹಣ” ಎಂದು ಖಂಡಿಸುತ್ತಾರೆ!
  • ಇತ್ತ ಪಾಕ್ ಸೇನೆಯು ಬಲೂಚಿಸ್ತಾನ ಪ್ರತ್ಯೇಕತಾವಾದಿಗಳಿಗೆ ಭಾರತ ಮತ್ತು ಅಫ್ಘಾನಿಸ್ತಾನ ನೆರವಾಗುತ್ತಿವೆ ಎಂದು ಆರೋಪಿಸಿದೆ. ಆದರೆ, ಇದಕ್ಕೆ ಯಾವುದೇ ದಾಖಲೆ, ಸ್ಪಷ್ಟ ಪುರಾವೆ, ಸಾಕ್ಷ್ಯಗಳೇ ಇಲ್ಲ! ಪಾಕಿಸ್ತಾನ ಸೇನೆಗೆ ವಿಶ್ವಾಸಾರ್ಹತೆಯೇ ಇಲ್ಲ ಅನ್ನೋದು ಜಾಗತಿಕ ಮಟ್ಟದಲ್ಲಿ ಜಗಜ್ಜಾಹೀರಾದ ವಿಷಯ.. ಹೀಗಾಗಿ, ಪಾಕ್ ಸೇನೆಯ ಆರೋಪವನ್ನ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ.
  • 2022ರಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿ ಬಲೂಚಿಸ್ತಾನ್‌ನಲ್ಲಿ ಪಾಕ್ ಸೇನೆಯಿಂದ ವ್ಯವಸ್ಥಿತ ಹಿಂಸೆ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಪಾಕ್ V/S ಬಲೂಚ್.. ಯಾರಿಗೆ ಯಾರ ಬೆಂಬಲ?
  • CPEC ಯೋಜನೆ ಇರುವ ಕಾರಣ ಅದರ ಸುರಕ್ಷತೆಗಾಗಿ ಪಾಕಿಸ್ತಾನ ಸೇನೆಗೆ ಚೀನಾ ಬೆಂಬಲ ನೀಡುತ್ತಿದೆ.
  • ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕದ ಮಾನವ ಹಕ್ಕುಗಳು ಪಾಕ್ ಸೇನೆಯ ಅತಿಕ್ರಮಣಗಳನ್ನು ಟೀಕಿಸಿವೆ.
  • ಬಲೂಚಿಸ್ತಾನದಿಂದ ವಲಸೆ ಹೋಗಿರುವ ಸಮುದಾಯಗಳು ಯುರೋಪ್ ಹಾಗೂ ಅಮೆರಿಕ ದೇಶಗಳಲ್ಲಿ ಪಾಕ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಹಾಗಾದ್ರೆ ಬಲೂಚಿಸ್ತಾನದ ಭವಿಷ್ಯವೇನು?
  1. CPEC ಮತ್ತು ಚೀನಾದ ಪಾತ್ರ: CPEC ಯೋಜನೆ ಬಲೂಚಿಸ್ತಾನ್‌ನ ಸಂಪತ್ತನ್ನು ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಲೂಟಿ ಮಾಡಬಹುದು.
  2. ಪಾಕ್ ಸೇನಾ ಪ್ರಾಬಲ್ಯ!: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕ್ ಸೇನೆಯ ಪ್ರಾಬಲ್ಯ ಹೆಚ್ಚಿದಷ್ಟೂ ಸಂಘರ್ಷ ಉಲ್ಬಣಿಸಬಹುದು.
  3. ಪಾಕ್ ಇಬ್ಬಾಗ?: ಬಲೂಚಿ ನಾಯಕರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿಲ್ಲ. ಹೀಗಾಗಿ, ಹೋರಾಟ ಉಲ್ಬಣಿಸಿದರೆ ದೇಶವೇ ಇಬ್ಬಾಗ ಆಗಬಹುದು!

ಒಟ್ಟಾರೆ ಹೇಳಬೇಕೆಂದರೆ, ಬಲೂಚಿಸ್ತಾನ್ ಸಮಸ್ಯೆ ಪಾಕಿಸ್ತಾನದ ಆಂತರಿಕ ಸ್ಥಿರತೆಗೆ ಗಂಭೀರ ಸವಾಲಾಗಿದೆ. ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ ಮತ್ತು ಮಾನವ ಹಕ್ಕುಗಳಿಗೆ ಗೌರವ ಕೊಡದೇ ಇದ್ದರೆ ಏನಾಗುತ್ತೆ ಅನ್ನೋದಕ್ಕೆ ಬಲೂಚಿಸ್ತಾನ ಸಂಘರ್ಷ ಅತ್ಯಂತ ಉತ್ತಮ ನಿದರ್ಶನವಾಗಿದೆ.

(ಮೂಲ: ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿಗಳು, ಪಾಕಿಸ್ತಾನದ ಪತ್ರಿಕೆಗಳು, ಬಲೂಚಿ ಹೋರಾಟಗಾರರ ಹೇಳಿಕೆಗಳು)

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 09 29t002031.156

ಪಾಕ್‌ ವಿರುದ್ಧ ಗೆದ್ದು ಬೀರಿದ ಭಾರತ: ಏಷ್ಯಾ ಕಪ್ ಫೈನಲ್‌ನಲ್ಲಿ ಭರ್ಜರಿ ವಿಜಯ

by ಯಶಸ್ವಿನಿ ಎಂ
September 29, 2025 - 12:12 am
0

Untitled design 2025 09 28t235328.186

‘ಬಿಗ್ ಬಾಸ್ ಕನ್ನಡ ಸೀಸನ್ 12’ರ 19 ಸ್ಪರ್ಧಿಗಳ ಪೂರ್ಣ ಪಟ್ಟಿ:ಇಲ್ಲಿದೆ ನೋಡಿ

by ಯಶಸ್ವಿನಿ ಎಂ
September 28, 2025 - 11:56 pm
0

Untitled design 2025 09 28t231756.332

ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಜಗಳಕ್ಕೆ ಆ ನಟಿ ಕಾರಣ..!-ಓಂ ಪ್ರಕಾಶ್ ರಾವ್

by ಯಶಸ್ವಿನಿ ಎಂ
September 28, 2025 - 11:19 pm
0

Untitled design 2025 09 28t230050.204

ಬಾಂಗ್ಲಾದೇಶದಲ್ಲಿ ವೈಭವದ ನವರಾತ್ರಿ: 33,350 ಮಂಟಪಗಳಲ್ಲಿ ದುರ್ಗಾ ಪೂಜೆ

by ಯಶಸ್ವಿನಿ ಎಂ
September 28, 2025 - 11:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 28t211308.836
    ಬಿಗ್ ಬಾಸ್ ಕನ್ನಡ 12: ಟಿವಿ ತಾರೆ ಅಭಿಷೇಕ್ ದೊಡ್ಮನೆಗೆ ಎಂಟ್ರಿ
    September 28, 2025 | 0
  • Untitled design 2025 09 28t151152.065
    ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!
    September 28, 2025 | 0
  • Untitled design 2025 09 28t144715.408
    ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು
    September 28, 2025 | 0
  • Untitled design 2025 09 28t142251.381
    ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ
    September 28, 2025 | 0
  • Untitled design 2025 09 28t140902.633
    ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ ಸ್ಕೈವಾಕ್‌ ಕುಸಿತ: ತಪ್ಪಿದ ಭಾರೀ ದುರಂತ
    September 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version