ಯಶವಂತಪುರ: ಸೋಮಶೇಖರ್‌‌‌ಗೆ ಕಷ್ಟ..ಜವರಾಯಿಗೌಡಗೆ ಚಾನ್ಸ್ ಸಿಗುವ ನಿರೀಕ್ಷೆ.!

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t215759.954

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

2023ರ ಯಶವಂತಪುರ ವಿಧಾನಸಭಾ ಫಲಿತಾಂಶದ ನೋಡುವುದಾದರೆ ಬಿಜೆಪಿಯ ಎಸ್ ಟಿ ಸೋಮಶೇಖರ್ 1,69,149 (47%), ಜೆಡಿಎಸ್ ನ ಜವರಾಯಿಗೌಡಗೆ 1,54,031 (43%), ಕಾಂಗ್ರೆಸ್ ಅಭ್ಯರ್ಥಿ ಬಾಲರಾಜ್ ಗೌಡ 21,684 (6%) ಮತಗಳ ಜಿದ್ದಾಜಿದ್ದಿನ ಕಣದಲ್ಲಿ ಎಸ್ ಟಿ ಸೋಮಶೇಖರ್ 15,118 ಮತಗಳ ಅಂತರದಿಂದ ಜಯಗಳಿಸಿದ್ದರು.

ಯಶವಂತಪುರ ಕ್ಷೇತ್ರದ ಚಿತ್ರಣ..
ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳ ಪೈಕಿ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ದೊಡ್ಡದು. ಇಲ್ಲಿ ಪಕ್ಷಗಳಿಂತ ವ್ಯಕ್ತಿ ವರ್ಚಸ್ಸೇ ಮುಖ್ಯ.ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಕಾಂಗ್ರೆಸ್ ಶಾಸಕರಾಗಿದ್ದ ಎಸ್.ಟಿ.ಸೋಮಶೇಖರ್ ಅವರು 2019 ರಲ್ಲಿ ಬಿಜೆಪಿ ಸೇರ್ಪಡೆಯಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಸಚಿವರೂ ಆದರು. ಇದೀಗ ಅವರು ಲಾಭ, ನಷ್ಟದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದು ಸಧ್ಯ ಬಿಜೆಪಿಯಿಂದ ಗೆಲುವು ಸಾಧಿಸಿ ಶಾಸಕ ರಾಗಿದ್ದರು ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದಾರೆ.

2008ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿಯಿಂದ ಗೆಲುವು ಕಂಡಿದ್ದರು. ನಂತರ ನಡೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಜಾರಿತು. ಎರಡೂ ಬಾರಿ ಎಸ್.ಟಿ.ಸೋಮಶೇಖರ್ ಗೆದ್ದಿದ್ದರು. ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಎಸ್ ಟಿ ಸೋಮಶೇಖರ ಬಿಜೆಪಿಯಿಂದಲೂ ಎರಡು ಭಾರಿ ಗೆಲವು ಸಾಧಿಸಿದ್ದಾರೆ.

ಮೂಡ್ ಆಫ್ ಕರ್ನಾಟಕ : ಯಶವಂತಪುರ ಮೂಡ್ ಹೇಗಿದೆ.?
ಒಕ್ಕಲಿಗ ಮತದಾರರೇ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಎಸ್ ಟಿ ಸೋಮಶೇಖರ್ ಬಿಗಿ ಹಿಡಿತ ಸಾಧಿಸಿದ್ದಾರೆ. ಬಹುತೇಕ ಬಡವರು, ಕೆಳಮಧ್ಯಮವರ್ಗದವರೇ ಹೆಚ್ಚಾಗಿರುವ ಕ್ಷೇತ್ರವಾಗಿದ್ದು, ಒಕ್ಕಲಿಗ ಜೊತೆ ಲಿಂಗಾಯತ, ಪರಿಶಿಷ್ಟ ಜಾತಿ ಮತದಾರರೇ ಹೆಚ್ಚು ನೆಲೆಸಿದ್ದಾರೆ. ಜೆಡಿಎಸ್ ನಿಂದ ಸತತವಾಗಿ 4 ಬಾರಿ ಸೋತಿರುವ ಜವರಾಯಿಗೌಡ, ಪದೇ ಪದೇ ಪಕ್ಷ ಬದಲಾವಣೆಯಿಂದ ಎಸ್ಟಿ ಸೋಮಶೇಖರ್ ವಿರುದ್ಧ ಬೇಸರವಾಗಿದ್ದು ಮುಂದಿನ ಚುನಾವಣೆಗಳಲ್ಲಿ ಜವರಾಯಿಗೌಡ ಪರ ಅನುಕಂಪದ ಅಲೆ ಬಿರವ ನಿರೀಕ್ಷೆ.

ಜೆಡಿಎಸ್, ಬಿಜೆಪಿ ಒಟ್ಟಾಗಿ ಸೋಮಶೇಖರ್ ವಿರುದ್ಧ ರಣತಂತ್ರ ರೂಪಿಸಿದರೆ ಕ್ಷೇತ್ರ ವಶಕ್ಕೆ ಪಡೆಯಲು ಸಾದ್ಯವಾದರೂ ಆಗಬಹುದು. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಯಶವಂತಪುರದಲ್ಲಿ ಜವರಾಯಿಗೌಡ ಪರ ಅನುಕಂಪದ ಅಲೆ ಇದ್ದು, ಸೋಮಶೇಖರ್ ಗೆ ಕಷ್ಟ.. ಜವರಾಯಿಗೌಡಗೆ ಚಾನ್ಸ್ ಸಿಗುವ ನಿರೀಕ್ಷೆ.!

ಯಶವಂತಪುರ ಕ್ಷೇತ್ರದ ಆಕಾಂಕ್ಷಿಗಳ
ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಎಸ್.ಟಿ. ಸೋಮಶೇಖರ್ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎಂಬುವುದು ಕುತೂಹಲಕಾರಿ. ಜೆಡಿಎಸ್ ನಿಂದ ಜವರಾಯಿಗೌಡ ಸ್ಪರ್ಧೆ ಖಚಿತ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version