ವೀರೇಂದ್ರ ಪಪ್ಪಿಗೆ ಇಡಿ ಸಕತ್ತಾಗಿಯೇ ಡ್ರಿಲ್ ಶುರು ಮಾಡಿದೆ. ನೂರಾರು ಕೋಟಿ, ಸಾವಿರಾರು ಕೋಟಿಗಟ್ಟಲೇ ಹಣ ಇದೆ ಅಂತ ಇದೀಗ ಇ.ಡಿ ವೀರೆಂದ್ರ ಪಪ್ಪಿಗೆ ಸೇರಿದ ಎಲ್ಲಾ ಕಡೆ ದಾಳಿ ನಡೆಸಿ ಸೀಜ್ ಮಾಡಿದ್ದಾರೆ. ಹಾಗಾದ್ರೆ ಯಾವೆಲ್ಲಾ ವಿಚಾರಗಳು ಹೊರ ಬಂದಿದೆ.
ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಆನ್ ಲೈನ್ ಗೇಮಿಂಗ್ ಮತ್ತು ಆಫ್ ಲೈನ್ ಬೆಟ್ಟಿಂಗ್ ಧಂದೆ ಆರೋಪ ಪ್ರಕರಣದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಇಡಿ ಕಸ್ಟಡಿ ಅಂತ್ಯವಾಗಿದ್ದು ಮತ್ತೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ರು. ಮೊದಲಿಗೆ ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಮತ್ತೆ ಎರಡನೆ ಬಾರಿ ಆರು ದಿನ ಕಸ್ಟಡಿಗೆ ಪಡೆದಿದ್ದರು. ಇದೀಗ ಮತ್ತೆ ನಾಲ್ಕು ದಿನಗಳ ಕಾಲ ವಿರೇಂದ್ರ ಪಪ್ಪಿಯನ್ನು ಮತ್ತೆ ಕಸ್ಟಡಿಗೆ ಪಡೆದಿದ್ದಾರೆ.ಒಟ್ಟು 11 ದಿನಗಳ ಕಾಲ ಶಾಸಕ ವಿರೇಂದ್ರ ಪಪ್ಪಿಗೆ ಫುಲ್ ಡ್ರಿಲ್ ಮಾಡಿದ್ದು ಇದೀಗ ಮತ್ತೆ ಐದು ದಿನಗಳು ಡ್ರಿಲ್ ಮಾಡಲಿದ್ದಾರೆ.
ವಿಚಾರಣೆ ವೇಳೆ ಮಹತ್ವದ ದಾಖಲೆ-ಗಳನ್ನ ವಶಕ್ಕೆ ಪಡೆದಿರುವ ಇಡಿ ಟೀಂ ಅಲ್ಲದೆ ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ರೇಡ್ ಮಾಡಿದ್ದಾರೆ. ಮೊನ್ನೆ ದಾಳಿ ಮಾಡಿ ಐಶರಾಮಿ ಕಾರುಗಳನ್ನ ಸೀಸ್ ಮಾಡಿದ್ದ ಇಡಿ ಅಧಿಕಾರಿಗಳು. ಅನೇಕ ವಿಚಾರಗಳನ್ನು ಮುಟ್ಟಗೋಲು ಹಾಕಿಕೊಂಡಿರುವ ಅಧಿಕಾರಿಗಳು ಕೋಟಿಗಟ್ಟಲೇ ಹಣ ಸೀಜ್ ಮಾಡಿದ್ದಾರೆ.
ಇಂದು ಸಹ ಕೋರ್ಟ್ ನಲ್ಲಿ ಕೆಲವೊಂದು ಅಂಶಗಳನ್ನು ಎಸ್ಪಿಪಿ ಮತ್ತು ಪಪ್ಪಿ ಪರ ವಕೀಲರು ವಾದ ಪ್ರಚಿವಾದ ಮಾಡಿದ್ದಾರೆ. ಡಿಜಿಟಲ್ ಎವಿಡೆನ್ಸ್ ಕಲೆ ಹಾಕುವ ಕೆಲಸ ಬಾಕಿ ಇದೆ,ಅದಕ್ಕೆ ವೀರೇಂದ್ರ ಪಪ್ಪಿ ಸರಿಯಾಗಿ ಸಹಕರಿಸ್ತಿಲ್ಲ ಹೆಚ್ಚಿನ ತನಿಖೆಗಾಗಿ ಮತ್ತೆ ಕಸ್ಟಡಿಗೆ ನೀಡುವಂತೆ ಇಡಿ ಪರ ವಕೀಲ ಮನವಿ ಮಾಡಿದ್ರು. ನಾವು ಓವರ್ ಟೈಂ ನಲ್ಲಿ ಕೆಲಸ ಮಾಡಿ ತನಿಖೆ ಪೂರ್ಣ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ,ಡಿಜಿಟಲ್ ಎವಿಡೆನ್ಸ್ ಕಲೆ ಹಾಕಲು ಇನ್ನು ಕೆಲ ಸೈಟ್ ಗಳ ಓಪನ್ ಮಾಡಬೇಕಿದೆ, 9 ಬೆಟ್ಟಿಂಗ್ ವೆಬ್ ಸೈಟ್ ಗಳ ದಾಖಲೆ ಸಂಗ್ರಹಿಸಲಾಗಿದೆ,ಇನ್ನೂ ಕೆಲ ಸೈಟ್ ಗಳ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಇಡಿ ವಕೀಲರು ವಾದಿಸಿದ್ರು.ಇನ್ನು ವಿರೇಂದ್ರ ಪಪ್ಪಿ ಪರ ವಕೀಲರು ಇ.ಡಿ ಅಧಿಕಾರಿಗಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಹೀಗಾಗಿ ಅವರಿಗೆ ಡೈರೆಕ್ಷನ್ ನೀಡಿ ಎಂದು ನ್ಯಾಯಾಧೀರ ಮುಂದೆ ಹೇಳಿದ್ದಾರೆ.
ಇದೇ ವೇಳೆ ಮನೆ ಊಟ ನೀಡಲು ಅವಕಾಶ ನೀಡುವಂತೆ ಪಪ್ಪಿ ವಕೀಲರ ಮನವಿ ಮಾಡಿದ್ದಾರೆ.
ಈ ಬಗ್ಗೆ ಯಾವುದೇ ಸೂಚನೆ ನೀಡದ ಜಡ್ಜ್, ಈಗಾಗಲೇ ಹೈಜನಿಕ್ ಊಟ ನೀಡುವಂತೆ ಸೂಚಿಸಲಾಗಿದೆ. ವೈದ್ಯಕೀಯ ತಪಾಸಣೆಗೆ ಸೂಚಿಸಲಾಗಿದೆ. ತಡರಾತ್ರಿ ವಿಚಾರಣೆ ಮಾಡದಂತೆ, ವಕೀಲ ಭೇಟಿಗೆ ಪ್ರತಿದಿನ 30ನಿಮಿಷ ಸೇರಿದಂತೆ ಷರತ್ತು ಹಾಕಲಾಗಿದೆ. ಊಟದ ವಿಚಾರದಲ್ಲಿ ಯಾವುದೇ ಅರ್ಜಿ ಹಾಕದೇ. ವಾದ ಆಲಿಸದೇ ಯಾವುದೇ ಆದೇಶ ಮಾಡಲು ಸಾಧ್ಯವಿಲ್ಲ ಎಂದು ಜಡ್ಜ್ ಹೇಳಿದ್ದಾರೆ. ಒಟ್ಟಿನಲ್ಲಿ ಇಡಿ ಅಧಿಕಾರಿಗಳು ಮಾತ್ರ ಡ್ರಿಲ್ ಮುಂದುವರಿಸೋದಂತು ಸತ್ಯ.