ಕೆರೆಯಲ್ಲಿ ಕಾಲು ಜಾರಿ ಬಿದ್ದು ಅವಳಿ ಮಕ್ಕಳ ದುರ್ಮರಣ

Untitled design 2025 06 19t174741.912

ಆಟವಾಡುತ್ತಿದ್ದ ಅವಳಿ ಮಕ್ಕಳಿಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಮದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತರಾದ ಮಕ್ಕಳನ್ನು ಮುದಸ್ಸಿರ್ ಮತ್ತು ಮುಜಮ್ಮಿಲ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರಗಳ ಪ್ರಕಾರ, ಮಕ್ಕಳು ತಮ್ಮ ಮನೆಯ ಸಮೀಪದಲ್ಲಿರುವ ಕೆರೆಯ ಬಳಿ ಆಟವಾಡುತ್ತಿದ್ದರು. ಆಟದ ಮೈದಾನದಂತೆ ತೋರುವ ಕೆರೆಯ ದಡದಲ್ಲಿ ಓಡಾಡುತ್ತಿದ್ದಾಗ, ಏಕಾಏಕಿ ಕಾಲು ಜಾರಿ ಇಬ್ಬರೂ ಕೆರೆಗೆ ಬಿದ್ದಿದ್ದಾರೆ. ಕೆರೆಯಲ್ಲಿ ನೀರು ತುಂಬಿರುವುದರಿಂದ ಮಕ್ಕಳು ಮುಳುಗಿ, ದುರಂತಕ್ಕೀಡಾಗಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ, ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ.

Exit mobile version