ಹದಿಹರೆಯದ ವಯಸ್ಸಲ್ಲೇ ಪ್ರೀತಿ ಪ್ರೇಮ ಅಂತ ಅಪ್ರಾಪ್ತೆ ಜೊತೆ ಪ್ರಣಯದಾಟ ಆಡಿದ ಆತ ಅದೇನಾಯ್ತೋ ಏನೋ ಕೊನೆಗೆ ಆಕೆಯ ವೇಲ್ ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಇನ್ಸ್ಟಾಗ್ರಾಮ್‌ನಲ್ಲಿ ಮಿಸ್ ಯು “ಚಿನ್ನ” ಅಂತ ಪೋಟೋ ಸಮೇತ ಪೋಸ್ಟ್ ಹಾಕಿ ಸೂಸೈಡ್ ಮಾಡಿಕೊಂಡಿದ್ದಾನೆ.
ಸಾಯುವ ಮುನ್ನ ಮಿಸ್ ಯು ಚಿನ್ನ ಅಂತ ಆಕೆಯೊಂದಿಗಿನ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕೆಯ ವೇಲ್ ನಿಂದಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಹೆಸರು ಚಿರುತ್ ಕುಮಾರ್ ಚಿಕ್ಕಬಳ್ಳಾಪುರ ತಾಲೂಕಿನ ಬಾಲಕುಂಟಹಳ್ಳಿಯ ನಿವಾಸಿ. ಇನ್ನೂ 18 ವರ್ಷ ವಯಸ್ಸು, ಎಸ್ ಎಸ್ ಎಲ್ ಸಿಯಲ್ಲಿ ಒಂದಲ್ಲ ಎರಡಲ್ಲ ಅಂತ ಮೂರು ಬಾರಿ ಫೇಲ್ ಆಗಿದ್ದ ಚಿರುತ್ ಊರಲ್ಲೇ ಕೃಷಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಚಿರುತ್ ಕುಮಾರ್ ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಬಳಿ ಜಮೀನು ಪಕ್ಕದಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ಚಿರುತ್ ಕುಮಾರ್ ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಅನ್ನೋದು ಆರಂಭದಲ್ಲಿ ಸಂಬಂಧಿಕರಿಗೂ ಗೊತ್ತಾಗಿರಲಿಲ್ಲ. ಕೊನೆಗೆ ಆತನ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿದಾಗ ಆತ ಸಾಯುವ ಮುನ್ನ ಅಪ್ರಾಪ್ತ ಬಾಲಕಿಯೊಂದಿಗೆ ಇರುವ ಪೋಟೋಗಳನ್ನ ಹಾಕಿಕೊಂಡಿದ್ದಾನೆ. ಇದರಿಂದ ಪ್ರೇಮ ವೈಫಲ್ಯದಿಂದಲೇ ಚಿರುತ್ ಕುಮಾರ್ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆಯೂ ಎರಡು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಯುವುದಾಗಿ ಚಿರುತ್ ಕುಮಾರ್ ಪೋಸ್ಟ್ ಮಾಡಿದ್ದನಂತೆ. ಆಗ ಸ್ನೇಹಿತರೇ ಹೋಗಿ ಅವನಿಗೆ ಬುದ್ದಿ ಮಾತು ಹೇಳಿ ಮನೆಗೆ ಕರೆದುಕೊಂಡು ಬಂದಿದ್ರಂತೆ. ಆದ್ರೆ ಈಗ ಮೂರನೇ ಬಾರಿ ಸೂಸೈಡ್ ಮಾಡಿಕೊಂಡು ಸಾವಿನ ಮನೆ ಸೇರಿಕೊಂಡಿದ್ದಾನೆ. ಇನ್ನೂ ಅಪ್ರಾಪ್ತ ಬಾಲಕಿ ಚಿರುತ್ ನನ್ನ ಬಿಟ್ಟು ಬೇರೆ ಯಾರೋ ಹುಡುಗನನ್ನ ಪ್ರೀತಿ ಮಾಡುತ್ತಿದ್ದಳಂತೆ, ಚಿರುತ್ ಪೋನ್ ರಿಸೀವ್ ಮಾಡದೆ ಅವೈಡ್ ಮಾಡಿದ್ಲಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾರೆ ಅಪ್ತ ಸ್ನೇಹಿತರು.