ಜಾನಪದ ಗಾಯಕಿ ಸವಿತಾ ಅವರ 14 ವರ್ಷದ ಮಗ ಗಾಂಧಾರ್ ಆತ್ಮಹತ್ಯೆ ಮಾಡಿಕೊಂಡದ್ದು ಆ ಒಂದು ವೆಬ್ ಸಿರೀಸ್‌ನಿಂದ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಸೂಚಿಸಿದ್ದಾರೆ. ಹಾಗಾದರೆ ಆ ವೆಬ್ ಸೀರೀಸ್ ಯಾವುದು? ಅದರಲ್ಲಿ ಸಾಯುವಂತ ನಿರ್ಧಾರ ಮಾಡಲು ಯಾವ ಅಂಶಗಳು ಪ್ರಚೋದಿಸಿತ್ತು? ಇಲ್ಲಿದೆ ಓದಿ.
ಬೆಂಗಳೂರಿನ ಬನಗಿರಿ ನಿವಾಸಿ ಕನ್ನಡ ಕೋಗಿಲೆ ಶೋ ಸ್ಪರ್ಧಿ ಜಾನಪದ ಗಾಯಕಿ ಸವಿತಾ ಮತ್ತು ಗಣೇಶ್ ಪ್ರಸಾದ್ ದಂಪತಿಯ 14 ವರ್ಷದ ಮಗ ಗಾಂಧಾರ್ ಆತ್ಮ*ಹತ್ಯೆ ಮಾಡಿಕೊಂಡ ದುರ್ಘಟನೆಗೆ ಕಾರಣ ವೆಬ್ ಸಿರೀಸ್ ಸಂಬಂಧಿಸಿರಬಹುದು ಎಂದು ಚೆನ್ನಮ್ಮನ ಕೆರೆಅಚ್ಚು ಪೊಲೀಸರು ತನಿಖೆಯಲ್ಲಿ ಸೂಚಿಸಿದ್ದಾರೆ. ಬನಶಂಕರಿಯಲ್ಲಿ ಆತ ಓದುತ್ತಿದ್ದು, ಆಗಸ್ಟ್ 3 ರಾತ್ರಿ ಆತ ನೇಣಿಗೆ ಶರಣಾಗಿದ್ದು, ಮಾರನೇಯ ದಿನ ತಂದೆ ಹಿರಿಯ ಮಗನಿಗೆ ಎಚ್ಚರಿಸಲು ಹೇಳಿದಾಗ ನೇಣಿಗೆ ಶರಣಾಗಿದ್ದು ತಿಳಿದಿದೆ. ಆ ದಿನ ಸವಿತಕ್ಕ ಕಾರ್ಯಕ್ರಮಕ್ಕಾಗಿ ಆಸ್ಟ್ರೇಲಿಯಾದಲ್ಲಿದ್ದರು.
ಗಾಂಧಾರ್ ಬರೆದ ಡೆತ್ ನೋಟ್‌ನಲ್ಲಿ ಏನಿತ್ತು?
ಈ ಪತ್ರ ಓದುತ್ತಿರುವವರು ಅಳಬೇಡಿ, ನಾನು ಈಗಾಗಲೇ ಸತ್ತು ಸ್ವರ್ಗದಲ್ಲಿದ್ದೇನೆ. ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಿಮ್ಮ ಈಗಿನ ಸ್ಥಿತಿ ಹೇಗಿದೆ ಅಂತ ಗೊತ್ತು, ನಿಮಗೆ ನೋವಾಗತ್ತೆ ಅಂತ ಕೂಡ ಗೊತ್ತಿದೆ. ಈ ಮನೆ ಚೆನ್ನಾಗಿರಬೇಕು ಅಂತ ಹೀಗೆ ಮಾಡಿದೆ. ನನ್ನಿಂದ ನೀವು ನೊಂದಿದ್ದೀರಾ? ನಿಮಗೆ ತೊಂದರೆ ಕೊಟ್ಟಿರುವೆ. ನಿಮ್ಮನ್ನು ನೋಯಿಸೋದು ನನ್ನ ಉದ್ದೇಶ ಅಲ್ಲ. ನನ್ನ ಮೇಲೆ ನಿಮಗೆ ಕೋಪ ಇದ್ದರೆ ಕ್ಷಮೆ ಕೇಳುವೆ. ಹದಿನಾಲ್ಕು ವರ್ಷಗಳ ಕಾಲ ನಾನು ಬದುಕಿದ್ದು, ಅದರಲ್ಲಿ ಸಂತೃಪ್ತಿ ಹೊಂದಿದ್ದೇನೆ. ನಾನು ಸ್ವರ್ಗದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ, ಎಲ್ಲರನ್ನೂ ಮಿಸ್ ಮಾಡಿಕೊಳ್ತೀನಿ. ಗುಡ್ ಬೈ.
ಅವನ ಸಾವಿಗೆ ಕಾರಣವಾದ ಆ ವೆಬ್ ಸೀರೀಸ್ ಯಾವುದು? ಅದರಲ್ಲಿ ಏನಿತ್ತು?
Death Note ಅನ್ನುವ ವೆಬ್ ಸೀರೀಸ್ ಗಾಂಧಾರ್ ನೋಡುತ್ತಿದ್ದ, ಜಪಾನೀಸ್ ಭಾಷೆಯ ವೆಬ್ ಸೀರೀಸ್ ಇದಾಗಿದ್ದು ಇದರಿಂದಲೇ ಆತ ಪ್ರೇರಣೆಗೊಂಡು ಆತ್ಮ*ಹತ್ಯೆ ಮಾಡಿಕೊಂಡ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ತನ್ನ ಕೋಣೆಯ ತುಂಬಾ Death Note ಸೀರೀಸ್ ಪಾತ್ರಗಳ ಚಿತ್ರಗಳನ್ನು ಬಿಡಿಸಿದ್ದ. ಆ ಸೀರೀಸ್ ಪಾತ್ರಗಳ ಕುರಿತು ಬರೆದಿದ್ದ ಎನ್ನಲಾಗಿದೆ. ಅದೇ ಅಲ್ಲದೇ 14ರ ಚಿಕ್ಕ ವಯಸ್ಸಿಗೆ ಆಧ್ಯಾತ್ಮದತ್ತ ಸಹ ಪ್ರೇರಿತಗೊಂಡಿದ್ದ ಎನ್ನಲಾಗಿದೆ.
ಲೈಟ್ ಯಾಗಾಮಿ ಎಂಬ 17 ವರ್ಷದ ಪ್ರತಿಭಾವಂತ ವಿದ್ಯಾರ್ಥಿಗೆ “ಡೆತ್ ನೋಟ್” ಎಂಬ ರಹಸ್ಯ ನೋಟ್ಬುಕ್ ಸಿಗುತ್ತದೆ. ಇದರಲ್ಲಿ ಯಾರ ಹೆಸರು ಬರೆದರೂ ಅವರು ಸಾಯುತ್ತಾರೆ. ಲೈಟ್ ನೋಟ್‌ಬುಕ್ ಈ ಬಳಸಿ ಅಪರಾಧಿಗಳನ್ನು ಕೊಲ್ಲಲು ಪ್ರಾರಂಭಿಸಿ, ತನ್ನನ್ನು ಕ್ರೈಮ್-ಫೈಟಿಂಗ್ ದೇವರು (Kira) ಎಂದು ಪರಿಗಣಿಸಿಕೊಳ್ಳುತ್ತಾನೆ. ನೋಟ್‌ಬುಕ್‌ನ ಮಾಲಿಕನಾದ ರಾಕ್ಷಸ (ಶಿನಿಗಾಮಿ) ರ್ಯೂಕ್, ಲೈಟ್‌ನ ವೀಕ್ಷಿಸುತ್ತಾ ಮಾನವರ ಜೀವನದ ಬಗೆಗಿನ ಕುತೂಹಲ ತೋರಿಸುತ್ತಾನೆ. ಇದೇ ಆ ವೆಬ್ ಸೀರೀಸ್‌ನ ಒನ್ ಲೈನ್ ಕಥೆ.