ಇಂದು ನಾಡಿನಲ್ಲೆಡೆ ರಾಮ ನವಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ರಾಮ ಜನ್ಮದಿನದಂದು ಶ್ರೀ ರಾಮನಿಗಾಗಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಮಜ್ಜಿಗೆ, ಕೋಸಂಬರಿ ಮತ್ತು ಪಾನಕ ವಿತರಿಸಿ ರಾಮ ನವಮಿ ಆಚರಿಸಲಾಯಿತು.
ಶ್ರೀ ರಾಮನ ಜನ್ಮದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತೆ. ನಮ್ಮ ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬ ಕಳೆದ ಒಂದು ವಾರದಲ್ಲಿ ಬರುವ ಮೊದಲ ಹಬ್ಬ ಶ್ರೀ ರಾಮ ನವಮಿ. ರಾಮನವಮಿ ಪ್ರಯುಕ್ತ ರಾಜಾಜಿನಗರ ರಾಮ ಮಂದಿರದಲ್ಲಿ ವಿಶೇಷ ಅಲಂಕಾರ,ಪೂಜೆ ಮಾಡಲಾಗಿದೆ. 63 ಅಡಿ ಎತ್ತರದ ರಾಮಾಂಜನೇಯ ಮೂರ್ತಿ ಕಣ್ತುಂಬಿಕೊಳ್ತಿರೋ ಭಕ್ತರು ಬೆಳಗ್ಗೆಯಿಂದಲೇ ರಾಮನ ದರ್ಶನಕ್ಕೆ ಹರಿದು ಬಂದಿದ್ದಾರೆ. ರಾಮ, ಲಕ್ಷ್ಮಣರ ಮೂರ್ತಿಗಳನ್ನ ತೊಟ್ಟಿಲಲ್ಲಿ ತೂಗಿವ ಸೇವೆಯನ್ನು ಆಯೋಜಿಸಲಾಗಿತ್ತು. ವಿಶೇಷ ಅಲಂಕಾರದಿಂದ ಕಂಗೊಳಿಸ್ತಿರೋ ರಾಮನ ವಿಗ್ರಹ.
ರಾಜಧಾನಿಯ ವಿವಿಧ ಕಡೆಗಳಲ್ಲಿ ರಾಮಸಂಭ್ರಮ ಅದ್ದೂರಿಯಾಗಿ ಇದ್ದು, ಬೆಂಗಳೂರಿನ 200ಕ್ಕೂ ಹೆಚ್ಚಿನ ಕಡೆ ರಾಮನವಮಿ ಆಚರಣೆ ಜೋರಾಗಿದೆ. ನಗರದ ರಾಜಾಜಿನಗರ, ನಂದಿನಿ ಲೇಔಟ್ ಸೇರಿದಂತೆ ಹಲವು ಕಡೆ ರಾಮಹಬ್ಬ ಸಂಭ್ರಮ ಮನೆ ಮಾಡಿತ್ತು. ಪ್ರತಿ ಏರಿಯಾಗಳಲ್ಲೂ 50ಕ್ಕಿಂತಲೂ ಹೆಚ್ಚಿನ ಜನ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ 2000ಕ್ಕೂ ಹೆಚ್ಚಿನ ಕೃಷ್ಣನ ಭಕ್ತರಿಂದ ರಾಮನವಮಿ ಆಚರಣೆ. ನಗರದಲ್ಲಿ ಎಲ್ಲೆಲ್ಲೂ ತಾಳ, ನಾದ, ಕುಣಿತದಿಂದ ರಾಮಭಜನೆ ಮಾಡಲಾಯಿತು. ಇಸ್ಕಾನ್ ಮುಖ್ಯಸ್ಥ ಮಧು ಪಂಡಿತ್ ದಾಸ್ ಸಾರಥ್ಯದಲ್ಲಿ ಕಾರ್ಯಕ್ರಮ.
ರಾಮನವಿ ಹಬ್ಬಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ಪ್ರಸಾದ ವಿತರಣೆ ಜೋರಾಗಿ ನಡೆದಿದೆ. ರಾಮನವಮಿ ಅಂದ್ಮೇಲೆ ಪಾನಕನೇ ಫೇಮಸ್. ಬೆಂಗಳೂರು ಗಲ್ಲಿ ಗಲ್ಲಿಯಲ್ಲೂ ಮಜ್ಜಿಗೆ, ಪಾನಕ ವಿತರಣೆ ಮಾಡಿ ಹಬ್ಬ ಆಚರಿಸಿದ್ದಾರೆ.
