ವರದಿ: ಮೂರ್ತಿ, ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರಿನ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ (40) ಎಂಬವರು ಸಾಲಗಾರರ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ನಡೆದಿದೆ.
ಮಧುಸೂದನ್ ಆನ್ಲೈನ್ ಬೆಟ್ಟಿಂಗ್ ಸೇರಿದಂತೆ ಹಲವು ವ್ಯಕ್ತಿಗಳಿಂದ ಸಾಲ ಮಾಡಿದ್ದು, ಸಾಲ ವಾಪಸ್ ಪಡೆಯಲು ಸಾಲಕೊಟ್ಟವರು ಮನೆಗೆ ಬಂದು ನಿಂದಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಧುಸೂದನ್, ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಮೊದಲು ಪತ್ನಿಗೆ ವಾಟ್ಸ್‌ಅಪ್ ಮೂಲಕ ‘ಮನೆಗೆ ಬೇಗ ಬಾ’ ಎಂದು ಸಂದೇಶ ಕಳುಹಿಸಿದ್ದರು. ಮನೆಗೆ ಬಂದ ಪತ್ನಿ ಕಿಟಕಿಯ ಮುಖಾಂತರ ನೋಡಿದಾಗ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬಾಗಿಲು ಮುರಿದು ಒಳ ಪ್ರವೇಶಿಸಿ ಶವವನ್ನು ಹೊರತೆಗೆಯಲಾಯಿತು.
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪತ್ನಿಗೆ ಹಸ್ತಾಂತರಿಸಲಾಯಿತು. ಮೃತ ಮಧುಸೂದನ್,ಪೀಣ್ಯಾದಲ್ಲಿರುವ ಒಂದು ಪ್ರತಿಷ್ಠಿತ ನಂ.1 ದಿನಪತ್ರಿಕೆಯ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಪತ್ನಿ ಹೈಕೋರ್ಟ್ ನಲ್ಲಿ ಸಿಬ್ಬಂದಿಯಾಗಿ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಪತ್ನಿಯೇ ಹೊತ್ತಿದ್ದರೆನ್ನಲಾಗಿದೆ.
ಸ್ಥಳಕ್ಕೆ ಸೀನ್ ಆಫ್ ಕ್ರೈಂ ತಂಡದಿಂದ ಪರಿಶೀಲನೆ, ಪೊಲೀಸರ ನೇತೃತ್ವದಲ್ಲಿ ಮಹಜರು ಕಾರ್ಯ ನಡೆಸಿ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮೂರ್ತಿ, ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ, ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ