ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಪವಿತ್ರಾಗೌಡಗೆ ಅತಿದೊಡ್ಡ ನಿರಾಸೆ..!

BeFunky collage 2026 01 20T142124.456

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ಮನೆಯೂಟದ ಆಸೆಯಲ್ಲಿ ದೊಡ್ಡ ನಿರಾಸೆಯಾಗಿದೆ. ಸೆಷನ್ಸ್ ಕೋರ್ಟ್ ನೀಡಿದ್ದ ಮನೆಯೂಟದ ಅನುಮತಿಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ಪವಿತ್ರಾ ಗೌಡ, ಲಕ್ಷ್ಮಣ್ ಮತ್ತು ನಾಗರಾಜ್ ಈ ಮೂವರು ಆರೋಪಿಗಳಿಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಬೆಂಗಳೂರಿನ ಸೆಷನ್ಸ್ ಕೋರ್ಟ್ ಅನುಮತಿ ನೀಡಿತು. ಆದರೆ ಈ ಆದೇಶಕ್ಕೆ ಕಾರಾಗೃಹ ಇಲಾಖೆ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ  ನೀಡಿದ್ದಾರೆ.

ಸೆಷನ್ಸ್ ಕೋರ್ಟ್ ಆದೇಶದಲ್ಲಿ ವಾರಕ್ಕೊಮ್ಮೆ ಮನೆಯೂಟ ಅನುಮತಿ ನೀಡಲಾಗಿತ್ತು. ಆದರೆ ಕಾರಾಗೃಹ ಇಲಾಖೆಯು ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಮನೆಯೂಟ ಅನುಮತಿ ನೀಡಿದರೆ ಇತರ ಆರೋಪಿಗಳು ಸಹ ಇದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ವಾದಿಸಲಾಯಿತು. ಕೊಲೆ ಪ್ರಕರಣದ ಆರೋಪಿಗಳಿಗೆ ಮನೆಯೂಟ ಸೌಲಭ್ಯ ನೀಡುವುದು ಜೈಲು ನಿಯಮಗಳಿಗೆ ವಿರುದ್ಧ ಎಂದು ಇಲಾಖೆ ತರ್ಕ ಹಾಕಿತು.

ಪರಪ್ಪನ ಅಗ್ರಹಾರ ಜೈಲಿನ ಊಟಕ್ಕೆ FSSAIಯಿಂದ 4 ಸ್ಟಾರ್ ರೇಟಿಂಗ್ ನೀಡಲಾಗಿದೆ ಎಂದು ಕಾರಾಗೃಹ ಇಲಾಖೆ ಒತ್ತಿಹೇಳಿದೆ. ಜೈಲಿನ ಊಟದ ಗುಣಮಟ್ಟದ ಬಗ್ಗೆ ಯಾರೂ ಆಕ್ಷೇಪ ಎತ್ತಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಮನೆಯೂಟದ ಅಗತ್ಯವಿಲ್ಲ ಎಂಬ ನಿಲುವು ತೆಗೆದುಕೊಂಡಿದೆ. ಹೈಕೋರ್ಟ್ ಈ ಮೇಲ್ಮನವಿಯನ್ನು ಪರಿಗಣಿಸಿ ಸೆಷನ್ಸ್ ಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಮನೆಯೂಟಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಿದ್ದರು. ಆದರೆ ಈಗ ಹೈಕೋರ್ಟ್ ಆದೇಶದಿಂದ ಅವರ ಆಸೆ ಮರೀಚಿಕೆಯಾಗಿ ಉಳಿದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿಯಾಗಿದ್ದು, ಜೈಲಿನಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಜೈಲು ನಿಯಮಗಳ ಕಟ್ಟುನಿಟ್ಟು ಪಾಲನೆಯಿಂದ ಇಂತಹ ಬೇಡಿಕೆಗಳಿಗೆ ಬ್ರೇಕ್ ಬೀಳುತ್ತಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಈ ಪ್ರಕರಣದಲ್ಲಿ ಹೈಕೋರ್ಟ್‌ನ ಅಂತಿಮ ನಿರ್ಧಾರ ಏನಾಗುತ್ತದೆ ಎಂಬುದು ಗಮನಾರ್ಹವಾಗಿದೆ. ಸದ್ಯಕ್ಕೆ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಜೈಲು ಊಟವೇ ಗತಿ ಎನಿಸಿದೆ.

Exit mobile version