“ನನ್ನ ಗೆಳತಿ, ನನ್ನ ಗೆಳತಿ” ಎಂಬ ಜನಪ್ರಿಯ ಹಾಡಿನ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಜಾನಪದ ಗಾಯಕ ಮಂಜುನಾಥ್ ಸಂಗಳದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅವರ ಅಗಲಿಕೆಯಿಂದ ಜಾನಪದ ಪ್ರೇಮಿಗಳಿಗೆ ಮತ್ತು ಸಂಗೀತ ಲೋಕಕ್ಕೆ ಆಘಾತ ತಂದಿದೆ.
ಉತ್ತರ ಕರ್ನಾಟಕದ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿಯಾಗಿದ್ದ ಮಂಜುನಾಥ್ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಯಿತು. ಆದರೆ ದುರಾದೃಷ್ಟವಶಾತ್ ಅವರು ಮಾರ್ಗಮಧ್ಯೆ ಮೃತಪಟ್ಟಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಸುದ್ದಿ ಮಂಜುನಾಥ್ ಅವರ ಕುಟುಂಬ, ಬಂಧುಮಿತ್ರರು ಮತ್ತು ಅಭಿಮಾನಿಗಳಲ್ಲಿ ಆಘಾತ ತಂದಿದೆ.
ಕುಟುಂಬಸ್ಥರ ಕಣ್ಣೀರು
ಮಂಜುನಾಥ್ ಅವರಿಗೆ ಪತ್ನಿಯಿದ್ದು, ಆಕೆ ಪ್ರಸ್ತುತ ಆರು ತಿಂಗಳ ಗರ್ಭಿಣಿ ಎಂಬುದಾಗಿ ತಿಳಿದುಬಂದಿದೆ. ಮಗು ಜನಿಸುವ ಮೊದಲು ಪತಿ ಕೈಹಿಡಿಯದೆ ಇಹಲೋಕ ತ್ಯಜಿಸಿದ ಘಟನೆ ಮನಕಲಕುವಂತಾಗಿದೆ. ಮಂಜುನಾಥ್ ಅವರ ಕುಟುಂಬಸ್ಥರ ಆಕ್ರಂದನ ಮು ಮುಟ್ಟಿದೆ.
ಅಂತಿಮ ನಮನ:
ತಾರಿಹಾಳ ಗ್ರಾಮದ ಹೊರವಲಯದಲ್ಲಿ ಮಂಜುನಾಥ್ ಸಂಗಳದ ಅವರಿಗೆ ಸರಳ ವಿಧಿವಿಧಾನದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗ್ರಾಮದ ಜನತೆ, ಸ್ನೇಹಿತರು, ಸಂಗೀತಪ್ರೇಮಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಲು ಉಪಸ್ಥಿತರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಮಾನಿಗಳು ಅವರಿಗೆ ಕಂಬನಿ ಮಿಡಿದಿದ್ದಾರೆ.
ಕಲೆ ಮತ್ತು ಸಾಧನೆ:
ಮಂಜುನಾಥ್ ಸಂಗಳದ ಅವರು ತಮ್ಮ ಸಂಗೀತ ಜೀವನವನ್ನು ಭಜನೆ ಹಾಡುಗಳ ಮೂಲಕ ಆರಂಭಿಸಿದ್ದರು. ಭಕ್ತಿಗೀತೆಗಳ ಮೂಲಕ ಪ್ರಾರಂಭವಾದ ಅವರ ಕಲಾಜೀವನ, ನಂತರ ಜಾನಪದ ಲೋಕದತ್ತ ಗಮನ ಹರಿಸಿದರು. “ನನ್ನ ಗೆಳತಿ, ನನ್ನ ಗೆಳತಿ” ಎಂಬ ಹಾಡು ಮಾತ್ರವಲ್ಲದೇ, “ನನ್ನ ನೋಡಿ ನಗುತಿ” ಎಂಬ ಇನ್ನೊಂದು ಜನಪ್ರಿಯ ಹಾಡು ಕೂಡಾ ಹೌದು.
ಈ ಹಾಡುಗಳು ಯೂಟ್ಯೂಬ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ತಾಣಗಳಲ್ಲಿ ಕೋಟ್ಯಂತರ ವೀಕ್ಷಣೆಯನ್ನು ಪಡೆಯಿತು. ಮಂಜುನಾಥ್ ಅವರ ಸಾಹಿತ್ಯ ಹಾಗೂ ಗಾಯನ ಶೈಲಿ ಅವರನ್ನ ವಿಶಿಷ್ಟ ಗಾಯಕನನ್ನಾಗಿ ರೂಪಿಸಿತ್ತು. ಗ್ರಾಮೀಣ ಬದುಕಿನ ಸ್ಪಂದನ, ಪ್ರೇಮ, ಪಾರಂಪರಿಕ ಮೌಲ್ಯಗಳು ಮತ್ತು ಸಾಮಾನ್ಯ ಜನರ ಅನುಭವಗಳನ್ನು ಅವರು ತಮ್ಮ ಹಾಡುಗಳ ಮೂಲಕ ಹಾಡಿದ್ದರು.
ಸಂಗೀತ ಕ್ಷೇತ್ರದ ಹೊರತಾಗಿಯೂ, ಕೆಲ ದಿನಗಳ ಹಿಂದಷ್ಟೇ ಅವರು ಎಪಿಎಂಸಿ ಚುನಾವಣೆ ಸಂಬಂಧವಾಗಿ ಸುದ್ದಿಗೆ ಬಂದಿದ್ದರು. ಸಾರ್ವಜನಿಕ ಸೇವೆಗೂ ಆಸಕ್ತಿ ಹೊಂದಿದ್ದ ಮಂಜುನಾಥ್, ಕಲೆಯಿಂದಾಗಿ ಜನರ ಹತ್ತಿರವಾಗಿದ್ದರು. ಅವರದ್ದು ಕೇವಲ ಗಾನವಲ್ಲ, ಜನಸೇವೆಯಲ್ಲೂ ಮನಸ್ಸಿತ್ತು.
ಅಂತ್ಯಕ್ರಿಯೆಯ ನಂತರ ಹಲವರು ಮಂಜುನಾಥ್ ಅವರ ಕಲಾಜೀವನವನ್ನು ನೆನೆದು ಕಂಬನಿ ಮಿಡಿದಿದ್ದಾರೆ. “ಅವನ ಹಾಡುಗಳಲ್ಲಿ ಜೀವವಿತ್ತು, ಗ್ರಾಮೀಣ ಪ್ರೇಮ, ನೋವು, ನಗು ಎಲ್ಲವನ್ನೂ ಮೆರೆದಿದ್ದ ಅವನು, ಈಗ ಇಲ್ಲ ಅನ್ನೋದು ನಂಬಲಾಗದು” ಎಂದು ಒಬ್ಬ ಅಭಿಮಾನಿಯೊಬ್ಬ ಬರೆದುಕೊಂಡಿದ್ದಾರೆ.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54