ರಾತ್ರೋ ರಾತ್ರಿ ಮೈಸೂರಲ್ಲಿ ಡ್ರಗ್ಸ್ ಜಾಲ ಭೇದಿಸಿದ ಖಾಕಿ ಪಡೆ

ಮೈಸೂರಿನಲ್ಲಿ ಡ್ರಗ್ಸ್, ಗಾಂಜಾ ವಿರುದ್ಧ ಪೊಲೀಸರ ತೀವ್ರ ಕಾರ್ಯಾಚರಣೆ!

Untitled design (74)

ಮೈಸೂರು: ನಗರದಲ್ಲಿ ಡ್ರಗ್ಸ್ ಮತ್ತು ಗಾಂಜಾ ವಿರುದ್ಧ ಮೈಸೂರು ನಗರ ಪೊಲೀಸರು ತೀವ್ರ ಸಮರ ಸಾರಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಡ್ರಗ್ಸ್ ತಯಾರಿಕಾ ಘಟಕವೊಂದರ ಮೇಲೆ ದಾಳಿ ನಡೆಸಿ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿದ್ದ ಪೊಲೀಸರು, ಇದೀಗ ನಿನ್ನೆ ರಾತ್ರಿ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಗರದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಮೈಸೂರು ನಗರದ ಮಂಡಿ ಮೊಹಲ್ಲ, ಉದಯಗಿರಿ, ಎನ್‌ಆರ್ ಮೊಹಲ್ಲ, ನಜರ್‌ಬಾದ್, ಕೆಆರ್ ಮೊಹಲ್ಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ದಾಳಿಗಳು ನಡೆದಿವೆ. ಡಿಎಸ್‌ಪಿಗಳು, ಎಸಿಪಿಗಳು ಮತ್ತು ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ತಂಡಗಳು ರಚನೆಯಾಗಿದ್ದು, ಗಾಂಜಾ ಮತ್ತು ಡ್ರಗ್ಸ್ ಮಾರಾಟದಲ್ಲಿ ತೊಡಗಿರುವವರನ್ನು ಗುರುತಿಸಲು ತೀವ್ರ ಪರಿಶೀಲನೆ ನಡೆಸಲಾಗಿದೆ.

ಕಮಿಷನರ್ ಸೀಮಾ ಲಾಟ್ಕರ್ ಅವರು ಡ್ರಗ್ಸ್ ಮತ್ತು ಗಾಂಜಾ ಮಾರಾಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ನಗರದಲ್ಲಿ ಯಾವುದೇ ರೀತಿಯ ಡ್ರಗ್ಸ್ ಅಕ್ರಮ ಕಂಡುಬಂದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಅವರು ಹೇಳಿದ್ದಾರೆ. ಈ ಕಾರ್ಯಾಚರಣೆಯು ಮೈಸೂರು ನಗರವನ್ನು ಡ್ರಗ್ಸ್-ಮುಕ್ತವಾಗಿಸುವ ಗುರಿಯನ್ನು ಹೊಂದಿದ್ದು, ಸಾರ್ವಜನಿಕರಿಗೆ ಸಹಕಾರಕ್ಕಾಗಿ ಕರೆ ನೀಡಲಾಗಿದೆ.

Exit mobile version