ವರದಿ: ಮೂರ್ತಿ,ಬೀರಯ್ಯನಪಾಳ್ಯ , ಗ್ಯಾರಂಟಿ ನ್ಯೂಸ್ ನೆಲಮಂಗಲ
ಎಂದಿನಂತೆ ಎಲ್ಲರೂ ಇಂದು ಕೆಲಸಕ್ಕೆ ಹೋಗುವ ತಯಾರಿಯಲ್ಲಿದ್ದರು..ಆದ್ರೆ ಬೆಳ್ಳಂಬೆಳಗ್ಗೆ ಬಂದ ಸುದ್ದಿ ದೊಡ್ಡ ಆಘಾತವನ್ನೇ ತಂದಿದೆ..ಅಷ್ಟಕ್ಕೂ ಆಗಿದ್ದು ಏನು?
ಧಗ-ಧಗಿಸುತ್ತಿರುವ ಅಗ್ನಿಯ ಜ್ವಾಲೆ..ಸುಟ್ಟು ಭಸ್ಮವಾಗಿರುವ ಕೋಟ್ಯಾಂತರ ಮೌಲ್ಯದ ವಸ್ತುಗಳು..ಅಗ್ನಿ ನಂದಿಸಲು ಹರಸಾಹಸ ಪಡುತ್ತಿರುವ ಅಗ್ನಿಶಾಮಕ ಸಿಬ್ಬಂದಿ. ಈ ದೃಶ್ಯಗಳು ಕಂಡು ಬಂದಿದ್ದು ಮಾಚೋಹಳ್ಳಿಯಲ್ಲಿರುವ ಮನೋಜ್ ಮೆಟಲ್ ಕಂಪನಿಯ ಕುಕ್ಕರ್ ತಯಾರಿಸುವ ಫ್ಯಾಕ್ಟರಿಯಲ್ಲಿ ಸೂರ್ಯಹುಟ್ಟುವ ಮೊದಲೇ, ಕುಕ್ಕರ್ ತಯಾರು ಮಾಡುವ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಪರಿಣಾಮ ಇಡೀ ಕಾರ್ಖಾನೆ ಧಗದಗಿಸಿದೆ.
ಬೆಳಿಗ್ಗೆ 6 ಗಂಟೆಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇಡೀ ಕಾರ್ಖಾನೆಗೆ ಬೆಂಕಿ ಆವರಿಸಿಕೊಂಡಿತ್ತು.ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಡುತ್ತಿದ್ದಂತೆ, ಕೂಡಲೇ ಮಾದನಾಯಕನಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಅಗ್ನಿ ನಂಧಿಸುವ ಕಾರ್ಯ ಆರಂಭಿಸಿದ್ರು. ಈ ಬಗ್ಗೆ ಸೆಕ್ಯುರಿಟಿಗಾರ್ಡ್ ಮಧು ಅಲರ್ಟ್ ಮಾಡಿದರು. ಇನ್ನು ಸ್ಥಳಕ್ಕೆ ಬಂದ ಪೊಲೀಸರು ಮಾಲಿಕ ಮನೋಜ್ ಅವರಿಂದ ಮಾಹಿತಿ ಕಲೆಹಾಕಿದ್ದಾರೆ. ತುಂಬಾ ಇಕ್ಕಟ್ಟಾದ ಜಾಗದಲ್ಲಿ ಕಾರ್ಖಾನೆ ಮಾಡಿದ್ದಾರೆ, ಸೂಕ್ತ ವ್ಯವಸ್ಥೆ ಮಾಡಿಲ್ಲ, ಬೇಕಾಬಿಟ್ಟಿ ವಸ್ತುಗಳನ್ನು ಶೇಖರಣೆ ಮಾಡಿದ್ದಾರೆ, ಕಾರ್ಟಾನ್ ಬಾಕ್ಸ್ ರಾಶಿ ತುಂಬಿದ್ದಾರೆ. ಹಾಗಾಗಿ ದಟ್ಟವಾದ ಹೊಗೆ ತುಂಬಿದೆ ಬೆಂಕಿ ಕಂಟ್ರೋಲ್‌ಗೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಅಗ್ನಿಶಾಮಕ ನಾಲ್ಕು ವಾಹನಗಳು ನಿರಂತರವಾಗಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದೆ. ಬೆಂಕಿಯ ಕೆನ್ನಾಲಗೆ ಇರುವ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸದ್ಯಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ವರದಿ: ಮೂರ್ತಿ,ಬೀರಯ್ಯನಪಾಳ್ಯ , ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ,ಬೀರಯ್ಯನಪಾಳ್ಯ , ಗ್ಯಾರಂಟಿ ನ್ಯೂಸ್ ನೆಲಮಂಗಲ